ETV Bharat / sports

ಗೆಲುವು ಅಥವಾ ಸೋಲು ನಿಮ್ಮ ಕೈಯಲ್ಲಿರಲ್ಲ, ಲೀಡರ್ ಆಗುವುದಕ್ಕೆ ನಾಯಕತ್ವದ ಅಗತ್ಯವಿಲ್ಲ: ಕೊಹ್ಲಿ - ನಾಯಕತ್ವದ ಬಗ್ಗೆ ವಿರಾಟ್ ಕೊಹ್ಲಿ

ನೀವು ನಾಯಕನಾಗಿರಲು ನಾಯಕತ್ವದ ಅಗತ್ಯವಿಲ್ಲ. ಎಂಎಸ್ ಧೋನಿ ತಂಡದಲ್ಲಿದ್ದಾಗ, ಅವರು ನಾಯಕನಲ್ಲ ಎಂದು ಭಾವಿಸುತ್ತಿರಲಿಲ್ಲ, ನಾವು ಅವರಿಂದ ಹಲವು ರೀತಿಯ ಸಲಹೆಗಳನ್ನು ಪಡೆದುಕೊಳ್ಳಲು ಬಯಸುತ್ತಿದ್ದ ವ್ಯಕ್ತಿಯಾಗಿದ್ದರು ಎಂದು ತಿಳಿಸಿರುವ ಕೊಹ್ಲಿ ನಾಯಕತ್ವ ಇಲ್ಲದಿದ್ದರೂ ತಾವೊಬ್ಬ ಮುಂದಾಳಾಗಿ ತಂಡದಲ್ಲಿರುತ್ತೇನೆ ಎಂದು ತಿಳಿಸಿದ್ದಾರೆ.

Virat Kohli on leadership role
ವಿರಾಟ್ ಕೊಹ್ಲಿ ನಾಯಕತ್ವ
author img

By

Published : Jan 31, 2022, 9:22 PM IST

ನವದೆಹಲಿ: ಈ ತಿಂಗಳ ಆರಂಭದಲ್ಲಿ ಟೆಸ್ಟ್​ ತಂಡದ ನಾಯಕತ್ವ ತ್ಯಜಿಸಿರುವ ವಿರಾಟ್​ ಕೊಹ್ಲಿ ಲೀಡರ್ ಆಗಿರಲು ನಾಯಕತ್ವದ ಅಗತ್ಯವಿಲ್ಲ ಎಂದು ತಿಳಿಸಿದ್ದು, ತಂಡಕ್ಕೆ ಬೇರೆ ಧಿಕ್ಕಿನಲ್ಲಿ ನನ್ನ ಅಗತ್ಯವಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಮುಂದುವರಿಯುವುದು ಕೂಡ ನಾಯಕತ್ವದ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್​ ಸರಣಿಯನ್ನು 1-2ರಲ್ಲಿ ಸೋಲು ಕಂಡ ಬೆನ್ನಲ್ಲೇ ನಾಯಕತ್ವವನ್ನು ತ್ಯಜಿಸಿದ್ದ ಕೊಹ್ಲಿ, ನಾಯಕತ್ವದ ಅಧಿಕಾರ ಕೆಲವು ಅವಧಿಗೆ ಸೀಮಿತವಾಗಿರುತ್ತದೆ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

"ನೋಡಿ, ಏನೂ ಸಾಧಿಸಬೇಕು ಎಂದು ಹೊರಟಿದ್ದೀರೋ ಅದರ ಬಗ್ಗೆ ಮೊದಲು ನೀವು ಸಂಪೂರ್ಣ ಮಾಹಿತಿ ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ಮತ್ತು ಆ ಗುರಿಗಳನ್ನು ಎಲ್ಲಿ ಸಾಧಿಸಬೇಕು ಮತ್ತು ಎಲ್ಲಿ ಅಲ್ಲ ಎನ್ನುವುದನ್ನು ತಿಳಿದಿರಬೇಕು. ಪ್ರತಿಯೊಂದಕ್ಕೂ ಅಧಿಕಾರಾವಧಿ ಇದೆ ಮತ್ತು ಅಂತ್ಯ ಎನ್ನುವುದು ಇರುತ್ತದೆ. ಆದ್ದರಿಂದ ನೀವು ಅದರ ಬಗ್ಗೆ ಜಾಗೃತಿಯನ್ನು ಹೊಂದಿರಬೇಕು. ಬ್ಯಾಟರ್​ ಆಗಿಯೂ ಕೂಡ ತಂಡಕ್ಕೆ ನೀವು ಸಾಕಷ್ಟು ನೀಡಬಹುದು, ಅದಕ್ಕಾಗಿ ನೀವು ಹೆಮ್ಮೆ ಪಡಬಹುದು" ಎಂದು ಹೇಳಿದ್ದಾರೆ.

