ETV Bharat / sports

ಲಿಯಾನ್ ವಿರುದ್ಧ ಗೆಲುವು... ಬುಂಡೆಸ್ಲಿಗಾ ಚಾಂಪಿಯನ್ ಫೈನಲ್ ಪ್ರವೇಶಿಸಿದ ಬೇಯರ್ನ್ ಮ್ಯೂನಿಚ್

ಬುಂಡೆಸ್ಲಿಗಾ ಫುಟ್ಬಾಲ್​​ ಚಾಂಪಿಯನ್​ನ ಎರಡನೇ ಸೆಮಿಫೈನಲ್‌ನಲ್ಲಿ ಬೇಯರ್ನ್ ಮ್ಯೂನಿಚ್ ತಂಡ ಲಿಯಾನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್‌ ಪ್ರವೆಶಿಸಿದೆ.

author img

By

Published : Aug 20, 2020, 12:18 PM IST

Bayern Munich defeat Lyon
ಬುಂಡೆಸ್ಲಿಗಾ ಚಾಂಪಿಯನ್ ಫೈನಲ್ ಪ್ರವೇಶಿಸಿದ ಬೇಯರ್ನ್ ಮ್ಯೂನಿಚ್

ಲಿಸ್ಬನ್: ಜೋಸ್ ಅಲ್ವಾಲೇಡ್ ಕ್ರೀಡಾಂಗಣದಲ್ಲಿ ನಡೆದ ಬುಂಡೆಸ್ಲಿಗಾ ಫುಟ್ಬಾಲ್​​ ಚಾಂಪಿಯನ್​ನ ಎರಡನೇ ಸೆಮಿಫೈನಲ್‌ನಲ್ಲಿ ಬೇಯರ್ನ್ ಮ್ಯೂನಿಚ್ ತಂಡ ಲಿಯಾನ್ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಫೈನಲ್‌ ಪ್ರವೆಶಿಸಿದೆ.

ಈ ಫಲಿತಾಂಶದೊಂದಿಗೆ, ಆಗಸ್ಟ್ 23 ರ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್ ತಂಡವು ಪ್ಯಾರಿಸ್ ಸೇಂಟ್ - ಜರ್ಮೈನ್ ಅವರನ್ನು ಎದುರಿಸಲಿದೆ.

ಪಂದ್ಯ ಆರಂಭವಾದ 18ನೇ ನಿಮಿಷದಲ್ಲಿ ಮೊದಲ ಗೋಲನ್ನು ಸೆರ್ಜ್ ಗ್ನಾಬ್ರಿ ಗಳಿಸಿದರು. ಇದರ ಪರಿಣಾಮವಾಗಿ ಬೇಯರ್ನ್ ಮ್ಯೂನಿಚ್ ಮುನ್ನಡೆ ಸಾಧಿಸಿತು. ಗ್ನಾಬ್ರಿ 33ನೇ ನಿಮಿಷದಲ್ಲಿ ಬೇಯರ್ನ್ ಪರ ಮತ್ತೊಂದು ಗೋಲು ಗಳಿಸಿದರು. ಮೊದಲಾರ್ಧದಲ್ಲಿ ತಂಡಕ್ಕೆ 2-0 ಮುನ್ನಡೆ ನೀಡಿದರು. ದ್ವಿತೀಯಾರ್ಧದಲ್ಲಿ, ಬೇಯರ್ನ್ ತಂಡ ಎದುರಾಳಿಗಳ ಮೇಲಿನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದರು. ಸ್ಥಿರವಾದ ಆಕ್ರಮಣಕಾರಿ ಆಟದಿಂದ ಲಿಯಾನ್​ ತಂಡಕ್ಕೆ‌ ಗೋಲು ಗಳಿಸಲು ಅವಕಾಶ ನೀಡಲಿಲ್ಲ.

ರಾಬರ್ಟ್ ಲೆವಾಂಡೋವ್ಸ್​ಕಿ ಅವರು 88 ನೇ ನಿಮಿಷದಲ್ಲಿ ಗೋಲು ಗಳಿಸಿ ಬೇಯರ್ನ್ ಮ್ಯೂನಿಚ್‌ಗೆ ಪಂದ್ಯದಲ್ಲಿ 3-0 ಅಂತರದ ಜಯ ತಂದುಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.