ETV Bharat / sports

ಅರ್ಜುನ್ ಅವಾರ್ಡ್​ಗೆ ಫುಟ್​ಬಾಲ್ ಪ್ಲೇಯರ್ಸ್‌​ ಜಿಂಗಾನ್, ಎನ್‌.ಬಾಲಾದೇವಿ ಹೆಸರು ಶಿಫಾರಸು.. - ಫುಟ್​ಬಾಲ್​ಪಟುಗಳಾದ ಜಿಂಗಾನ್‌ ಮತ್ತು ಫಾರ್ವರ್ಡ್‌ ಎನ್‌.ಬಾಲಾದೇವಿ

ನಾವು ಜಿಂಗಾನ್​ ಮತ್ತು ಬಾಲಾದೇವಿಯವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದೇವೆ. ಒಬ್ಬ ಪುರುಷ ಹಾಗೂ ಒಬ್ಬಮಹಿಳಾ ಆಟಗಾರ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ಎಐಎಫ್​ಎಫ್​ ಪ್ರ. ಕಾರ್ಯದರ್ಶಿ ಕುಶಾಲ್​ ದಾಸ್​ ಮಾಧ್ಯಮಕ್ಕೆ ತಿಳಿಸಿದ್ದಾರೆ..

ಅರ್ಜುನ ಅವಾರ್ಡ್​ಗೆ ಫುಟ್​ಬಾಲ್​ಪಟುಗಳಾದ ಜಿಂಗಾನ್‌ ಮತ್ತು ಫಾರ್ವರ್ಡರ್​‌ ಎನ್‌.ಬಾಲಾದೇವಿ ಹೆಸರು ಶಿಫಾರಸ್ಸು

author img

By

Published : May 13, 2020, 12:45 PM IST

ನವದೆಹಲಿ : ರಾಷ್ಟ್ರೀಯ ತಂಡದ ಸೆಂಟ್ರಲ್​ ಡಿಫೆಂಡರ್​ ಆಟಗಾರ ಸಂದೇಶ್‌ ಜಿಂಗಾನ್‌ ಮತ್ತು ಮಹಿಳಾ ತಂಡದ ಫಾರ್ವರ್ಡ್‌ ಎನ್‌ ಬಾಲಾದೇವಿ ಅವರ ಹೆಸರನ್ನು ಆಲ್​ ಇಂಡಿಯಾ ಫುಟ್‌ಬಾಲ್‌ ಫೆಡರೇಷನ್‌ನ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ಮೇ 5ರಂದು ಕೇಂದ್ರ ಕ್ರೀಡಾ ಸಚಿವಾಲಯ ಈ ವರ್ಷದ ಕ್ರೀಡಾ ಪುರಸ್ಕಾರಕ್ಕಾಗಿ ಕ್ರೀಡಾಪಟುಗಳ ಹೆಸರುಗಳನ್ನು ಸಲ್ಲಿಸುವಂತೆ ಕ್ರೀಡಾ ಸಂಸ್ಥೆಗಳಿಗೆ ಆದೇಶ ನೀಡಿತ್ತು.

ಬಾಲಾದೇವಿ
ಬಾಲಾದೇವಿ

ಇತ್ತೀಚಿನ ವರ್ಷಗಳಲ್ಲಿ ತೋರಿದ ಗಮನಾರ್ಹ ಸಾಧನೆ ಮತ್ತು ಸ್ಥಿರ ಪ್ರದರ್ಶನಗಳಿಗೆ ಮನ್ನಣೆ ನೀಡಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಸಂದೇಶ್‌ ಮತ್ತು ಬಾಲಾ ದೇವಿ ಅವರ ಹೆಸರುಗಳನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಕುಶಲ್‌ ದಾಸ್‌ ತಿಳಿಸಿದ್ದಾರೆ.

ನಾವು ಜಿಂಗಾನ್​ ಮತ್ತು ಬಾಲಾದೇವಿಯವರ ಹೆಸರುಗಳನ್ನುಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದೇವೆ. ಒಬ್ಬ ಪುರುಷ ಹಾಗೂ ಒಬ್ಬಮಹಿಳಾ ಆಟಗಾರ್ತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದು ಎಐಎಫ್​ಎಫ್​ ಪ್ರಧಾನ ಕಾರ್ಯದರ್ಶಿ ಕುಶಾಲ್​ ದಾಸ್​ ಮಾಧ್ಯಮಕ್ಕೆ ತಿಳಿಸಿದ್ದಾರೆ.

26 ವರ್ಷದ ಜಿಂಗಾನ್​ ಭಾರತದ ಫುಟ್​ಬಾಲ್​ ದಂತಕತೆ ಭೈಚುಂಗ್​ ಭುಟಿಯಾ ಹಾಗೂ ಸಿಕ್ಕಿಮ್​ ಯುನೈಟೆಡ್​ನ ರೆನ್ನೆಡಿ ಸಿಂಗ್ ಜೊತೆ ಆಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತ ತಂಡದ ಸುನಿಲ್​ ಚೆಟ್ರಿ ಬಿಟ್ಟರೆ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.