ನವದೆಹಲಿ: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್‌ಮನ್ ಹಾಗೂ 2011ರ ವಿಶ್ವಕಪ್ ವಿಜೇತ ತಂಡದ ಟೂರ್ನಿಯ ಆಟಗಾರ ಯುವರಾಜ್ ಸಿಂಗ್ ಅವರ ಜನ್ಮದಿನ ಇಂದು. ಅವರ ಸಾಧನೆಗಳನ್ನು ಸ್ಮರಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಜನ್ಮದಿನದ ಶುಭಾಶಯ ಕೋರಿದೆ. 402 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11,778 ರನ್ ಗಳಿಕೆ ಮಾಡಿದ್ದು, 148 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿರುವ ಯುವರಾಜ್ ಸಿಂಗ್ರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಭಿನಂದಿಸಿದೆ.
ಇದಲ್ಲದೇ ಬಿಸಿಸಿಐ 2007ರ ಐಸಿಸಿ ಟಿ20 ವಿಶ್ವ ಚಾಂಪಿಯನ್‌ಶಿಪ್ ಮತ್ತು 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಯುವರಾಜ್ ಸಿಂಗ್ ಅವರ ಚಿತ್ರವನ್ನು ಹಂಚಿಕೊಂಡಿದೆ.
-
4️⃣0️⃣2️⃣ intl. matches 👌
— BCCI (@BCCI) December 12, 2022 " class="align-text-top noRightClick twitterSection" data="
1️⃣1️⃣7️⃣7️⃣8️⃣ intl. runs 💪
1️⃣7️⃣ intl. tons 💯
1️⃣4️⃣8️⃣ intl. wickets 👍
Wishing the legendary @YUVSTRONG12 - former #TeamIndia all-rounder and 2️⃣0️⃣0️⃣7️⃣ ICC World T20 Championship & 2️⃣0️⃣1️⃣1️⃣ ICC World Cup-winner - a very happy birthday 🎂 👏 pic.twitter.com/S6w7T5iXZK
">4️⃣0️⃣2️⃣ intl. matches 👌
— BCCI (@BCCI) December 12, 2022
1️⃣1️⃣7️⃣7️⃣8️⃣ intl. runs 💪
1️⃣7️⃣ intl. tons 💯
1️⃣4️⃣8️⃣ intl. wickets 👍
Wishing the legendary @YUVSTRONG12 - former #TeamIndia all-rounder and 2️⃣0️⃣0️⃣7️⃣ ICC World T20 Championship & 2️⃣0️⃣1️⃣1️⃣ ICC World Cup-winner - a very happy birthday 🎂 👏 pic.twitter.com/S6w7T5iXZK4️⃣0️⃣2️⃣ intl. matches 👌
— BCCI (@BCCI) December 12, 2022
1️⃣1️⃣7️⃣7️⃣8️⃣ intl. runs 💪
1️⃣7️⃣ intl. tons 💯
1️⃣4️⃣8️⃣ intl. wickets 👍
Wishing the legendary @YUVSTRONG12 - former #TeamIndia all-rounder and 2️⃣0️⃣0️⃣7️⃣ ICC World T20 Championship & 2️⃣0️⃣1️⃣1️⃣ ICC World Cup-winner - a very happy birthday 🎂 👏 pic.twitter.com/S6w7T5iXZK
ಯುವರಾಜ್ ಸಿಂಗ್ ಡಿಸೆಂಬರ್ 12, 1981 ರಂದು ಜನಿಸಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ಜೊತೆಗೆ, ಅವರ ಸ್ಪಿನ್ ಬೌಲಿಂಗ್ ಮತ್ತು ಬಲವಾದ ಫೀಲ್ಡಿಂಗ್‌ಗಾಗಿ ಅವರು ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರಾಗಿ ಹೊರ ಹೊಮ್ಮಿದ್ದರು. ಯುವರಾಜ್ ಸಿಂಗ್ರನ್ನು ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್‌ಗೆ ಸಿದ್ಧಗೊಳಿಸಲು ತಂದೆ ಯೋಗರಾಜ್ ಮನಸ್ಸು ಮಾಡಿದ್ದರು ಎನ್ನಲಾಗಿದೆ.
ಇದಕ್ಕಾಗಿ ಅವರಿಗೆ ತರಬೇತಿ ನೀಡಲು ಆರಂಭಿಸಿದರು. 13 ನೇ ವಯಸ್ಸಿನಲ್ಲಿ, ಅವರು ಪಂಜಾಬ್ ಅಂಡರ್ -16 ತಂಡವನ್ನು ಪ್ರವೇಶಿಸಿದರು. ನಂತರ ಅಂಡರ್ -19 ತಂಡದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು. 1997 ರಲ್ಲಿ ಯುವರಾಜ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಒಂದರ ನಂತರ ಒಂದರಂತೆ ದಾಖಲೆಗಳನ್ನು ಮಾಡುತ್ತಲೇ ಸಾಗಿದರು.
