ಗುವಾಹಟಿ : ಅಂಡರ್-19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧುಲ್ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲೂ ಶತಕ ಸಿಡಿಸಿ ವಿಶೇಷ ದಾಖಲೆಗೆ ಪಾತ್ರರಾಗಿದ್ದಾರೆ.
ತಮಿಳುನಾಡು ವಿರುದ್ಧ ಗುವಾಹಟಿಯಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 113 ರನ್ಗಳಿಸಿದ್ದ ಧುಲ್ ಎರಡನೇ ಇನ್ನಿಂಗ್ಸ್ನಲ್ಲೂ ಅಜೇಯ 113 ರನ್ಗಳಿಸಿದರು. 202 ಎಸೆತಗಳನ್ನು ಎದುರಿಸಿದ ಅವರು ಇನ್ನಿಂಗ್ಸ್ನಲ್ಲಿ 14 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು.
ಇವರ ಜೊತೆಗೆ ಇನ್ನಿಂಗ್ಸ್ ಆರಂಭಿಸಿದ್ದ ಧ್ರುವ್ ಶೋರೆ ಕೂಡ ಅಜೇಯ 107 ರನ್ಗಳಿಸಿದರು. ಆದರೆ, ಈ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದು, ತಮಿಳುನಾಡು ಮೊದಲ ಇನ್ನಿಂಗ್ಸ್ ಲೀಡ್ನೊಂದಿಗೆ 3 ಅಂಕ ಪಡೆದರೆ, ದೆಹಲಿ ಒಂದು ಅಂಕಕ್ಕೆ ತೃಪ್ತಿಪಟ್ಟುಕೊಂಡಿದೆ.
ದೆಹಲಿ ಮೊದಲ ಇನ್ನಿಂಗ್ಸ್ನಲ್ಲಿ ಯಶ್ ಧುಲ್ 113 ಮತ್ತು ಲಲಿತ್ ಯಾದವ್ ಅವರ 177 ರನ್ಗಳ ನೆರವಿನಿಂದ 452ಕ್ಕೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ತಮಿಳುನಾಡು ಶಾರುಖ್ ಖಾನ್ 194 ಮತ್ತು ಬಾಬಾ ಇಂದ್ರಜಿತ್ ಅವರ 117 ರನ್ಗಳ ನೆರವಿನಿಂದ 494 ರನ್ಗಳಿಸಿ 42 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತ್ತು.
ಧುಲ್ ಚೊಚ್ಚಲ ರಣಜಿ ಪಂದ್ಯದಲ್ಲೇ 2 ಶತಕ ಸಿಡಿಸಿದ 3ನೇ ಬ್ಯಾಟರ್ ಎನಿಸಿಕೊಂಡರು. 1952/53ರಲ್ಲಿ ಗುಜರಾತ್ನ ನಾರಿ ಕಾಂಟ್ರ್ಯಾಕ್ಟರ್(152 ಮತ್ತು 102) ಮತ್ತು 2012/13ರಲ್ಲಿ ಮಹಾರಾಷ್ಟ್ರದ ವಿರಾಗ್ ಅವಟೆ(126 ಮತ್ತು 112) ಈ ಸಾಧನೆ ಮಾಡಿದ್ದರು.
ಇದನ್ನೂ ಓದಿ:ವೇತನ ನೀಡಿಲ್ಲವೆಂದು ಆರೋಪಿಸಿದ ಆಸೀಸ್ ಕ್ರಿಕೆಟಿಗನಿಗೆ ಅಜೀವ ನಿಷೇಧ ಹೇರಿದ ಪಿಸಿಬಿ