ಹೈದರಾಬಾದ್: 15ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಂಡಿದೆ. ಇದರ ಮಧ್ಯೆ ಕೆಲ ಆಟಗಾರರ ಫನ್ನಿ ವಿಡಿಯೋಗಳು ಆಯಾ ಫ್ರಾಂಚೈಸಿಗಳ ಟ್ವಿಟ್ಟರ್ ಅಕೌಂಟ್ನಲ್ಲಿ ಹರಿದಾಡ್ತಿವೆ. ಈ ಸಂದರ್ಭದಲ್ಲಿ ರಾಜಸ್ಥಾನ ರಾಯಲ್ಸ್ ಸೇರಿಕೊಂಡಿರುವ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಯಾರಿಗೂ ಗೊತ್ತಿಲ್ಲದ ಸಂಗತಿವೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ.
-
Royals’ comeback stories ke saath, aapke agle 7 minutes hum #SambhaalLenge 💗#RoyalsFamily | #HallaBol | @goeltmt pic.twitter.com/RjsLuMcZhV
— Rajasthan Royals (@rajasthanroyals) April 7, 2022 " class="align-text-top noRightClick twitterSection" data="
">Royals’ comeback stories ke saath, aapke agle 7 minutes hum #SambhaalLenge 💗#RoyalsFamily | #HallaBol | @goeltmt pic.twitter.com/RjsLuMcZhV
— Rajasthan Royals (@rajasthanroyals) April 7, 2022Royals’ comeback stories ke saath, aapke agle 7 minutes hum #SambhaalLenge 💗#RoyalsFamily | #HallaBol | @goeltmt pic.twitter.com/RjsLuMcZhV
— Rajasthan Royals (@rajasthanroyals) April 7, 2022
2013ರಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಇದ್ದಾಗ ಕುಡಿದ ಮತ್ತಿನಲ್ಲಿದ್ದ ಆಟಗಾರನೋರ್ವ ತನ್ನನ್ನು ಕಟ್ಟಡದ 15ನೇ ಮಹಡಿಯಿಂದ ನೇತಾಡಿಸಿದ್ದ ಎಂಬ ಅಚ್ಚರಿಯ ವಿಷಯ ಬಿಚ್ಚಿಟ್ಟರು. ಈ ವೇಳೆ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇನೆಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೊರಿಯಾ ಓಪನ್: ಸೆಮಿಫೈನಲ್ಗೆ ಲಗ್ಗೆ ಹಾಕಿದ ಶ್ರೀಕಾಂತ್, ಸಿಂಧು
ರಾಜಸ್ಥಾನ ರಾಯಲ್ಸ್ ತಂಡದ ಇತರೆ ಆಟಗಾರರಾದ ಆರ್.ಅಶ್ವಿನ್ ಹಾಗೂ ಕರುಣ್ ನಾಯರ್ ಜೊತೆ ಯಜುವೇಂದ್ರ ಚಹಲ್ ತಮ್ಮ ಕಮ್ಬ್ಯಾಕ್ ಸ್ಟೋರಿ ವಿವರಿಸುತ್ತಿದ್ದಾಗ ಈ ಘಟನೆ ನೆನೆದಿದ್ದಾರೆ. 'ಈ ಘಟನೆ ಬಗ್ಗೆ ನಾನು ಯಾವತ್ತೂ ಮಾತನಾಡಿಲ್ಲ. ಬೆಂಗಳೂರಿನಲ್ಲಿ ಪಂದ್ಯವೊಂದನ್ನು ಆಡಿದ್ದೆವು. ಇದಾದ ಬಳಿಕ ಗೆಟ್ ಟುಗೆದರ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಓರ್ವ ಆಟಗಾರ ತುಂಬಾ ಮದ್ಯಪಾನ ಮಾಡಿದ್ದರು. ಅವರು ನನ್ನನ್ನು ಕರೆದುಕೊಂಡು ಹೋಗಿ, ಬಾಲ್ಕನಿಯಲ್ಲಿ ನೇತಾಕಿದ್ದರು. ಆ ವೇಳೆ ಇತರರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಇದಾದ ಬಳಿಕ ಹೊರಗಡೆ ಹೋದಾಗ ನಾವು ಎಷ್ಟೊಂದು ಜವಾಬ್ದಾರರಾಗಿರಬೇಕು ಎಂಬುದರ ಬಗ್ಗೆ ನನಗೆ ಮನವರಿಕೆಯಾಯಿತು ಎಂದು ತಿಳಿಸಿರುವ ಚಹಲ್, ಆಟಗಾರನ ಹೆಸರು ಮಾತ್ರ ರಿವಿಲ್ ಮಾಡಿಲ್ಲ. ಸುಮಾರು 13 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದ ಯಜುವೇಂದ್ರ ಚಹಲ್ ಈ ಸಲದ ಮೆಗಾ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಸೇರಿಕೊಂಡಿದ್ದಾರೆ. ಈವರೆಗೆ ಆಡಿರುವ ಮೂರು ಪಂದ್ಯಗಳಿಂದ ಏಳು ವಿಕೆಟ್ ಪಡೆದುಕೊಂಡು ಗಮನ ಸೆಳೆದಿದ್ದಾರೆ.