ಫುಟ್ಬಾಲ್ ಅಂಗಳದಲ್ಲಿ ಅತ್ಯಂತ ಬೇಡಿಕೆಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಬರೋಬ್ಬರಿ 12 ವರ್ಷದ ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಸೇರ್ಪಡೆಯಾಗಿದ್ದಾರೆ. ಅದು ಸಹ ತಮ್ಮ ಹಿಂದಿನ ಕ್ಲಬ್ನ ಅವಧಿ ಮುಗಿಯುವ ಮುನ್ನವೇ ಈ ನಿರ್ಧಾರಕ್ಕೆ ಬಂದಿದ್ದು, ಫುಟ್ಬಾಲ್ ಅಭಿಮಾನಿಗಳಲ್ಲಿ ತುಕೂಹಲ ಮೂಡಿಸಿದೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪ್ರತಿಕ್ರಿಯಿಸಿರುವ ರೊನಾಲ್ಡೊ, ನಾನು ಎಲ್ಲಿಗೆ ಸೇರಿದ್ದೆನೋ ಅಲ್ಲಿಗೆ ಮರಳಿದ್ದೇನೆ ಎಂದಿದ್ದಾರೆ. ಇತಿಹಾಸವನ್ನು ಹಿಂದೆ ಬರೆಯಲಾಗಿತ್ತು. ಅದೇ ಇತಿಹಾಸ ಮತ್ತೆ ಬರೆಯಲಾಗ್ತಿದೆ ಎಂದಿದ್ದಾರೆ. 18 ವರ್ಷದವನಾಗಿದ್ದ ರೊನಾಲ್ಡೊ ಮೊದಲ ಬಾರಿಗೆ ಮ್ಯಾಂಚೆಸ್ಟರ್ ಯುನೈಟೆಡ್ನಲ್ಲಿ ಆಡಿದ್ದರು. ಇದಾದ ಬಳಿ ಅವರು ಹಿಂತಿರುಗಿ ನೋಡಿಯೇ ಇಲ್ಲ.
ಕನಸಿನಂತೆ ಬಾಸವಾಗ್ತಿದೆ
’’ನಾನೀಗ ಎಲ್ಲ ಭಾವನೆಗಳನ್ನು ವಿವರಿಸಲು ಸಾಧ್ಯವಿಲ್ಲ, ಏಕೆಂದರೆ ನಾನು ಓಲ್ಡ್ ಟ್ರಾಫರ್ಡ್‌ಗೆ ಹಿಂದಿರುಗುವುದನ್ನು ಘೋಷಿಸಿದ್ದೇನೆ’’ ಎಂದು ರೊನಾಲ್ಡೊ ಬರೆದುಕೊಂಡಿದ್ದಾರೆ. ನನಗಿದು ಕನಸಿನಂತ ಕಾಣುತ್ತಿದೆ. ನಾನು ಮ್ಯಾಂಚೆಸ್ಟರ್ ವಿರುದ್ಧವಾಗಿ ಕಣಕ್ಕಿಳಿದಾಗಲೂ ಎದುರಾಳಿಗರಬಹುದು ಹಾಗೂ ಸ್ಟ್ಯಾಂಡ್ನಲ್ಲಿರುವ ಪ್ರೇಕ್ಷಕರು ನನಗೆ ಪ್ರೀತಿ ತೋರಿಸಿದ್ದಾರೆ. ಆದ್ರೆ ಈಗ ಇದು ಕನಸಿನಂತೆ ಅನುಭವವಾಗ್ತಿದೆ ಎಂದು ಬಣ್ಣಿಸಿಕೊಂಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಶುಕ್ರವಾರ ಜುವೆಂಟಸ್ ಕ್ಲಬ್ನೊಂದಿಗೆ 23 ಮಿಲಿಯನ್ ಯೂರೋ ಒಪ್ಪಂದ ಮಾಡಿಕೊಂಡು ರೊನಾಲ್ಡೊ ಅವರನ್ನು 2 ವರ್ಷಗಳ ಅವಧಿಗೆ ವರ್ಗಾವಣೆ ಮಾಡಿಕೊಂಡಿತ್ತು. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ 5 ಬಾರಿ ಬಲೋನ್ ಡಿ'ಓರ್ ವಿಜೇತ ಅಧಿಕೃತವಾಗಿ ಜುವೆಂಟಸ್ಗೆ ಗುಡ್ ಬೈ ಹೇಳಿ ತಮ್ಮ ವೃತ್ತಿ ಜೀವನ ಆರಂಭಿಸಿದ ಕ್ಲಬ್ಗೆ ಮರಳಿದ್ದಾರೆ.