ಬೆಕೆನ್‌ಹ್ಯಾಮ್ (ಇಂಗ್ಲೆಂಡ್): ಟೆಸ್ಟ್ ಮಾನ್ಯತೆ ಪಡೆದಿರುವ ರಾಷ್ಟ್ರಗಳು ಆಡುವ ಪಂದ್ಯಗಳನ್ನು ಲೆಕ್ಕಕ್ಕೆ ತೆಗೆದುಗೊಂಡು ಅದಕ್ಕೆ ಐಸಿಸಿ ಅಂಕಗಳನ್ನು ನೀಡಿ ಅದರಲ್ಲಿ ಟಾಪ್ ರ್ಯಾಂಕಿಂಗ್ನಲ್ಲಿ ಬರುವ ಎರಡು ತಂಡಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಸ್ಪರ್ಧಿಸಿ, ಗೆದ್ದವರು ಚಾಂಪಿಯನ್ ಪಟ್ಟ ಅಲಂಕರಿಸಲಿದ್ದಾರೆ. 2019 ರಿಂದ 21ರ ವರೆಗೆ ಮೊದಲ ಟೆಸ್ಟ್ ಚಾಂಪಿಯನ್ ಶಿಪ್ ನಡೆಯಿತು. ಇದರಲ್ಲಿ ನ್ಯೂಜಿಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿತು.
2021 ರಿಂದ 23 ರ ನಡುವಿನ ಟೆಸ್ಟ್ ಚಾಂಪಿಯನ್ ಶಿಪ್ ರೇಸ್ನಲ್ಲಿ ಹಲವು ರಾಷ್ಟ್ರಗಳು ಎರಡು ವರ್ಷಗಳಿಂದ ಹೋರಾಟ ನಡೆಸಿದವು. ಆದರೆ ಕೊನೆಗೆ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಭಾರತ ತಂಡ ಕಳೆದ ಬಾರಿಯ ಫೈನಲ್ನಲ್ಲಿ ರನ್ನರ್ ಅಪ್ ಆಗಿತ್ತು. ಈ ಬಾರಿ ಮತ್ತೆ ಫೈನಲ್ ಪ್ರವೇಶಿಸಿದೆ. ಜೂನ್ 7 ರಿಂದ 11ರ ವರೆಗೆ ಅಂತಿಮ ಪಂದ್ಯ ಇಂಗ್ಲೆಂಡ್ನ ಓವೆಲ್ ಮೈದಾನದಲ್ಲಿ ನಡೆಯಲಿದ್ದು, ಉಭಯ ತಂಡಗಳು ಭರ್ಜರಿ ತಯಾರಿ ನಡೆಸಿಕೊಳ್ಳುತ್ತಿವೆ.
ಆದರೆ ಎರಡು ವರ್ಷಗಳ ಕಾಲ ಲೀಗ್ ಪಂದ್ಯಗಳ ರೀತಿಯಲ್ಲಿ ಸರಣಿಗಳನ್ನು ಆಡಿಕೊಂಡು ಬಂದ ದೇಶಗಳು ಕೇವಲ ಒಂದು ಪಂದ್ಯದ ಸೋಲಿನಿಂದ ಚಾಂಪಿಯನ್ ಪಟ್ಟವನ್ನು ಪಡೆದುಕೊಳ್ಳುವುದನ್ನು ಕಳೆದುಕೊಂಡಂತಾಗುತ್ತದೆ. ಇತರ ವಿಶ್ವ ಕಪ್ಗಳು ಗುಂಪು ಹಂತದ ಪಂದ್ಯಗಳ ನಂತರ ನಡೆಯುವುದರಿಂದ ಒಂದು ಪಂದ್ಯದಲ್ಲಿ ಫೈನಲ್ ನಿರ್ಧಾರ ಆದಂತೆ ಆಗುವುದಿಲ್ಲ. ಆದರೆ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕೇವಲ ಒಂದೇ ಪಂದ್ಯದಲ್ಲಿ ಮುಕ್ತಾಯವಾಗುತ್ತದೆ. ಇದನ್ನು 3 ಪಂದ್ಯಗಳ ಸರಣಿ ಮೂಲಕ ನಡೆಸಬೇಕು ಎಂದು ಹಲವರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅದಕ್ಕೆ ಈಗ ವಾರ್ನರ್ ಕೂಡಾ ಧ್ವನಿಗೂಡಿಸಿದ್ದಾರೆ.
"ಇದು ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ನಿರ್ಣಾಯಕ ಎಂದು ಹೇಳುವುದಿಲ್ಲ. ಆದರೆ ಫೈನಲ್ ಟೆಸ್ಟ್ ಕ್ರಿಕೆಟ್‌ನೊಂದಿಗೆ ಕನಿಷ್ಠ ಮೂರು ಪಂದ್ಯಗಳ ಸರಣಿಯಾಗಬೇಕು ಎಂದು ನಾನು ಭಾವಿಸುತ್ತೇನೆ. ನೀವು ಎರಡು ವರ್ಷಗಳ ಉತ್ತಮ ಕ್ರಿಕೆಟ್ ಅನ್ನು ಆಡುತ್ತೀರಿ, ನಂತರ ನಾವು ಫೈನಲ್ ಎದುರಿಸುವ ಜಾಗ ತಟಸ್ಥ ಸ್ಥಳವಾಗಿರುತ್ತದೆ. ನಾವೆಲ್ಲರೂ ಇಲ್ಲಿ ಮೊದಲು ಆಡಿದ್ದೇವೆ. ಆದರೆ ಈ ಪಂದ್ಯದಲ್ಲಿ ಎದುರಾಳಿ ಇಲ್ಲಿನ ತಂಡ ಆಗಿರುವುದಿಲ್ಲ" ಎಂದು ಡೇವಿಡ್ ವಾರ್ನರ್ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಎರಡೂ ತಂಡಗಳು ಉತ್ತಮವಾಗಿದೆ. ಇಂಗ್ಲೆಂಡ್ ಪಿಚ್ನಲ್ಲಿ ಭಾರತೀಯ ಬೌಲರ್ಗಳನ್ನು ಎದುರಿಸಲು ಹೆಚ್ಚು ಉತ್ಸುಕನಾಗಿದ್ದೇನೆ. ಬಲಿಷ್ಠ ಉಭಯ ತಂಡಗಳ ಪೈಪೋಟಿ ಯಾವಾಗಲೂ ಹೆಚ್ಚಿನ ಮನರಂಜನೆ ಮತ್ತು ಒಳ್ಳೆಯ ಆಟವನ್ನು ಪ್ರೇಕ್ಷಕರಿಗೆ ನೀಡುತ್ತದೆ ಎಂದು ವಾರ್ನರ್ ಹೇಳಿದ್ದಾರೆ.
ಉಭಯ ತಂಡಗಳು ಓವೆಲ್ ತಲುಪಿದ್ದು, ಅಭ್ಯಾಸವನ್ನು ಆರಂಭಿಸಿವೆ. ಇನ್ನು ಮೂರೇ ದಿನದಲ್ಲಿ ಪಂದ್ಯಗಳು ಆರಂಭವಾಗಲಿದೆ.
ಇದನ್ನೂ ಓದಿ: WTC Final 2023: ಟೆಸ್ಟ್ನಲ್ಲಿ ದಾಖಲೆಗಳನ್ನು ಹೊಂದಿರುವ ಈ ಐವರು ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