ಕೋಲ್ಕತ್ತಾ: 2021-22 ಆವೃತ್ತಿಯಿಂದ ಇಂಡಿಯನ್ ಸೂಪರ್ ಲೀಗ್ ಪಂದ್ಯಗಳಲ್ಲಿ ವಿದೇಶಿ ಆಟಗಾರರ ನಿಯಂತ್ರಣ 3+1 ಮಾದರಿಯಲ್ಲಿರಲಿದೆ ಎಂದು ಸೋಮವಾರ ಫುಟ್ಬಾಲ್ ಸ್ಪೋರ್ಟ್ಸ್ ಡೆವೆಲೆಪ್ಮೆಂಡ್(ಎಫ್ಎಸ್ಡಿಎಲ್) ಅಧ್ಯಕ್ಷೆ ನೀತಾ ಅಂಬಾನಿ ಭಾಗವಹಿಸಿದ್ದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಏಷ್ಯನ್ ಫುಟ್ಬಾಲ್ ಒಕ್ಕೂಟದ ಸ್ಪರ್ಧೆಯ ಮಾರ್ಗಸೂಚಿಗಳ ಅನ್ವಯ 3(ವಿದೇಶಿ) + 1(ಏಷ್ಯಾ) ವಿದೇಶಿ ಆಟಗಾರರ ಹೊಸ ನಿಯಮ ಜಾರಿಗೆ ಬರಲಿದೆ.
ಎಂಟನೇ ಆವೃತ್ತಿಯಿಂದ, ಐಎಸ್ಎಲ್ ಕ್ಲಬ್ ಕಡ್ಡಾಯವಾಗಿ ಏಷ್ಯನ್ ಮೂಲದ ಒಬ್ಬ ಆಟಗಾರ ಸೇರಿದಂತೆ ತಂಡದಲ್ಲಿ ಗರಿಷ್ಠ ಆರು ವಿದೇಶಿ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದಾಗಿದೆ. ನಾಲ್ಕು ವಿದೇಶಿಯರು ತಂಡದಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ.
"ಭಾರತೀಯ ಆಟಗಾರರಿಗೆ ಹೆಚ್ಚಿನ ಸಮಯವನ್ನು ನೀಡಲು ಈ ಟೂರ್ನಿ ಬಯಸುತ್ತದೆ. ಐಎಸ್ಎಲ್ ಭಾರತೀಯ ಫುಟ್ಬಾಲ್ ಆಟಗಾರರನ್ನು ಉತ್ತೇಜಿಸುವ ಸಲುವಾಗಿ 2000-21ರಿಂದ ಪ್ರತಿಕ್ಲಬ್ 2000ನಂತರ ಜನಿಸಿರುವ ಇಬ್ಬರು ಯುವ ಆಟಗಾರರಿಗೆ ತಂಡದಲ್ಲಿ ಕಡ್ಡಾಯವಾಗಿ ಅವಕಾಶ ನೀಡಬೇಕಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಐಎಎನ್ಎಸ್ಗೆ ಮಾಹಿತಿ ನೀಡಿದ್ದಾರೆ.
ಐಎಎನ್ಎಸ್ ಮಾಹಿತಿಯ ಪ್ರಕಾರ 2020-21ರ ಸೀಸನ್ನಿಂದ ಐಎಸ್ಎಸ್ನಲ್ಲಿ ಭಾಗವಹಿಸುವ ಪ್ರತಿಯೊಂದ ಕ್ಲಬ್ಗಳು ಏಷ್ಯಾದ ಅಂತಾರಾಷ್ಟ್ರೀಯ ಆಟಗಾರರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳಬೇಕಿದೆ. ಪ್ರಸ್ತುತ ಐಎಸ್ಎಲ್ 5 ವಿದೇಶಿ ಆಟಗಾರನನ್ನು ಹೊಂದುವ ಅವಕಾಶ ಪಡೆದಿತ್ತು. ಆದರೆ ಮುಂದಿನ ಅವೃತ್ತಿಯಿಂದ ಅದರಲ್ಲಿ ಒಬ್ಬ ಏಷ್ಯಾದ ಆಟಗಾರ ಕಡ್ಡಾಯವಾಗಿರಬೇಕು.
ಇಲ್ಲಿಯವರಗೆ ಹೆಚ್ಚೆಂದರೆ 25 ಆಟಗಾರರನ್ನು ಹೊಂದಿರಬೇಕು ಎಂಬ ನಿಯಮವನ್ನು ಸಡಿಲಗೊಳಿಸಿದ್ದು, ಮುಂದಿನ ಸೀಸನ್ನಿಂದ 30 ಆಟಗಾರರನ್ನು ಹೊಂದಲು ಕ್ಲಬ್ಗಳಿಗೆ ಅವಕಾಶ ನೀಡಲಾಗಿದೆ.