ETV Bharat / sports

'ಕ್ರೀಡೆಯಲ್ಲಿ ಸೋಲು, ಗೆಲುವು ಸಹಜ; ನೀವು ದೇಶಕ್ಕೆ ಹಮ್ಮೆ ತಂದಿದ್ದೀರಿ': ಟೀಂ ಇಂಡಿಯಾಗೆ ಧೈರ್ಯ ತುಂಬಿದ ಶಾರುಖ್ ಖಾನ್ - ನೀವು ಭಾರತವನ್ನು ಹೆಮ್ಮೆಯ ರಾಷ್ಟ್ರವನ್ನಾಗಿ ಮಾಡುತ್ತೀರಿ

Shah Rukh Khan message for team India: ಬಾಲಿವುಡ್ ನಟ​ ಶಾರುಖ್ ಖಾನ್ ಅವರು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್‌​ನಲ್ಲಿ ವಿಶ್ವಕಪ್ ಫೈನಲ್‌ನಲ್ಲಿ ಸೋತ ಟೀಂ ಇಂಡಿಯಾದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

Shah Rukh Khan
ಟೀಂ ಇಂಡಿಯಾಕ್ಕೆ ಶಾರುಖ್ ಖಾನ್ ಸಂದೇಶ
author img

By PTI

Published : Nov 20, 2023, 8:48 AM IST

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ವಿಶ್ವಕಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು ಆರು ವಿಕೆಟ್‌ಗಳಿಂದ ಮಣಿಸಿತು. ಪಂದ್ಯ ಮುಗಿದ ತಕ್ಷಣ ಹಲವಾರು ಬಾಲಿವುಡ್ ತಾರೆಯರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟೀಂ ಇಂಡಿಯಾದ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರೇಕ್ಷಕರ ನಡುವೆ ಕುಳಿತು ಆಟ ವೀಕ್ಷಿಸಿದ ಶಾರುಖ್ ಖಾನ್ ಕೂಡ ಎಕ್ಸ್ ಆ್ಯಪ್​ನಲ್ಲಿ ಭಾರತ ತಂಡಕ್ಕೆ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.

  • The way the Indian team has played this whole tournament is a matter of honour and they showed great spirit and tenacity. It’s a sport and there are always a bad day or two. Unfortunately it happened today….but thank u Team India for making us so proud of our sporting legacy in…

    — Shah Rukh Khan (@iamsrk) November 19, 2023 " class="align-text-top noRightClick twitterSection" data=" ">

ಕ್ರಿಕೆಟ್‌ನಲ್ಲಿ ಇಡೀ ವಿಶ್ವವೇ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಕ್ಕಾಗಿ ಅವರು ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 'ಭಾರತ ತಂಡ ಇಡೀ ಪಂದ್ಯಾವಳಿಯನ್ನು ಆಡಿದ ರೀತಿ ಗೌರವಯುತವಾಗಿದೆ. ಉತ್ತಮ ಉತ್ಸಾಹ ಮತ್ತು ದೃಢತೆಯನ್ನು ತೋರಿಸಿದ್ದೀರಿ. ಇದು ಕ್ರೀಡೆ, ಸೋಲು, ಗೆಲುವು ಇದ್ದೇ ಇರುತ್ತದೆ. ಯಾವಾಗಲೂ ಜೀವನದಲ್ಲಿ ಕೆಟ್ಟ ಮತ್ತು ಒಳ್ಳೆಯ ದಿನಗಳು ಇದ್ದೇ ಇರುತ್ತವೆ. ದುರದೃಷ್ಟವಶಾತ್, ಇಂದು ಸೋಲು ಸಂಭವಿಸಿದೆ. ಆದರೂ ನಮ್ಮ ಕ್ರೀಡಾ ಪರಂಪರೆಯ ಬಗ್ಗೆ ಹೆಮ್ಮೆ ತಂದಿದ್ದಕ್ಕಾಗಿ ಭಾರತದ ಕ್ರಿಕೆಟ್​ ತಂಡಕ್ಕೆ ಧನ್ಯವಾದಗಳು. ನೀವು ಇಡೀ ಭಾರತಕ್ಕೆ ಮೆರುಗು ತಂದಿದ್ದೀರಿ. ಪ್ರೀತಿ ಮತ್ತು ಗೌರವದೊಂದಿಗೆ ನಮ್ಮ ದೇಶವನ್ನು ಒಂದು ಹೆಮ್ಮೆಯ ರಾಷ್ಟ್ರವನ್ನಾಗಿ ಮಾಡುತ್ತೀರಿ. 2023ರ ವಿಶ್ವಕಪ್‌ನಾದ್ಯಂತ ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಶ್ಲಾಘನೀಯ" ಎಂದು ತಿಳಿಸಿದ್ದಾರೆ.

