ಗೋವಾ: ಮುಂಬೈ ಸಿಟಿ ಎಫ್‌ಸಿ ತಂಡ ಎಫ್‌ಸಿ ಗೋವಾ ವಿರುದ್ಧದ ಸೆಮಿಫೈನಲ್ನಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ 6-5 ಗೋಲುಗಳಿಂದ ಮಣಿಸಿ 7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಫೈನಲ್ ಪ್ರವೇಶಿಸಿದೆ.
ಸೆಮಿಫೈನಲ್ ಲೆಗ್ ಒನ್ನಲ್ಲಿ 2-2 ಗೋಲುಗಳಿಂದ ಸಮಬಲ ಸಾಧಿಸಿದ್ದ ಎರಡೂ ತಂಡಗಳು ಫೈನಲ್ ಪ್ರವೇಶಿಸಲು ಇಂದಿನ ಪಂದ್ಯ ಪ್ರಮುಖವಾಗಿತ್ತು. ಆದರೆ ಈ ಪಂದ್ಯದಲ್ಲಿ ಗೋಲುಗಳಿಸಲು ಎರಡೂ ತಂಡಗಳು ವಿಫಲವಾದವು. ಫೈನಲ್ಗಾಗಿ ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
ಮೊದಲ 5 ಅವಕಾಶಗಳಲ್ಲಿ ಎರಡೂ ತಂಡಗಳೂ ತಲಾ ಎರಡು ಗೋಲುಗಳನ್ನು ಬಾರಿಸಿ ಮತ್ತೆ ಟೈ ಸಾಧಿಸಿದ್ದರಿಂದ ಮತ್ತೆ 5 ಅವಕಾಶಗಳನ್ನು ನೀಡಲಾಯಿತು. ಇದರಲ್ಲಿ ಮುಂಬೈ 4 ಗೋಲು ಬಾರಿಸಿದರೆ, ಗೋವಾ 3 ಗೋಲು ಬಾರಿಸಿ, ನಾಲ್ಕನೇ ಅವಕಾಶವನ್ನು ಕೈಚೆಲ್ಲಿದ್ದರಿಂದ ಮುಂಬೈ ತಂಡ 6-5ರಿಂದ ಮುನ್ನಡೆ ಪಡೆದು ಫೈನಲ್ ಪ್ರವೇಶಿಸಿತು.
-
After a thrilling penalty shootout victory, @MumbaiCityFC enter their first-ever #ISL final as @FCGoaOfficial's campaign ends in heartbreak! 😮#HeroISL #LetsFootball #IndianFootball pic.twitter.com/xRYV3swuEF
— Indian Football Team (@IndianFootball) March 8, 2021 " class="align-text-top noRightClick twitterSection" data="
">After a thrilling penalty shootout victory, @MumbaiCityFC enter their first-ever #ISL final as @FCGoaOfficial's campaign ends in heartbreak! 😮#HeroISL #LetsFootball #IndianFootball pic.twitter.com/xRYV3swuEF
— Indian Football Team (@IndianFootball) March 8, 2021After a thrilling penalty shootout victory, @MumbaiCityFC enter their first-ever #ISL final as @FCGoaOfficial's campaign ends in heartbreak! 😮#HeroISL #LetsFootball #IndianFootball pic.twitter.com/xRYV3swuEF
— Indian Football Team (@IndianFootball) March 8, 2021
ಮುಂಬೈ ಸಿಟಿ ಎಫ್‌ಸಿ ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ಬಾರಿಸಿದವರು
ಬಾರ್ತಲೋಮೆವ್ ಒಗ್ಬೆಚೆ, ರೇನಿಯರ್ ಫರ್ನಾಂಡಿಸ್, ಅಮೆ ರಾನವಾಡೆ, ಮೌರ್ಟಾಡಾ ಫಾಲ್, ಮಂದರ್ ರಾವ್ ಡೆಸ್ಸಾಯ್, ರೌಲಿನ್ ಬೊರ್ಗೆಸ್.
ಗೋಲು ತಪ್ಪಿಸಿದವರು: ಹರ್ನಾನ್ ಸಂತಾನ, ಹ್ಯೂಗೋ ಬೌಮಸ್, ಅಹ್ಮದ್ ಜಹೌ.
ಎಫ್‌ಸಿ ಗೋವಾ ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ಬಾರಿಸಿದವರು
ಇಗೊರ್ ಅಂಗುಲೋ, ಇವಾನ್ ಗೊನ್ಜಾಲೆಜ್, ಇಶಾನ್ ಪಂಡಿತಾ, ಜಾರ್ಜ್ ಒರ್ಟಿಜ್, ಆದಿಲ್ ಖಾನ್.
ತಪ್ಪಿಸಿದವರು: ಎಡು ಬೆಡಿಯಾ, ಬ್ರಾಂಡನ್ ಫರ್ನಾಂಡಿಸ್, ಜೇಮ್ಸ್ ಡೊನಾಚಿ, ಗ್ಲ್ಯಾನ್ ಮಾರ್ಟಿನ್ಸ್