ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಂಡದ ಸ್ಟ್ಯಾಂಡ್‌ಬೈ ಆಟಗಾರನಾಗಿ ಆಯ್ಕೆಯಾಗಿದ್ದ ರುತುರಾಜ್ ಗಾಯಕ್ವಾಡ್ ಅವರ ಬದಲಿಗೆ ಉದಯೋನ್ಮುಖ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಅವರನ್ನು ಲಂಡನ್‌ಗೆ ಕಳುಹಿಸಲಾಗುತ್ತದೆ ಎಂದು ವರದಿಯಾಗಿದೆ. ಸ್ಟ್ಯಾಂಡ್‌ಬೈ ಆಟಗಾರರಾಗಿರುವ ರುತುರಾಜ್ ಗಾಯಕ್ವಾಡ್ ಜೂನ್ 3 ರಂದು ವಿವಾಹವಾಗಲಿರುವ ಕಾರಣ ಈ ಬದಲಾವಣೆ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಆದರೆ ಬಿಸಿಸಿಐ ಈ ಬಗ್ಗೆ ಮಾಹಿತಿ ನೀಡಿಲ್ಲ.
ಐಪಿಎಲ್ ಮುಗಿಯುತ್ತಿದ್ದಂತೆ ಒಂಬತ್ತು ದಿನಗಳ ಬಿಡುವಿನ ನಂತರ ಐಸಿಸಿ ನಡೆಸುತ್ತಿರುವ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯ ನಡೆಯಲಿದೆ. ಇದರಲ್ಲಿ ಭಾರತ ತಂಡ ಇಂಗ್ಲೆಂಡ್ನ ಓವೆಲ್ ಮೈದಾನದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಜೂನ್ 7 ರಿಂದ ಜೂನ್ 11ರ ವರೆಗೆ ನಡೆಯಲಿದೆ. ಮಳೆ ಬಂದಲ್ಲಿ ಪಂದ್ಯದ ಫಲಿತಾಂಶಕ್ಕಾಗಿ 12 ನೇ ತಾರೀಕು ಮೀಸಲು ದಿನವಾಗಿದೆ.
-
Yashasvi Jaiswal set to replace Ruturaj Gaikwad in the Standby lists for India in the WTC Final.
— Mufaddal Vohra (@mufaddal_vohra) May 27, 2023 " class="align-text-top noRightClick twitterSection" data="
Gaikwad will be getting married. (Reported by Indian Express). pic.twitter.com/dIf1n0aEAi
">Yashasvi Jaiswal set to replace Ruturaj Gaikwad in the Standby lists for India in the WTC Final.
— Mufaddal Vohra (@mufaddal_vohra) May 27, 2023
Gaikwad will be getting married. (Reported by Indian Express). pic.twitter.com/dIf1n0aEAiYashasvi Jaiswal set to replace Ruturaj Gaikwad in the Standby lists for India in the WTC Final.
— Mufaddal Vohra (@mufaddal_vohra) May 27, 2023
Gaikwad will be getting married. (Reported by Indian Express). pic.twitter.com/dIf1n0aEAi
ಡಬ್ಲ್ಯೂಟಿಸಿ ಪಂದ್ಯಕ್ಕಾಗಿ ಈಗಾಗಲೇ ಒಂದು ಗುಂಪು ಲಂಡನ್ ಪ್ರವಾಸ ಬೆಳೆಸಿದ್ದು, ಅಭ್ಯಾಸದಲ್ಲಿ ತೊಡಗಿಕೊಂಡಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ, ಶುಭಮನ್ ಗಿಲ್, ಕೆ.ಎಸ್. ಭರತ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಭಾಗವಹಿಸಲಿದ್ದಾರೆ. ಇವರು ಲಂಡನ್‌ಗೆ ಕೊನೆಯವರಾಗಿ ಪ್ರಯಾಣ ಬೆಳೆಸಲಿದ್ದಾರೆ.
ರುತುರಾಜ್ ಗಾಯಕ್ವಾಡ್ ಜೂನ್ 3 ರಂದು ವಿವಾಹವಾಗಲಿರುವ ಕಾರಣ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಸ್ಟ್ಯಾಂಡ್‌ಬೈ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಲಾಗಿದೆ. ತಮ್ಮ ಮದುವೆಯ ವೇಳಾಪಟ್ಟಿಯನ್ನು ಮೊದಲೇ ತಿಳಿಸಿದ್ದ ಗಾಯಕ್ವಾಡ್ ಜೂನ್ 5 ರ ನಂತರ ತಂಡವನ್ನು ಸೇರುವುದಾಗಿ ತಿಳಿಸಿದ್ದರಂತೆ. ಅವರ ಅನುಪಸ್ಥಿತಿಯಲ್ಲಿ, ಯುಕೆ ವೀಸಾವನ್ನು ಜೈಸ್ವಾಲ್‌ಗೆ ನೀಡಲಾಗಿದೆ.
16ನೇ ಆವೃತ್ತಿಯ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪ್ರತಿನಿಧಿಸಿದ್ದ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದರು. ಐಪಿಎಲ್ 2023 ರಲ್ಲಿ ಆರ್ಆರ್ ಪರ 14 ಇನ್ನಿಂಗ್ಸ್‌ಗಳಲ್ಲಿ 625 ರನ್ ಗಳಿಸಿದರು. ಈ ಋತುವಿನಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಕೂಡ ದಾಖಲಿಸಿದ್ದಾರೆ . 21 ವರ್ಷದ ಜೈಸ್ವಾಲ್ ಪ್ರಥಮ ದರ್ಜೆ ಕ್ರಿಕೆಟ್ ಅದ್ಭುತ ದಾಖಲೆ ಹೊಂದಿದ್ದಾರೆ. 15 ಪಂದ್ಯಗಳಲ್ಲಿ 80.21 ಸರಾಸರಿಯೊಂದಿಗೆ 1845 ರನ್ ಗಳಿಸಿದ್ದಾರೆ. ಅವರು ದೇಶೀಯ ಟೂರ್ನಿಯಲ್ಲಿ ಒಂಬತ್ತು ಶತಕಗಳು ಮತ್ತು ಎರಡು ಅರ್ಧಶತಕ ಹೊಂದಿದ್ದಾರೆ.
ಭಾರತದ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಇಶಾನ್ ಕಿಶನ್, ಕೆ.ಎಸ್.ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಸ್ಟ್ಯಾಂಡ್‌ಬೈ ಆಟಗಾರರು: ಯಶಸ್ವಿ ಜೈಸ್ವಾಲ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್
ಇದನ್ನೂ ಓದಿ: ಧೋನಿಗಿಂದು 250ನೇ IPL ಪಂದ್ಯ: 10ನೇ ಬಾರಿಗೆ ಸಿಎಸ್‌ಕೆ ತಂಡವನ್ನು ಫೈನಲ್‌ಗೇರಿಸಿದ ಕೀರ್ತಿ!