ಹೈದರಾಬಾದ್: ಭಾರತದ ಮಾಜಿ ಫುಟ್ಬಾಲ್ ಆಟಗಾರ ಹಾಗೂ ಧ್ಯಾನ್ಚಂದ್ ಅವಾರ್ಡ್ ಪುರಸ್ಕೃತ ಸಯ್ಯದ್ ಶಾಹೀದ್ ಹಕೀಮ್ಗೆ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ದೃಡಪಟ್ಟಿದ್ದು, ಹೈದರಾಬಾದ್ನಲ್ಲಿ ಕ್ವಾರಂಟೈನ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
81 ವರ್ಷದ ಹಕೀಮ್ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 1989 ರವರೆಗೆ ಖತರ್‌ನಲ್ಲಿ ನಡೆದ ಎಎಫ್‌ಸಿ ಏಷ್ಯಾಕಪ್ ಸೇರಿದಂತೆ 1989ರವರೆಗೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರು.
'' ಹೌದು, ನಾನು ಆರು ದಿನಗಳ ಹಿಂದೆ ಕೋವಿಡ್ -19 ಪರೀಕ್ಷೆಗೊಳಗಾಗಿದ್ದೆ . ಅದರಲ್ಲಿ ಪಾಸಿಟಿವ್ ವರದಿ ಬಂದಿದೆ. ರಾಜ್ಯ ಸರ್ಕಾರ ಕ್ವಾರಂಟೈನ್ ಸೆಂಟರ್ ಹಾಗಿ ಬದಲಾಯಿಸುರವ ಹೋಟೆಲ್ ಹೊಂದರಲ್ಲಿ ಇದ್ದೇನೆ" ಎಂದು ಹಕೀಮ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
" ಕಳೆದ ಎರಡು ದಿನಗಳಲ್ಲಿ ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಶೀಘ್ರದಲ್ಲಿ ಚೇತರಿಸಿಕೊಂಡು ಮನೆಗೆ ಹಿಂತಿರುಗುವೆ''ಎಂದು ಅವರು ಹೇಳಿದ್ದಾರೆ.
ತಾವೂ ಕರ್ನಾಟಕದ ಗುಲ್ಬರ್ಗಾಗೆ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ಜ್ವರ ಬಂದಿತ್ತು. ಇದಕ್ಕೆ ಔಷದಿ ತೆಗೆದುಕೊಂಡಿದ್ದೆ. ನಂತರ ನನ್ನ ಎದೆಯ ಎಕ್ಸ್-ರೇ ತೆಗೆದಾಗ ನ್ಯುಮೋನಿಯಾ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಆರು ದಿನಗಳ ಹಿಂದೆ ಕೋವಿಡ್-19 ಪರೀಕ್ಷೆಗೆ ಒಳಗಾದೆ. ಫಲಿತಾಂಶದಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಹಕೀಮ್ ಹೇಳಿದರು.
ಫುಟ್ಬಾಲ್ನಲ್ಲಿ ಅವರು ದೇಶಕ್ಕೆ ನೀಡಿರುವ ಸೇವೆಯನ್ನು ಗಮನಿಸಿ ಹಕೀಮ್ ಅವರಿಗೆ 2017ರಲ್ಲಿ ಧ್ಯಾನ್ ಚಂದ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.