ಸೌತಾಂಪ್ಟನ್: ಇಂದಿನಿಂದ ಭಾರತ-ನ್ಯೂಜಿಲ್ಯಾಂಡ್ ನಡುವೆ ಬಹುನಿರೀಕ್ಷಿತ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ಆರಂಭಗೊಳ್ಳಲಿದೆ. ಅದಕ್ಕಾಗಿ ಉಭಯ ತಂಡಗಳು ಎಲ್ಲ ವಿಭಾಗಗಳಲ್ಲೂ ಸಜ್ಜುಗೊಂಡಿವೆ. ಪಂದ್ಯ ಆರಂಭಗೊಳ್ಳುವುದಕ್ಕೂ ಕೆಲ ಗಂಟೆಗಳ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಡಬ್ಲ್ಯೂಟಿಸಿ ಫೈನಲ್ ಪಂದ್ಯ ನಾವು ರಚನೆ ಮಾಡಿರುವ ಅತಿ ದೊಡ್ಡ ಮೈಲಿಗಲ್ಲು ಸೇರಲು ಇರುವ ಮತ್ತೊಂದು ಹಾದಿ ಎಂದು ತಿಳಿಸಿದ್ದಾರೆ.
-
"We've been on a quest for excellence for a while now, and we will continue to be on that path regardless of this game" 💪
— ICC (@ICC) June 18, 2021 " class="align-text-top noRightClick twitterSection" data="
Hear what @imVkohli has to say as the start of the #WTC21 Final draws closer 🇮🇳#INDvNZ pic.twitter.com/XJs9WEWUqT
">"We've been on a quest for excellence for a while now, and we will continue to be on that path regardless of this game" 💪
— ICC (@ICC) June 18, 2021
Hear what @imVkohli has to say as the start of the #WTC21 Final draws closer 🇮🇳#INDvNZ pic.twitter.com/XJs9WEWUqT"We've been on a quest for excellence for a while now, and we will continue to be on that path regardless of this game" 💪
— ICC (@ICC) June 18, 2021
Hear what @imVkohli has to say as the start of the #WTC21 Final draws closer 🇮🇳#INDvNZ pic.twitter.com/XJs9WEWUqT
ವಿರಾಟ್ ಕೊಹ್ಲಿ ಮಾತನಾಡಿರುವ ವಿಡಿಯೋ ತುಣುಕೊಂದನ್ನು ಐಸಿಸಿ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿದೆ. ಇದರಲ್ಲಿ ಮಾತನಾಡಿರುವ ಕೊಹ್ಲಿ, ಐಸಿಸಿ ಟೆಸ್ಟ್ ಚಾಂಪಿಯನ್ ಫೈನಲ್ ನಮಗೆ ಅಂತಿಮವಲ್ಲ. ಆದರೆ ಟೆಸ್ಟ್ ತಂಡವಾಗಿ ನಾವು ರಚನೆ ಮಾಡಿರುವ ಮೈಲುಗಲ್ಲು ಸೇರಲು ಇರುವ ಮತ್ತೊಂದು ಗುರಿಯಾಗಿದೆ ಎಂದಿದ್ದಾರೆ. ಕಳೆದ 7-8 ತಿಂಗಳಿಂದ ನಾವು ಆಡಿರುವ ಉತ್ತಮ ಕ್ರಿಕೆಟ್ನಿಂದಲ್ಲ, ಬದಲಾಗಿ ಕಳೆದ 4-5 ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ನಾವು ಇಂತಹ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿದೆ. ವಿಶ್ವದ ಎಲ್ಲೆಡೆ ಟೆಸ್ಟ್ ಪಂದ್ಯ ಗೆಲ್ಲಲ್ಲು ನಾವು ಮಾಡಿಕೊಂಡಿರುವ ಬೌಲಿಂಗ್ ಲೈನ್ ಅಪ್, ಬ್ಯಾಟಿಂಗ್ ಹಾಗೂ ಆಲ್ರೌಂಡರ್ ವಿಭಾಗ ಉತ್ತಮವಾಗಿರುವ ಕಾರಣ ನಾವು ಇದೀಗ ಫೈನಲ್ನಲ್ಲಿ ಆಡುತ್ತಿದ್ದೇವೆ ಎಂದರು.
ಇದನ್ನೂ ಓದಿರಿ: WTC ಫೈನಲ್ನಲ್ಲಿ ಎದುರಾಳಿ ಕಟ್ಟಿಹಾಕಲು ವೇಗದ ಬೌಲಿಂಗ್ ಬಗ್ಗೆ ಹೆಚ್ಚಿನ ಗಮನ: ವಿಲಿಯಮ್ಸನ್
ಡಬ್ಲೂಟಿಸಿ ಫೈನಲ್ ಕೇವಲ ಒಂದು ಪಂದ್ಯವಾಗಿದ್ದು, ಇದಕ್ಕೆ ಸ್ವಲ್ಪ ಮಟ್ಟದಲ್ಲಿ ಹೆಚ್ಚಿನ ಮೌಲ್ಯ ಸೇರಿಸಲಾಗಿದೆ. ನಮಗೆ ಕಳೆದ ಐದು ವರ್ಷಗಳಲ್ಲಿ ಟೆಸ್ಟ್ ಪಂದ್ಯಗಳ ಮೌಲ್ಯ ಗೊತ್ತಾಗಿದ್ದು, ಹೀಗಾಗಿ ನಾವು ಅಗ್ರಸ್ಥಾನದಲ್ಲಿದ್ದೇವೆ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.