ಟುರಿನ್ : ಜುವೆಂಟಸ್ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಇತಿಹಾಸದಲ್ಲಿ ಸಾರ್ವಕಾಲಿಕ ಅತ್ಯಧಿಕ ಗೋಲು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರೊನಾಲ್ಡೊ 759 ಗೋಲು ಗಳಿಸಿದ್ದು, ಜೋಸೆಫ್ ಬಿಕಾನ್ ಜೊತೆಗೆ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ. ಸೆರೀ ಎ ಯಲ್ಲಿ ಸಾಸ್ಸುವೊಲೊ ವಿರುದ್ಧ ಗೋಲು ಗಳಿಸಿದ ನಂತರ ಪೋರ್ಚುಗೀಸ್ ಸ್ಟ್ರೈಕರ್ ಈ ಸಾಧನೆ ಮಾಡಿದ್ದಾರೆ.
ರೊನಾಲ್ಡೊ ಪಂದ್ಯದಲ್ಲಿ ಭರ್ಜರಿ ಗೋಲು ಗಳಿಸಿದ ಪರಿಣಾಮವಾಗಿ, ಜುವೆಂಟಸ್ ಪಂದ್ಯವನ್ನು 3-1 ರಿಂದ ಗೆದ್ದು 16 ಪಂದ್ಯಗಳಿಂದ 33 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿತು. ಈ ಗೋಲಿನೊಂದಿಗೆ, ಅಗ್ರ ಐದು ಲೀಗ್‌ಗಳಲ್ಲಿ ಕಳೆದ 15 ಋತುಗಳಲ್ಲಿ 15 ಗೋಲುಗಳನ್ನು ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾದರು.
ಓದಿ : ಟೆಸ್ಟ್ ಕ್ರಿಕೆಟ್ನಲ್ಲಿ 6 ಸಾವಿರ ರನ್ ಪೂರೈಸಿದ ಚೇತೇಶ್ವರ್ ಪೂಜಾರ