ETV Bharat / sports

ಡಿಯಾಗೊ ಮರಡೊನಾಗಾಗಿ ಮೌನಾಚರಣೆ ಮಾಡಿ ಲಾ ಲಿಗಾ ಪಂದ್ಯಗಳ ಆರಂಭ

ಇತ್ತೀಚೆಗೆ ನಿಧನರಾದ ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್​ ಆಟಗಾರ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಗೌರವಾರ್ಥವಾಗಿ ಮ್ಯಾಡ್ರಿಡ್​ನಲ್ಲಿ ನಡೆಯುತ್ತಿರುವ ಲಾ ಲಿಗಾ ಪಂದ್ಯಗಳ ಆರಂಭಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ಮಾಡಿ ಅಗಲಿದ ಮರಡೋನಾಗೆ ಶ್ರದ್ಧಾಂಜಲಿ ಅರ್ಪಿಸಲಾಗ್ತಿದೆ.

La Liga matches to begin with minute's silence in Maradona's honour
ಡಿಯಾಗೊ ಮರಡೊನಾ
author img

By

Published : Nov 28, 2020, 10:48 AM IST

ಮ್ಯಾಡ್ರಿಡ್​( ಸ್ಪೇನ್​): ಇತ್ತೀಚೆಗೆ ನಿಧನರಾದ ಫುಟ್ಬಾಲ್ ದಂತಕತೆ ಅರ್ಜೆಂಟೀನಾದ ಡಿಯಾಗೋ ಮರಡೋನಾ ಅವರ ಗೌರವಾರ್ಥವಾಗಿ ಒಂದು ನಿಮಿಷದ ಮೌನಾಚಾರಣೆಯೊಂದಿಗೆ ಈ ವಾರಾಂತ್ಯದಲ್ಲಿ ನಡೆಯುವ ಎಲ್ಲ ಲಾ ಲಿಗಾ ಪಂದ್ಯಗಳು ಪ್ರಾರಂಭವಾಗಿವೆ.

ಡಿಯಾಗೋ ಮರಡೋನಾ ಅವರ ಗೌರವಾರ್ಥವಾಗಿ ''ಲಾಲಿಗಾ ಸ್ಯಾಂಟ್ಯಾಂಡರ್ ಮತ್ತು ಲಾಲಿಗಾ ಸ್ಮಾರ್ಟ್‌ಬ್ಯಾಂಕ್‌ನಲ್ಲಿ ಆಡುವ ಎಲ್ಲ ಪಂದ್ಯಗಳ ಮೊದಲು ಒಂದು ನಿಮಿಷ ಮೌನ ವಹಿಸಿ, ಆ ಮೂಲಕ ತನ್ನ ಸಂತಾಪ ಮತ್ತು ಅದರ ಕ್ಲಬ್‌ಗಳನ್ನು ಅವರ ಕುಟುಂಬ, ಸ್ನೇಹಿತರು ಮತ್ತು ಜಗತ್ತಿನ ಎಲ್ಲ ಫುಟ್ಬಾಲ್​​ ಅಭಿಮಾನಿಗಳ ಶ್ರದ್ಧಾಂಜಲಿಯನ್ನು ಡಿಯಾಗೋ ಅವರಿಗೆ ಸಲ್ಲಿಸಲಾಗುತ್ತಿದೆ'' ಎಂದು ಲೀಗ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನಂತರ ಅವರು 1992/93 ರಲ್ಲಿ ಸೆವಿಲ್ಲಾದಲ್ಲಿ ಡಿಯಾಗೋ ಮರಡೋನಾ ಅಭ್ಯಾಸಗಳನ್ನು ವೀಕ್ಷಿಸಲು ಅಭಿಮಾನಿಗಳು ಬೇಗನೆ ಕ್ರೀಡಾಂಗಣಕ್ಕೆ ಬರುತ್ತಿದ್ದರು. ಆ ತಂಡದಲ್ಲಿರುವ ಯುವ ಆಟಗಾರರಾದ ಡಿಯಾಗೋ ಸಿಮಿಯೋನ್ ಅಥವಾ ಪ್ರಸ್ತುತ ಸೆವಿಲ್ಲಾ ಸ್ಪೋರ್ಟಿಂಗ್ ಡೈರೆಕ್ಟರ್ ಮಂಚಿಯ ಮೇಲೂ ಮರಡೋನಾ ಪ್ರಭಾವ ಬೀರಿದ್ದರು. ಇದೇ ವೇಳೆ "ಅವರು ಸೆವಿಲ್ಲಾದಲ್ಲಿ ಅದ್ಭುತ ರೀತಿಯಲ್ಲಿ ನನಗೆ ಸಹಾಯ ಮಾಡಿದರು" ಎಂದು ಸಿಮಿಯೋನ್ ನೆನಪಿಸಿಕೊಂಡಿದ್ದಾರೆ.

ಮರಡೋನನ ಔದಾರ್ಯವನ್ನು ಸಾರುವ ಒಂದು ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. "ನಾನು ಒಂದು ದಿನ ಮರಡೋನಾರೊಂದಿಗೆ ನಡೆದುಕೊಂಡು ಹೋಗುತ್ತಿದ್ದೆ ಮತ್ತು ನನ್ನ ಬಳಿ ರೋಲೆಕ್ಸ್ ಇರುವುದನ್ನು ಅವರು ನೋಡಿದರು. ಆದರೆ, ಅದು ನಕಲಿ ರೊಲೆಕ್ಸ್​ ವಾಚ್​ ಎಂದು ನಾನು ಮರಡೋನಾ ಎದುರು ಒಪ್ಪಿಕೊಂಡೆ. ನಂತರ ನನಗೆ ಡಿಯಾಗೊ ಮರಡೊನಾ ಕಾರ್ಟಿಯರ್ ಅನ್ನು ಉಡುಗೊರೆಯಾಗಿ ನೀಡಿದರು ಎಂದು ನೆನಪಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.