ಲಿವರ್ಪೂಲ್ : ಇಂಗ್ಲೆಂಡ್ ವಿಶ್ವಕಪ್ ವಿಜೇತ ತಂಡದ ಸದಸ್ಯ ಮತ್ತು ಲಿವರ್ಪೂಲ್ ಕ್ಲಬ್ನ ಗರಿಷ್ಠ ಗೋಲು ಸಿಡಿಸಿದ ದಾಖಲೆ ಹೊಂದಿದ್ದ ರೋಜರ್ ಹಂಟ್ ಮಂಗಳವಾರ ನಿಧರಾಗಿದ್ದಾರೆ.
ತಮ್ಮ 83ನೇ ವರ್ಷದಲ್ಲಿ ಕೊನೆಯುಸಿರಿಳೆದಿದ್ದಾರೆ. ಹಂಟ್ ಬಹುತೇಕ ವೃತ್ತಿ ಜೀವನವನ್ನು ಕಳೆದಿದ್ದ ಲಿವರ್ಪೂಲ್ ಕ್ಲಬ್ ಲೆಜೆಂಡರಿ ಫುಟ್ಬಾಲಿಗ ಆನಾರೋಗ್ಯ ಕಾರಣ ಸೋಮವಾರ ನಿಧನರಾಗಿದ್ದಾರೆಂಬ ವಿಷಯವನ್ನು ತಿಳಿಸಿದೆ.
ಹಂಟ್ 1996 ವಿಶ್ವಕಪ್ನಲ್ಲಿ 3 ಗೋಲು ಸಿಡಿಸಿ ಇಂಗ್ಲೆಂಡ್ ಗುಂಪು ಹಂತದಿಂದ ತೇರ್ಗಡೆಯಾಗಲು ನೆರವಾಗಿದ್ದರು. ವಿಂಬ್ಲೇ ಸ್ಟೇಡಿಯಂನಲ್ಲಿ ವೆಸ್ಟ್ ಜರ್ಮನಿ ವಿರುದ್ಧ ನಡೆದಿದ್ದ ಫೈನಲ್ ಪಂದ್ಯ ಸೇರಿದಂತೆ ಎಲ್ಲಾ 6 ಪಂದ್ಯಗಳಲ್ಲೂ ಹಂಟ್ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಇದು ಇಂಗ್ಲೆಂಡ್ ಫುಟ್ಬಾಲ್ನಲ್ಲಿ ಗೆದ್ದಂತ ಏಕೈಕ ಮೇಜರ್ ಟ್ರೋಫಿಯಾಗಿಯೇ ಉಳಿದಿದೆ.
ಇನ್ನು ಹಂಟ್ ಲಿವರ್ಪೂಲ್ ಪರ 1964 ಮತ್ತು 1966ರಲ್ಲಿ ಎರಡೂ ಲೀಗ್ ಟೈಟಲ್ ಗೆದ್ದಿದ್ದಾರೆ. ಅವರು1958 ರಿಂದ 1969ರವರೆಗೆ ಲಿವರ್ಪೂಲ್ ಪರ 492 ಪಂದ್ಯಗಳನ್ನಾಡಿ 285 ಗೋಲುಗಳನ್ನು ಸಿಡಿಸಿದ್ದಾರೆ.
ಇದನ್ನು ಓದಿ:ಭಾರತದ ಕೋಚ್ ಆಗಲು ಕುಂಬ್ಳೆಗೆ ನಿರಾಸಕ್ತಿ, ಗಂಗೂಲಿ ಬಿಟ್ಟು ಉಳಿದ ಸದಸ್ಯರಿಗೂ ಇಷ್ಟವಿಲ್ವಂತೆ!