ಬೆಂಗಳೂರು: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) 2023-25 ಅಭಿಯಾನ ಇದೆ ತಿಂಗಳು 16 ರಿಂದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಆ್ಯಶಸ್ ಸರಣಿಯಿಂದ ಪ್ರಾರಂಭವಾಗಲಿದೆ. ನಾಲ್ಕು ದಿನಗಳ ಹಿಂದಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ಕಾಂಗರೂ ಪಡೆ ಇದೀಗ 3ನೇ WTC ಅಭಿಯಾನವನ್ನ ಇಂಗ್ಲೆಂಡ್ ಜೊತೆ ಆರಂಭಿಸಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2023-25ರ ವೇಳಾ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಈ ಬಾರಿಯ WTC 2023 - 25ರಲ್ಲಿ ಭಾರತ ಒಟ್ಟು 19 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಐದು, ಬಾಂಗ್ಲಾದೇಶ ವಿರುದ್ಧ ಎರಡು ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ವಿದೇಶ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು, ದಕ್ಷಿಣ ಆಫ್ರಿಕ ವಿರುದ್ಧ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಇತ್ತೀಚೆಗೆ ಲಂಡನ್‌ನ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಈ ಮೂಲಕ ಸತತ ಎರಡನೇ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್(WTC) ಫೈನಲ್ ಪ್ರವೇಶಿಸಿ ನಿರಾಸೆ ಮೂಡಿಸಿತ್ತು. ಇದೀಗ ಇದೇ ಜುಲೈನಿಂದ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2023-25 ಅಭಿಯಾನವನ್ನ ಪ್ರಾರಂಭಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಸ್ ಪ್ರಯಾಣ ಪ್ರಾರಂಭವಾಗಲಿದೆ.
ಭಾರತ ಟೆಸ್ಟ್ ಪಂದ್ಯಗಳ ವೇಳಾ ಪಟ್ಟಿ
ಭಾರತ vs ವೆಸ್ಟ್ ಇಂಡೀಸ್
ಜುಲೈ 12-16 ಮೊದಲ ಟೆಸ್ಟ್ (ಡೊಮಿನಿಕಾ)
ಜುಲೈ 20-24 ಎರಡನೇ ಟೆಸ್ಟ್ (ಟ್ರಿನಿಡಾಡ್)
ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ
ಡಿಸೆಂಬರ್ - ಮೊದಲ ಟೆಸ್ಟ್
ಜನವರಿ 2024 - ಎರಡನೇ ಟೆಸ್ಟ್
ಇಂಗ್ಲೆಂಡ್‌ನ ಭಾರತ ಪ್ರವಾಸ
ಜನವರಿ/ಫೆಬ್ರವರಿ 2024 - ಐದು ಟೆಸ್ಟ್‌ಗಳು
ಬಾಂಗ್ಲಾದೇಶದ ಭಾರತ ಪ್ರವಾಸ
ಸೆಪ್ಟೆಂಬರ್/ಅಕ್ಟೋಬರ್ 2024 - ಎರಡು ಟೆಸ್ಟ್‌ಗಳು
ಭಾರತಕ್ಕೆ ನ್ಯೂಜಿಲ್ಯಾಂಡ್ ತಂಡದ ಪ್ರವಾಸ
ಅಕ್ಟೋಬರ್/ನವೆಂಬರ್ 2024 - ಮೂರು ಟೆಸ್ಟ್‌ಗಳು
ಭಾರತ ಆಸ್ಟ್ರೇಲಿಯಾ ಪ್ರವಾಸ 2024-25 (ಬಾರ್ಡರ್-ಗವಾಸ್ಕರ್ ಟ್ರೋಫಿ)
ನವೆಂಬರ್ 2024-ಜನವರಿ 2025 - ಐದು ಟೆಸ್ಟ್‌ಗಳನ್ನು ಆಡಲಿದೆ.
ಹಿಂದಿನ ಆವೃತ್ತಿಯಲ್ಲಿ ಬಳಸಲಾದ ಅಂಕಗಳ ಶೇಕಡಾವಾರು ಮಾದರಿಯ ಆಧಾರದ ಮೇಲೆ ಅಂಕಗಳನ್ನು ನಿರ್ಧರಿಸಲಾಗುತ್ತದೆ. ತಂಡಗಳು ಗೆಲುವಿಗೆ 12 ಅಂಕಗಳನ್ನು, ಟೈಗೆ 6 ಮತ್ತು ಡ್ರಾಕ್ಕೆ 4 ಅಂಕಗಳನ್ನು ಪಡೆಯುತ್ತವೆ. ಈ ಅಭಿಯಾನದಲ್ಲಿ ಒಂಬತ್ತು ತಂಡಗಳು, ಮೂರು ಸರಣಿಗಳನ್ನು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ಆಡಲಿವೆ.
ಇದನ್ನೂ ಓದಿ: Ashes series: ಇಂಗ್ಲೆಂಡ್‌ನ ಗೆಲುವಿನ ಓಟ ವಿಶ್ವ ಟೆಸ್ಟ್ ಚಾಂಪಿಯನ್ಸ್ಗಳ ಮೇಲೂ ಮುಂದುವರೆಯುತ್ತಾ?