ETV Bharat / sports

ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಶಿಪ್‌: ಇರಾನ್‌ ವಿರುದ್ಧ ಮೊದಲ ಗೆಲುವಿಗೆ ಗೋಕುಲಂ ಕೇರಳ ಎಫ್‌ಸಿ ರಣತಂತ್ರ - Aqaba

ಜೋರ್ಡಾನ್‌ನ ಅಕಾಬಾದಲ್ಲಿ ನಡೆಯುತ್ತಿರುವ ಎಎಫ್‌ಸಿ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿಂದು ಭಾರತದ ಗೋಕುಲಂ ಕೇರಳ ಎಫ್‌ಸಿ ಹಾಗೂ ಇರಾನ್‌ನ ಶಹರ್ದರಿ ಸಿರ್ಜಾನ್ ಪೈಪೋಟಿ ನಡೆಸಲಿವೆ. ಅಕಾಬಾ ಡೆವಲಪ್‌ಮೆಂಟ್ ಕಾರ್ಪೊರೇಟ್ ಕ್ರೀಡಾಂಗಣದಲ್ಲಿಂದು ಪಂದ್ಯ ನಡೆಯಲಿದ್ದು, ಗೋಕುಲಂ ಕೇರಳ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

AFC Club C'ship: Gokulam Kerala eye maiden win against Shahrdari Sirjan
ಎಎಫ್‌ಸಿ ಮಹಿಳಾ ಕ್ಲಬ್‌ ಚಾಂಪಿಯನ್‌ಶಿಪ್‌: ಇರಾನ್‌ನ ಶಹರ್ದರಿ ಸಿರ್ಜಾನ್ ವಿರುದ್ಧ ಮೊದಲ ಗೆಲುವಿಗೆ ಗೋಕುಲಂ ಕೇರಳ ಎಫ್‌ಸಿ ರಣತಂತ್ರ
author img

By

Published : Nov 10, 2021, 1:35 PM IST

ಅಕಾಬಾ (ಜೋರ್ಡಾನ್): ಎಎಫ್‌ಸಿ ಮಹಿಳಾ ಕ್ಲಬ್ ಚಾಂಪಿಯನ್‌ಶಿಪ್‌ನಲ್ಲಿ ಅಕಾಬಾ ಡೆವಲಪ್‌ಮೆಂಟ್ ಕಾರ್ಪೊರೇಟ್ ಕ್ರೀಡಾಂಗಣದಲ್ಲಿಂದು ಭಾರತದ ಗೋಕುಲಂ ಕೇರಳ ಎಫ್‌ಸಿ ಹಾಗೂ ಇರಾನ್‌ನ ಶಹರ್ದರಿ ಸಿರ್ಜಾನ್ ಮುಖಾಮುಖಿಯಾಗಲಿವೆ. ಮೊದಲ ಗೆಲುವಿಗಾಗಿ ಗೋಕುಲಂ ಕೇರಳ ಎಫ್‌ಸಿ ರಣತಂತ್ರಗಳನ್ನು ರೂಪಿಸಿದೆ.

ತನ್ನ ಮೊದಲ ಪಂದ್ಯದಲ್ಲಿ ಜೋರ್ಡಾನ್‌ನ ಅಮ್ಮನ್ ಕ್ಲಬ್ ವಿರುದ್ಧ ಗೋಕುಲಂ ಕೇರಳ 1-2 ಅಂತರದಿಂದ ಸೋಲು ಅನುಭವಿಸಿತ್ತು. ಅಮ್ಮನ್ ತಂಡದ ವಿರುದ್ಧ ಉತ್ತಮ ಆರಂಭ ಪಡೆದಿತ್ತು. ಎಲ್ಶದ್ದೈ ಅಚೆಂಪಾಂಗ್ ಅವರ ಉತ್ತಮ ದಾಳಿಯಿಂದಾಗಿ ಮೊದಲಾರ್ಧದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಎರಡು ಬಾರಿ ಅವಕಾಶ ಬಿಟ್ಟುಕೊಟ್ಟಿದ್ದರಿಂದ ಅಮ್ಮನ್‌ಗೆ ಮುನ್ನಡೆ ದೊರೆಯಿತು. ಮೇಸಾ ಮತ್ತು ಸಮಿಯಾ ಔನಿ ಅವರ ಸ್ಟ್ರೈಕ್‌ಗಳು ಜೋರ್ಡಾನಿಯನ್ನರ ವಿಜಯದ ಹಾದಿ ಸುಗಮಗೊಳಿಸಿತು.

ಅಮ್ಮಾನ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾವು ನಮ್ಮ ಕೆಲವು ಅವಕಾಶಗಳನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಅದು ಪಂದ್ಯದಲ್ಲಿ ನಮಗೆ ದುಬಾರಿ ಎನಿಸಿತು ಎಂದು ಗೋಕುಲಂ ಕೇರಳ ಫುಟ್ಬಾಲ್‌ ಕ್ಲಬ್‌ನ ಮುಖ್ಯ ಕೋಚ್ ಪ್ರಿಯಾ ಪಿವಿ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.