ETV Bharat / sports

ಭಾರತ ವಿರುದ್ಧದ WTC ಫೈನಲ್ ನನಗೆ ವಿಶ್ವಕಪ್ ಫೈನಲ್​ ಇದ್ದಂತೆ : ನೀಲ್ ವ್ಯಾಗ್ನರ್​ - Neil Wagner on WTC final

ಈ ಟೂರ್ನಿ ಮೊದಲನೆಯದು ಮತ್ತು ಬಹಳ ಇತಿಹಾಸವೇನಿಲ್ಲ ಎಂದು ನನಗೆ ತಿಳಿದಿದೆ. ಆದರೆ, ಇದು ಬಹಳ ದೊಡ್ಡ ಟೂರ್ನಿಯ ಆರಂಭವಾಗಿದೆ. ಬಹಳ ಉತ್ಸಾಹದಿಂದ ಕೂಡಿದೆ. ಭಾರತದಂತಹ ವಿಶ್ವದಲ್ಲೇ ಅತ್ಯುತ್ತಮ ತಂಡದೊಂದಿಗೆ ಆಡುವುದರಿಂದ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ..

ನೀಲ್ ವ್ಯಾಗ್ನರ್
ನೀಲ್ ವ್ಯಾಗ್ನರ್
author img

By

Published : May 30, 2021, 4:35 PM IST

ಲಂಡನ್ : ನ್ಯೂಜಿಲ್ಯಾಂಡ್ ಪರ ವೈಟ್ ಬಾಲ್ ತಂಡದಲ್ಲಿ ಒಂದೂ ಪಂದ್ಯವನ್ನಾಡದಿರುವ ನೀಲ್ ವ್ಯಾಗ್ನರ್​, ಭಾರತದ ವಿರುದ್ಧ ಮುಂಬರುವ WTC ಫೈನಲ್ ಪಂದ್ಯವೇ ತಮ್ಮ ಪಾಲಿನ ವಿಶ್ವಕಪ್​​ ಫೈನಲ್ ಎಂದು ಹೇಳಿದ್ದಾರೆ.

ಉದ್ಘಾಟನಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಜೂನ್​ 18ರಿಂದ 22 ರವರೆಗೆ ಸೌತಾಂಪ್ಟನ್​ನ ಏಜಿಯಸ್ ಬೌಲ್​ನಲ್ಲಿ ನಡೆಯಲಿದೆ.

ಇದು ನನ್ನ ಪಾಲಿಗೆ ವಿಶ್ವಕಪ್​ ಫೈನಲ್​ ಇದ್ದಂತೆ. ನಾನು ಎಂದಿಗೂ ನ್ಯೂಜಿಲೆಂಡ್‌ಗಾಗಿ ಸೀಮಿತ ಓವರ್​ಗಳ ಪಂದ್ಯವನ್ನಾಡಲಿಲ್ಲ ಅಥವಾ ಟಿ20 ಅಥವಾ ಏಕದಿನ ತಂಡದಲ್ಲಿ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಇದು ನನ್ನ ಜೀವನದ ದೊಡ್ಡ ನಿರಾಶೆ" ಎಂದು ಇಸ್​ಪಿನ್​ ಕ್ರಿಕ್​ಇನ್ಫೋಗೆ ಹೇಳಿದ್ದಾರೆ.

ಆ ಹಡಗು(ಕ್ರಿಕೆಟ್ ಜೀವನ) ಬಹುಶಃ ಈಗ ಪ್ರಯಾಣಿಸುತ್ತಿದೆ. ನನಗೆ ಎಂದಿಗೂ ಅವಕಾಶ ಸಿಗುವುದೇ ಇಲ್ಲ ಎಂದು ನಾನು ಭಾವಿಸುವುದಿಲ್ಲ.

ಆದರೆ, ಪ್ರಸ್ತುತ ನನ್ನೆಲ್ಲಾ ಗಮನ ಮತ್ತು ಸಾಮರ್ಥ್ಯವನ್ನು ಟೆಸ್ಟ್​ ಕ್ರಿಕೆಟ್​ಗೆ ಮೀಸಲಿಡಲು ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್, ವಿಶ್ವಕಪ್ ಫೈನಲ್ ಎಂದು ತಿಳಿದು ಆಡುವುದಕ್ಕೆ ಬಯಸುತ್ತೇನೆ ಎಂದು 35 ವರ್ಷದ ವೇಗಿ ಹೇಳಿದ್ದಾರೆ.

ಈ ಟೂರ್ನಿ ಮೊದಲನೆಯದು ಮತ್ತು ಬಹಳ ಇತಿಹಾಸವೇನಿಲ್ಲ ಎಂದು ನನಗೆ ತಿಳಿದಿದೆ. ಆದರೆ, ಇದು ಬಹಳ ದೊಡ್ಡ ಟೂರ್ನಿಯ ಆರಂಭವಾಗಿದೆ. ಬಹಳ ಉತ್ಸಾಹದಿಂದ ಕೂಡಿದೆ. ಭಾರತದಂತಹ ವಿಶ್ವದಲ್ಲೇ ಅತ್ಯುತ್ತಮ ತಂಡದೊಂದಿಗೆ ಆಡುವುದರಿಂದ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಈಗಾಗಲೇ ಭಾರತ ತಂಡದ ಅಶ್ವಿನ್​,ಪೂಜಾರ, ರಹಾನೆ ಮತ್ತು ಉಮೇಶ್ ಯಾದವ್​ ಕೂಡ WTC ಫೈನಲ್ ತಮ್ಮ ಪಾಲಿಗೆ ವಿಶ್ವಕಪ್​ ಇದ್ದಂತೆ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ: ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ನನ್ನ ಪಾಲಿನ ವಿಶ್ವಕಪ್ : ಉಮೇಶ್ ಯಾದವ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.