ಬಾರ್ಸಿಲೋನಾ: ಕ್ರಿಸ್ಚಿಯಾನೋ ರೊನಾಲ್ಡೊ ಪ್ರತಿನಿಧಿಸುವ ಜುವೆಂಟಸ್ 3-0 ಗೋಲುಗಳ ಅಂತರದಲ್ಲಿ ಲಿಯೋನೆಲ್ ಮೆಸ್ಸಿಯ ಬಾರ್ಸಿಲೋನಾವನ್ನು ಮಣಿಸಿದೆ. ಮಂಗಳವಾರ ವಿಶ್ವ ಫುಟ್ಬಾಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಪಂದ್ಯದಲ್ಲಿ ಕೊನೆಗೂ ರೊನಾಲ್ಡೊ ತಂಡ ಪ್ರಾಬಲ್ಯ ಮೆರದಿದೆ.
ಬಾರ್ಸಿಲೋನಾದ ಕ್ಯಾಂಪ್ ನೌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜುವೆಂಟಸ್ ತಂಡದ ಸ್ಟಾರ್ ರೊನಾಲ್ಡೊ ಕೇವಲ 13ನೇ ನಿಮಿಷದಲ್ಲಿ ಗೋಲುಗಳಿಸಿ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟರು. ಕೇವಲ 7 ನಿಮಿಷದ ಅಂತರದಲ್ಲಿ ವೆಸ್ಟನ್ ಮೆಕೆನ್ನೀ ಮತ್ತೊಂದು ಗೋಲು ಸಿಡಿಸಿ ಅಂತರವನ್ನು ದ್ವಿಗುಣಗೊಳಿಸಿದರು. 52 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿಯನ್ನು ರೊನಾಲ್ಡೊ ಗೋಲಾಗಿ ಪರಿವರ್ತಿಸುವ ಮೂಲಕ ತಂಡದ ಮುನ್ನಡೆಯನ್ನು 3-0ಗೆ ಏರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
-
Caption this!#UCL pic.twitter.com/ggn5O7xL7O
— UEFA Champions League (@ChampionsLeague) December 8, 2020 " class="align-text-top noRightClick twitterSection" data="
">Caption this!#UCL pic.twitter.com/ggn5O7xL7O
— UEFA Champions League (@ChampionsLeague) December 8, 2020Caption this!#UCL pic.twitter.com/ggn5O7xL7O
— UEFA Champions League (@ChampionsLeague) December 8, 2020
ಜುವೆಂಟಸ್ ಈ ಗೆಲುವಿನ ಮೂಲಕ 6 ಪಂದ್ಯಗಳಲ್ಲಿ 5 ಗೆಲುವು ಮತ್ತು 1 ಸೋಲಿನೊಂದಿದೆ 15 ಅಂಕ ಪಡೆದು ಜಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಇನ್ನು ಇಷ್ಟೇ ಅಂಕ ಹೊಂದಿರುವ ಬಾರ್ಸಿಲೋನಾ ತಂಡ 2ನೇ ಸ್ಥಾನ ಪಡೆದು ಕೊಂಡಿದೆ. ಎರಡು ತಂಡಗಳು ಅಂತಿಮ 16 ಘಟ್ಟಕ್ಕೆ ಪ್ರವೇಶ ಪಡೆದಿವೆ.