ETV Bharat / sports

ಐಎಸ್​ಎಲ್ 2020-21: ಇಂದು ಒಡಿಶಾ ಎಫ್​ಸಿಗೆ ಹೈದರಾಬಾದ್​ ಸವಾಲು - ಹೈದರಾಬಾದ್ ಎಫ್​ಸಿ ಲೇಟೆಸ್ಟ್ ನ್ಯೂಸ್

ಬೊಂಬೋಲಿಮ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್​ನ ನಾಲ್ಕನೇ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಮತ್ತು ಹೈದರಾಬಾದ್ ಎಫ್‌ಸಿ ಮುಖಾಮುಖಿಯಾಗುತ್ತಿವೆ

Odisha FC and Hyderabad FC seek fresh start
ಡಿಶಾ ಎಫ್​ಸಿಗೆ ಹೈದರಾಬಾದ್ ಎಫ್​ಸಿ ಸವಾಲು
author img

By

Published : Nov 23, 2020, 1:04 PM IST

ಗೋವಾ: ಇಂದು ನಡೆಯಲಿರುವ ಇಂಡಿಯನ್ ಸೂಪರ್ ಲೀಗ್​ (ಐಎಸ್‌ಎಲ್) ಏಳನೇ ಸೀಸನ್​ನ ನಾಲ್ಕನೇ ಪಂದ್ಯದಲ್ಲಿ, ಒಡಿಶಾ ಎಫ್‌ಸಿ ಬೊಂಬೋಲಿಮ್‌ನ ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಹೈದರಾಬಾದ್ ಎಫ್‌ಸಿ ಎದುರಿಸಲಿದೆ.

ಈ ಋತುವಿನಲ್ಲಿ ಎರಡೂ ತಂಡಗಳು ಉತ್ತಮ ಆರಂಭಕ್ಕಾಗಿ ಎದುರು ನೋಡುತ್ತಿವೆ. ಕಳೆದ ಸೀಸನ್​ನಲ್ಲಿ ಹೈದರಾಬಾದ್ 18 ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿದ್ದರೆ, 12 ಪಂದ್ಯಗಳಲ್ಲಿ ಸೋತಿತ್ತು. ಕಳಪೆ ರಕ್ಷಣೆಯಿಂದಾಗಿ ತಂಡವು 39 ಗೋಲುಗಳನ್ನು ಬಿಟ್ಟು ಕೊಟ್ಟಿತ್ತು. ಒಡಿಶಾ ಎಫ್‌ಸಿ ಕೂಡ 31 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.

ಆದರೆ ಈ ಅಂಕಿ - ಅಂಶಗಳು ನಮ್ಮ ತಂಡಕ್ಕೆ ಕೇವಲ ಸಂಖ್ಯೆ ಮಾತ್ರ ಎಂದು ಒಡಿಶಾ ಎಫ್​ಸಿ ತರಬೇತುದಾರ ಸ್ಟುವರ್ಟ್ ಬಾಕ್ಸ್ಟರ್‌ ಹೇಳಿದ್ದಾರೆ.

"ಅದು ಇತಿಹಾಸ ಮತ್ತು ಅದು ಯಾರಿಗೂ ಸಹಾಯ ಮಾಡುವುದಿಲ್ಲ. ಈಗ ಎರಡೂ ಹೊಸ ತಂಡಗಳಾಗಿವೆ. ಅವರು ಹೊಸ ಆಟಗಾರರನ್ನು ಪಡೆದಿದ್ದಾರೆ ಮತ್ತು ನಾವು ಸಹ ಹೊಸ ಆಟಗಾರರನ್ನು ಹೊಂದಿದ್ದೇವೆ. ಆದ್ದರಿಂದ ಎರಡೂ ತಂಡಗಳು ಬದಲಾಗಿವೆ. ನಾವು ಹೊಸ ಹೈದರಾಬಾದ್ ವಿರುದ್ಧ ಆಡಲಿದ್ದೇವೆ" ಎಂದು ಬಾಕ್ಸ್ಟರ್ ತಿಳಿಸಿದ್ದಾರೆ.

ಕಳೆದ ಸೀಸನ್​ನಲ್ಲಿ ಹೈದರಾಬಾದ್ ಕೇವಲ ಎರಡು ಗೆಲುವುಗಳನ್ನು ದಾಖಲಿಸಿತ್ತು. ಕಳೆದ ಋತುವಿನಲ್ಲಿ ಆಡಿದ ಮೊದಲ ಐದು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.