ಎಡಗೈ ಸ್ಫೋಟಕ ಬ್ಯಾಟ್ಸ್‌ಮನ್ ಆಗಿರುವ ಯುವರಾಜ್ ಸಿಂಗ್ ಅವರು ಭಾರತ ಅಂಡರ್-19 ತಂಡದಲ್ಲಿ ಆಡುವಾಗ ಶ್ರೀಲಂಕಾ ವಿರುದ್ಧ 55 ಎಸೆತಗಳಲ್ಲಿ 89 ರನ್ ಗಳಿಸಿ ಮಿಂಚಿದರು. 2000ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತೀಯ ತಂಡದ ಸದಸ್ಯರಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು. ಇದಾದ ನಂತರವೇ 2000ರಲ್ಲಿ ಭಾರತ ತಂಡ ಸೇರುವ ಅವಕಾಶ ಅವರಿಗೆ ಲಭಿಸಿತು. 2001 ಮತ್ತು 2002ರಲ್ಲಿ ಕಳಪೆ ಫಾರ್ಮ್‌ನಿಂದಾಗಿ ಯುವರಾಜ್ ಅವರನ್ನು ತಂಡದಿಂದ ಕೈಬಿಡಬೇಕಾಗಿತ್ತು.
ಅದೇ ವರ್ಷ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಪ್ರಬಲ ಪುನರಾಗಮನವನ್ನು ಮಾಡಿದರು. 2002 ರ ನ್ಯಾಟ್‌ವೆಸ್ಟ್ ಸರಣಿಯ ಫೈನಲ್‌ನಲ್ಲಿ ಮೊಹಮ್ಮದ್ ಕೈಫ್ ಅವರೊಂದಿಗೆ ಆರನೇ ವಿಕೆಟ್‌ಗೆ ಅವರು 121 ರನ್ ಜೊತೆಯಾಟ ಆಡಿದ್ದರು. ಇದು ಇನ್ನೂ ಸ್ಮರಣೀಯ ಇನ್ನಿಂಗ್ಸ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ಯುವರಾಜ್ 63 ಎಸೆತಗಳಲ್ಲಿ 69 ರನ್ಗಳಿಸಿ ಭಾರತವನ್ನು ಗೆಲ್ಲಲು ಸಹಾಯ ಮಾಡಿದರು.
ಯುವರಾಜ್ ಸಿಂಗ್ 2007 ರಲ್ಲಿ ಟಿ-20 ವಿಶ್ವಕಪ್‌ನಲ್ಲಿ ತಂಡದ ಉಪನಾಯಕನನ್ನಾಗಿ ನೇಮಿಸಲಾಯಿತು. ಈ ವಿಶ್ವಕಪ್‌ನಲ್ಲಿ ಅವರು ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಇತಿಹಾಸ ನಿರ್ಮಿಸಿದರು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ 30 ಎಸೆತಗಳಲ್ಲಿ 70 ರನ್ ಗಳಿಸಿ ತಂಡವನ್ನು ಫೈನಲ್ ತಲುಪಲು ನೆರವಾದರು.
ಯುವರಾಜ್ ಸಿಂಗ್ ಅವರ ಆಲ್‌ರೌಂಡರ್ ಪ್ರದರ್ಶನದಿಂದಾಗಿ 2011ರ ವಿಶ್ವಕಪ್‌ನಲ್ಲಿ ‘ಮ್ಯಾನ್ ಆಫ್ ದಿ ಸೀರೀಸ್’ ಪ್ರಶಸ್ತಿ ಪಡೆದರು. ಈ ವಿಶ್ವಕಪ್‌ನಲ್ಲಿ ಯುವರಾಜ್ 300ಕ್ಕೂ ಹೆಚ್ಚು ರನ್ ಗಳಿಸಿ 15 ವಿಕೆಟ್ ಪಡೆದಿದ್ದರು.
ಯುವರಾಜ್ ವೃತ್ತಿಜೀವನದ ಕಠಿಣ ಹಂತ 2011 ರ ವಿಶ್ವಕಪ್ ಆರಂಭವಾಯಿತು. ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಅವರು ದುರ್ಬಲರಾದರು. ಅದರ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ಅವರು ಎರಡು ವರ್ಷಗಳ ಬಳಿಕ ಗುಣಮುಖರಾಗಿ ತಂಡಕ್ಕೆ ಮರಳಿದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಕೆಲವು ಉತ್ತಮ ಇನ್ನಿಂಗ್ಸ್‌ಗಳನ್ನು ಆಡಿದ್ದರೂ ಸಹ ಯುವರಾಜ್ ಫಿಟ್‌ನೆಸ್ ಸಮಸ್ಯೆಯಿಂದ ಭಾರತ ತಂಡದಿಂದ ಹೊರಗುಳಿದರು.
ಮಂಕಾದ ಆಟ, ಫೀಲ್ಡಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡುಬಂದಿದ್ದರಿಂದ ಯುವರಾಜ್ 2019ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ನೀಡುವುದಾಗಿ ದಿಢೀರ್ ಘೋಷಣೆ ಮಾಡಿದ್ದರು. ಈ ದಿಢೀರ್ ನಿರ್ಧಾರ ಹಲವು ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು.
ಓದಿ: ಹೋಮ್ ಸ್ಟೇ ವ್ಯವಹಾರ: ಕ್ರಿಕೆಟಿಗ ಯುವರಾಜ್ ಸಿಂಗ್ಗೆ ಗೋವಾ ಪ್ರವಾಸೋದ್ಯಮ ಇಲಾಖೆ ನೋಟಿಸ್