ಬ್ಯಾಂಬೊಲಿಮ್: ಮೊದಲಾರ್ಧದಲ್ಲೇ 2 ಗೋಲುಗಳಿಸಲು ಯಶಸ್ವಿಯಾದ ಮುಂಬೈ ಸಿಟಿ ತಂಡ ಒಡಿಸಾ ಎಫ್ಸಿ ವಿರುದ್ಧ 2-0 ಗೋಲುಗಳಿಂದ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
30ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯ ಸದುಪಯೋಗ ಪಡಿಸಿಕೊಡ ಮುಂಬೈ ತಂಡದ ಬಾರ್ಥಲೋಮ್ಯೋ ಒಗ್ಬಚೆ ಗೋಲಾಗಿ ಪರಿವರ್ತಿಸಿ ಮುನ್ನಡೆ ದೊರೆಕಿಸಿಕೊಟ್ಟರು,. ಇದರ ಬೆನ್ನಲ್ಲೇ 45 ನಿಮಿಷದಲ್ಲಿ ರೌವ್ಲಿನ್ ಬನೋರ್ಗಸ್ 45 ನೇ ನಿಮಿಷದಲ್ಲಿ ಗೋಲುಗಳಿಸಿ ಮೊದಲಾರ್ಧದಲ್ಲೇ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
-
Rowllin' his way to the Man of the Match award! 💙 #MCFCOFC #AamchiCity 🔵 pic.twitter.com/EoJP2T6hrh
— Mumbai City FC (@MumbaiCityFC) December 6, 2020 " class="align-text-top noRightClick twitterSection" data="
">Rowllin' his way to the Man of the Match award! 💙 #MCFCOFC #AamchiCity 🔵 pic.twitter.com/EoJP2T6hrh
— Mumbai City FC (@MumbaiCityFC) December 6, 2020Rowllin' his way to the Man of the Match award! 💙 #MCFCOFC #AamchiCity 🔵 pic.twitter.com/EoJP2T6hrh
— Mumbai City FC (@MumbaiCityFC) December 6, 2020
ಈ ಗೆಲುವಿನ ಮೂಲಕ ಮುಂಬೈ ಸಿಟಿ ತಂಡ ಎಟಿಕೆ ಮೋಹನ್ ಬಾಗನ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತು. ಮುಂಬೈ ತಂಡ 4 ಪಂದ್ಯಗಳಲ್ಲಿ 3 ಗೆಲುವು ಹಾಗೂ ಒಂದು ಸೋಲಿನೊಂದಿಗೆ 9 ಅಂಕವನ್ನು ಹೊಂದಿದೆ. ಮೋಹನ್ ಬಾಗನ್(4 ಗೋಲು) ಕೂಡ ಇಷ್ಟೇ ಅಂಕವನ್ನು ಹೊಂದಿದ್ದರೂ, ಹೆಚ್ಚು ಗೋಲು(5) ಸಿಡಿಸಿರುವ ಆಧಾರದ ಮೇಲೆ ಅಗ್ರಸ್ಥಾನಕ್ಕೇರಿದೆ.
-
We go down against Mumbai City FC at the Bambolim Stadium. 😞#OdishaFC #AmaTeamAmaGame #HeroISL pic.twitter.com/v6891lHz4T
— Odisha FC (@OdishaFC) December 6, 2020 " class="align-text-top noRightClick twitterSection" data="
">We go down against Mumbai City FC at the Bambolim Stadium. 😞#OdishaFC #AmaTeamAmaGame #HeroISL pic.twitter.com/v6891lHz4T
— Odisha FC (@OdishaFC) December 6, 2020We go down against Mumbai City FC at the Bambolim Stadium. 😞#OdishaFC #AmaTeamAmaGame #HeroISL pic.twitter.com/v6891lHz4T
— Odisha FC (@OdishaFC) December 6, 2020
4 ಪಂದ್ಯಗಳಲ್ಲಿ 3ನೇ ಸೋಲು ಕಾಣುವ ಮೂಲಕ ಕೇವಲ ಒಂದು ಅಂಕ ಹೊಂದಿರುವ ಒಡಿಸ್ಸಾ ಎಫ್ಸಿ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಈಸ್ಟ್ ಬೆಂಗಾಲ್ ತಂಡ ಖಾತೆ ತೆರೆಯದೇ ಕೊನೆಯ ಸ್ಥಾನದಲ್ಲಿ ಮುಂದುವರಿದಿದೆ.