ನವದೆಹಲಿ : ಭಾರತ ತಂಡ ಎರಡು ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇದೀಗ ಮತ್ತೊಂದು ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ವೃತ್ತಿ ಜೀವನದಲ್ಲಿ ಮೊದಲ ಶತಕ ಸಿಡಿಸಿದ ಬ್ಯಾಟ್ ಅಂತರಿಕ್ಷ ಯಾನ ಮಾಡುವ ಮೂಲಕ ವಿಶೇಷ ಗೌರವಕ್ಕೆ ಪಾತ್ರವಾಗಿದೆ.
ಏಷ್ಯಾದ ಬಹುದೊಡ್ಡ ಮಾರ್ಕೆಟ್ ಕಲೆಕ್ಷನ್ ಸಂಸ್ಥೆ ಎನ್ಎಫ್ಟಿ(NFT) ಲೆಜೆಂಡರಿ ಕ್ರಿಕೆಟರ್ ಬ್ಯಾಟನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಅಂತರಿಕ್ಷಕ್ಕೆ ತೆರಳಿದ ಮೊದಲ ಬ್ಯಾಟ್ ಎಂಬ ಹೆಗ್ಗಳಿಕೆಗೆ ಯುವರಾಜ್ ಸಿಂಗ್ ಮೊದಲ ಶತಕದ ಬ್ಯಾಟ್ ಪಾತ್ರವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಂಸ್ಥೆಯ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.
- " class="align-text-top noRightClick twitterSection" data="">
ಭೂಮಿಯಿಂದ ಕಕ್ಷೆಗೆ ಉಡಾವಣೆ ಮಾಡಿದ ಹಾಟ್ ಏರ್ ಬಲೂನ್ ಯುವರಾಜ್ ಸಿಂಗ್ ಅವರ ಮೊದಲ ಶತಕದ ಬ್ಯಾಟ್ ಹೊತ್ತೊಯ್ದಿತು. ಈ ವಿಶೇಷ ವಿಡಿಯೋವನ್ನು ಯುವಿಯ ಅಭಿಮಾನಿಗಳಿಗೆ ಸಮರ್ಪಿಸಲಾಗಿದೆ. ಈ ಅಂತರಿಕ್ಷಯಾನದ ಸಂಪೂರ್ಣ ವಿಡಿಯೋವನ್ನು ಶೀಘ್ರದಲ್ಲೇ Colexionನ ಅಧಿಕೃತ ವೆಬ್‌ಸೈಟ್‌ನಲ್ಲಿ ಶೇರ್ ಮಾಡಲಾಗುತ್ತದೆ.
2003ರಲ್ಲಿ ಬಾಂಗ್ಲಾದೇಶದ ವಿರುದ್ಧ ಯುವಿ ಮೊದಲ ಶತಕ
ಯುವಿ 2003ರಲ್ಲಿ ಢಾಕಾ ಸ್ಟೇಡಿಯಂನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ತಮ್ಮ ಮೊದಲ ಶತಕ ಸಿಡಿಸಿದ್ದರು. ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 276 ರನ್ಗಳಿಸಿತ್ತು.
ಯುವರಾಜ್ 85 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 102 ರನ್ಗಳಿಸಿದ್ದರು. ಆದರೆ, ಬಾಂಗ್ಲಾದೇಶ ಕೇವಲ 76 ರನ್ಗಳಿಗೆ ಆಲೌಟ್ ಆಗಿ 200 ರನ್ಗಳಿಂದ ಸೋಲುಂಡಿತ್ತು.
ಇದನ್ನೂ ಓದಿ:ಭಾರತ ವಿರುದ್ಧದ ಪಂದ್ಯದ ಹಿಂದಿನ ರಾತ್ರಿ ನಮಗೆ ನಿದ್ರೆ ಬರುತ್ತಿರಲಿಲ್ಲ: ಶಾಹೀದ್ ಅಫ್ರಿದಿ