ಪತ್ನಿ ಗೌರಿ ಮತ್ತು ಮಕ್ಕಳೊಂದಿಗೆ ಸ್ಟೇಡಿಯಂನಲ್ಲಿ ಹಾಜರಿದ್ದ ಶಾರುಖ್ ಖಾನ್, ಭಾರತ ತಂಡವನ್ನು ಹುರಿದುಂಬಿಸುತ್ತಿದ್ದರು. ಪಂದ್ಯದ ವೇಳೆ ಕಿಂಗ್ ಖಾನ್ ಟೀಂ ಇಂಡಿಯಾ ಪರ ಚಪ್ಪಾಳೆ ತಟ್ಟುತ್ತಿದ್ದುದು ಕಂಡುಬಂತು. ಈ ವೇಳೆ ಎಸ್​ಆರ್​ಕೆ ಬಿಳಿ ಟಿ-ಶರ್ಟ್ ಮತ್ತು ನೀಲಿ ಡೆನಿಮ್ ಪ್ಯಾಂಟ್ ಧರಿಸಿದ್ದರು.

ಇದನ್ನೂ ಓದಿ: 'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ' : ವಿಶ್ವಕಪ್‌ ಸೋಲಿನ ಬಳಿಕ ಭಾರತ ಕ್ರಿಕೆಟ್‌ ತಂಡಕ್ಕೆ ಮೋದಿ ಸಂದೇಶ

ಫೈನಲ್‌ ಪಂದ್ಯ ಹೀಗಿತ್ತು: ಟಾಸ್‌ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಭಾರತವನ್ನು 50 ಓವರ್‌ಗಳಲ್ಲಿ 240 ರನ್‌ಗಳಿಗೆ ಕಟ್ಟಿಹಾಕಿತು. ಭಾರತದ ನಾಯಕ ರೋಹಿತ್ ಶರ್ಮಾ 31 ಎಸೆತಗಳಲ್ಲಿ 4 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 47 ರನ್​ ಕಲೆ ಹಾಕಿದರು. ವಿರಾಟ್ ಕೊಹ್ಲಿ 63 ಎಸೆತಗಳಲ್ಲಿ 4 ಬೌಂಡರಿಸಹಿತ 54 ರನ್​ ಮತ್ತು ಕೆ.ಎಲ್.ರಾಹುಲ್ 107 ಎಸೆತಗಳಲ್ಲಿ 1 ಬೌಂಡರಿ ಸಹಿತ 66 ರನ್ ಪೇರಿಸಿದರು.

ಆಸ್ಟ್ರೇಲಿಯಾದ ಆಟಗಾರ ಟ್ರಾವಿಸ್ ಹೆಡ್ 120 ಎಸೆತಗಳಲ್ಲಿ 137, 15 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದರು. ಮಾರ್ನಸ್ ಲಾಬುಶೇನ್ 110 ಎಸೆತಗಳಲ್ಲಿ 4 ಬೌಂಡರಿ ಸಹಿತ ಮಹತ್ವದ 58 ರನ್​ ಗಳಿಸಿದರು. ಮೊಹಮ್ಮದ್ ಶಮಿ ಒಂದು ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಎರಡು ವಿಕೆಟ್ ಉರುಳಿಸಿದರು. ಅಂತಿಮವಾಗಿ ಆಸೀಸ್ ಭಾರತವನ್ನು ಮಣಿಸಿ 6ನೇ ವಿಶ್ವಕಪ್ ಎತ್ತಿಹಿಡಿಯಿತು.

ಇದನ್ನೂ ಓದಿ: ಅಂದು ಆಟಗಾರನಾಗಿ ಇಂದು ಕೋಚ್‌ ಆಗಿ ನನಸಾಗದೇ ಉಳಿದ ವಿಶ್ವಕಪ್‌! ಫೈನಲ್‌ ಸೋಲಿನ ನಂತರ ದ್ರಾವಿಡ್ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.