ಹಾಗೆ ಮುಂದುವರಿಸಿ, ನೀವು ನಾಯಕನಾಗಿರಲು ನಾಯಕತ್ವದ ಅಗತ್ಯವಿಲ್ಲ. ಎಂಎಸ್ ಧೋನಿ ತಂಡದಲ್ಲಿದ್ದಾಗ, ಅವರು ನಾಯಕನಲ್ಲ ಎಂದು ಭಾವಿಸುತ್ತಿರಲಿಲ್ಲ, ನಾವು ಅವರಿಂದ ಹಲವು ರೀತಿಯ ಸಲಹೆಗಳನ್ನು ಪಡೆದುಕೊಳ್ಳಲು ಬಯಸುತ್ತಿದ್ದ ಮೊದಲ ವ್ಯಕ್ತಿಯಾಗಿದ್ದರು. ಗೆಲುವು ಅಥವಾ ಸೋಲು ಎನ್ನುವುದು ನಿಮ್ಮ ಕೈಯಲ್ಲಿರುವುದಿಲ್ಲ, ಉತ್ಕೃಷ್ಟತೆಗಾಗಿ ಕಾಪಾಡಿಕೊಳ್ಳುವುದಕ್ಕೆ ಮತ್ತು ಪ್ರತಿದಿನ ಉತ್ತಮವಾಗಿರಲು ಶ್ರಮಿಸಬೇಕಾದ ಅಗತ್ಯವಿದೆ ಎಂದು ಕೊಹ್ಲಿ ಹೇಳಿದ್ದಾರೆ.

ಎಲ್ಲಾ ಪಾತ್ರಗಳನ್ನು ಸ್ವೀಕರಿಸಬೇಕು:

ನಾಯಕ ಸ್ಥಾನವನ್ನು ಬಿಟ್ಟುಕೊಟ್ಟು ಮುಂದುವರಿಯುವುದು ಕೂಡ ನಾಯಕತ್ವದ ಒಂದು ಭಾಗವಾಗವಾಗಿರುತ್ತದೆ. ಒಬ್ಬ ಆಟಗಾರ ಎಲ್ಲಾ ರೀತಿಯ ಪಾತ್ರಗಳು ಮತ್ತು ಅವಕಾಶಗಳನ್ನು ಸ್ವೀಕರಿಸಬೇಕು ಎಂದು ನಾನು ಭಾವಿಸುತ್ತೇನೆ. ನಾನು ಎಂಎಸ್​ ಧೋನಿ ನಾಯಕತ್ವದಡಿಯಲ್ಲಿ ಕೆಲವು ಸಮಯ ಆಟಗಾರನಾಗಿ ಆಡಿದ್ದೆ, ನಂತರ ನಾಯಕನಾದೆ. ಈ ಎಲ್ಲಾ ಸಂದರ್ಭದಲ್ಲಿ ನನ್ನ ಮನಸ್ಥಿತಿ ಒಂದೇ ಆಗಿತ್ತು. ತಂಡದಲ್ಲಿ ಕೇವಲ ಆಟಗಾರನಾಗಿದ್ದರೂ ಸಹ ನಾನು ಯಾವಾಗಲೂ ನಾಯಕನಂತೆಯೇ ಆಲೋಚಿಸುತ್ತೇನೆ, ತಂಡಕ್ಕೆ ಗೆಲುವು ತಂದುಕೊಡಲು ಬಯಸುತ್ತೇನೆ ಮತ್ತು ನನಗೆ ನಾನು ಲೀಡರ್ ಆಗಿರುವುದಕ್ಕೆ ಬಯಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:ರೋಹಿತ್​ ಸೂಕ್ತ​, ರಹಾನೆ ಉತ್ತಮ.. ಆದ್ರೆ ರಾಹುಲ್​ಗೆ ಟೆಸ್ಟ್​ ನಾಯಕತ್ವದ ಗುಣಗಳಿಲ್ಲ: ಪಾಂಟಿಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.