ದೋಹಾ: 2022 ರ ಫಿಫಾ ವಿಶ್ವಕಪ್ ಮತ್ತು ಏಷ್ಯನ್ ಕಪ್ ಜಂಟಿ ಅರ್ಹತಾ ಪಂದ್ಯಗಳಲ್ಲಿ ಆಡಲು 28 ಸದಸ್ಯರನ್ನೊಳಗೊಂಡ ಭಾರತೀಯ ಫುಟ್ಬಾಲ್ ತಂಡವು ಬುಧವಾರ ದೋಹಾಕ್ಕೆ ಬಂದಿಳಿದ್ದು, ಕತಾರ್ ಫುಟ್‌ಬಾಲ್ ಫೆಡರೇಶನ್ ನಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಆಗಲಿದೆ.
ಈಗಾಗಲೇ ದೋಹಾದಲ್ಲಿ ತಂಡದ ಎಲ್ಲಾ ಸದಸ್ಯರಿಗೂ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಲಾಗಿದ್ದು, ಅದರ ವರದಿ ಬರುವವರೆಗೂ ಕಡ್ಡಾಯವಾಗಿ ಎಲ್ಲಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಕ್ವಾರಂಟೈನ್ ಆಗಬೇಕಿದೆ.
ಭಾರತ ತಂಡವು ಜೂನ್ 3ರಂದು ಏಷ್ಯನ್ ಚಾಂಪಿಯನ್ ಕತಾರ್, ಜೂನ್ 7ರಂದು ಬಾಂಗ್ಲಾದೇಶ ಹಾಗೂ 15ರಂದು ಅಫ್ಗಾನಿಸ್ತಾನ ತಂಡದ ಎದುರು ಕಣಕ್ಕಿಳಿಯಲಿದ್ದು, ಈ ಎಲ್ಲ ಪಂದ್ಯಗಳು ದೋಹಾದ ಜಸ್ಸಿಮ್ ಬಿನ್ ಹಮದ್ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ.