ಸ್ಪೇನ್: ಕೊರೊನಾ ವೈರಸ್ ಭೀತಿಯಿಂದ ಪ್ರೇಕ್ಷಕರಿಲ್ಲದೆ ನಡೆದ ಲಾ ಲೀಗಾ ಫುಟ್ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾರ್ಸಿಲೋನಾ 2-0 ಗೋಲುಗಳಿಂದ ಲೆಗನೆಸ್ ತಂಡವನ್ನು ಮಣಿಸಿ ಶುಭಾರಂಭ ಮಾಡಿದೆ.
ಕೊರೊನಾ ವೈರಸ್ ಭೀತಿಯಿಂದ ಸ್ಪ್ಯಾನಿಷ್ ಲೀಗ್ ಅನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಟೂರ್ನಿ ಪುನಾರಂಭಗೊಂಡಿದ್ದು 99,000 ಕುಳಿತು ನೋಡುವ ಸ್ಟೇಡಿಯಂನಲ್ಲಿ ಅಭಿಮಾನಿಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಲಿಯೋನೆಲ್ ಮೆಸ್ಸಿ ಹಾಗೂ ಅನ್ಶು ಫಾಟಿ ಸಿಡಿಸಿದ ಗೋಲುಗಳಿಂದ ಬಾರ್ಸಿಲೋನಾ ತನ್ನ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸಿದೆ.
ಆಟಗಾರ ಫಾಟಿ, ಪಂದ್ಯದ ಮೊದಲಾರ್ಧದಲ್ಲೇ ಗೋಲುಗಳಿಸಿ ಬಾರ್ಸಿಲೋನಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ 69ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿದ ಅವರು, ಲೀಗ್ನಲ್ಲಿ ತನ್ನ 21ನೇ ಗೋಲು ದಾಖಲಿಸಿದರು. ಇದು ಅವರ ವೃತ್ತಿ ಜೀವನದ 699ನೇ ಗೋಲಾಗಿದೆ.
-
Atop the pecking order. pic.twitter.com/I2QBZC1zTG
— FC Barcelona (@FCBarcelona) June 16, 2020 " class="align-text-top noRightClick twitterSection" data="
">Atop the pecking order. pic.twitter.com/I2QBZC1zTG
— FC Barcelona (@FCBarcelona) June 16, 2020Atop the pecking order. pic.twitter.com/I2QBZC1zTG
— FC Barcelona (@FCBarcelona) June 16, 2020
ಕ್ಯಾಟಲೋನಿಯಾ ಪ್ರತ್ಯೇಕತಾವಾದಿ ಚಳುವಳಿಯ ಮಧ್ಯೆ ಬಾರ್ಸಿಲೋನಾ ಕೊನೆಯ ಬಾರಿಗೆ 2017ರಲ್ಲಿ ಅಭಿಮಾನಿಗಳಿಲ್ಲದೆ ತವರಿನಲ್ಲಿ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ತಂಡ 3-0 ಗೋಲುಗಳಿಂದ ಲಾಸ್ ಪಾಲ್ಮಾಸ್ ತಂಡವನ್ನು ಮಣಿಸಿತ್ತು.