ETV Bharat / sports

ಗಾರ್ಡ್​ನರ್​ ಆಲ್​ರೌಂಡರ್​ ಆಟ, ಗುಜರಾತ್​ಗೆ 11 ರನ್​ಗಳ ಜಯ: ಆರ್​ಸಿಬಿ ಪ್ಲೇ ಆಫ್ ಹಾದಿ​ ಕಠಿಣ

author img

By

Published : Mar 17, 2023, 8:33 AM IST

ಗುರುವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ನ ಪಂದ್ಯದಲ್ಲಿ ಗುಜರಾತ್​ ತಂಡ ಡೆಲ್ಲಿಯನ್ನು ಮಣಿಸಿತು.

ಗುಜರಾತ್​ಗೆ 11 ರನ್​ಗಳ ಜಯ
ಗುಜರಾತ್​ಗೆ 11 ರನ್​ಗಳ ಜಯ

ಮುಂಬೈ: ಇಲ್ಲಿಯ ಬ್ರಬೋರ್ನ್​ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್‌ನ (ಡಬ್ಲ್ಯೂಪಿಲ್) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ದ ಗುಜರಾತ್​ ಜೈಂಟ್ಸ್​ 11 ರನ್​ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಮೂಲಕ ಲೀಗ್​ನಲ್ಲಿ ಎರಡನೇ ಗೆಲುವು ದಾಖಲಿಸಿ ಪ್ಲೇ ಆಫ್​ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್​ಗಿಳಿದ ಗುಜರಾತ್ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್​ ಕಲೆಹಾಕಿತು. ಆರಂಭಿಕ ಆಟಗಾರ್ತಿ ಸೋಫಿಯಾ ಕೇವಲ 4 ರನ್​ ಕಲೆಹಾಕಿ ಮರಿಜೆನ್ನೆ ಅವರ ಮೊದಲ ಓವರ್​ನ ಕೊನೆಯ ಎಸೆತದಲ್ಲಿ ಜೊನಾಸೆನ್​ಗೆ ಕ್ಯಾಚಿತ್ತು ಪೆವಿಲಿಯನ್​ ಸೇರಿದರು. ಬಳಿಕ ಕ್ರೀಸ್​ಗಿಳಿದ ಡಿಯೋಲ್​, ಲಾರಾ ವೋಲ್ವರ್ಡ್​ ಜತೆಗೂಡಿ ಇನ್ನಿಂಗ್ಸ್​ ಕಟ್ಟಲು ಆರಂಭಿಸಿದರು. 33 ಎಸೆತಗಳಲ್ಲಿ ನಾಲ್ಕು ಬೌಂಡರಿಯೊಂದಿಗೆ 31 ರನ್ ಸೇರಿಸಿದ ಡಿಯೋಲ್​ 9.5ನೇ ಓವರ್‌​ನಲ್ಲಿ ಜೊನಾಸೆನ್​ ಎಸೆತದಲ್ಲಿ ತಾನಿಯಾ ಭಾಟಿಯಾಗೆ ಕ್ಯಾಚ್​ ನೀಡಿ ಹೊರನಡೆದರು. ಎರಡನೇ ವಿಕೆಟ್​ಗೆ ಈ ಜೋಡಿ 53 ರನ್ ಪೇರಿಸಿತ್ತು.

ಬಳಿಕ ಬಂದ ಗಾರ್ಡ್​ನರ್​, ಲಾರಾ ಜೋಡಿ ಮೂರನೇ ವಿಕೆಟ್​ಗೆ 134 ರನ್​ಗಳ ಜೊತೆಯಾಟ ನೀಡಿ ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.​ 45 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್​ನೊಂದಿಗೆ 57 ರನ್​ ಚಚ್ಚಿದ ಲಾರಾ ವೋಲ್ವರ್ಟ್ 18.4ನೇ ಓವರ್​ನಲ್ಲಿ ಅರುಂಧತಿಗೆ ವಿಕೆಟ್​ ಒಪ್ಪಿಸಿದರು. ಮತ್ತೊಂದು ಬದಿಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಸಿದ​ ಗಾರ್ಡ್ನರ್ 33 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ 51 ರನ್​ ಸಂಪಾದಿಸಿ ಅರ್ಧಶತಕ ಪೂರೈಸಿದರು. ಡೆಲ್ಲಿ ಪರ ಜೊನಾಸೆನ್ 2, ಮರಿಜೊನ್ನೆ, ಅರುಂಧತಿ ತಲಾ ಒಂದೊಂದು ವಿಕೆಟ್​ ಪಡೆದರು.

147 ರನ್​ ಸವಾಲಿನ ಗುರಿ ಬೆನ್ನತ್ತಿದ ಡೆಲ್ಲಿ ತಂಡ ಗುಜರಾತ್​ ಬೌಲರ್​ಗಳ ದಾಳಿಗೆ ಸಿಲುಕಿ 136 ರನ್​ಗಳಿಗೆ ಸರ್ವಪತನ ಕಂಡಿತು. ದೆಹಲಿ ಪರ ಮೆಗ್ ಲ್ಯಾನಿಂಗ್ (18), ಶಫಾಲಿ ವರ್ಮಾ(8), ಆಲಿಸ್ ಕ್ಯಾಪ್ಸೆ (22), ಜೆಮಿಮಾ ರೋಡ್ರಿಗಸ್(1), ಮರಿಜಾನೆ ಕಾಪ್(36), ಜೆಸ್ ಜೊನಾಸೆನ್(4), ತಾನ್ಯಾ ಭಾಟಿಯಾ(1), ಅರುಂಧತಿ ರೆಡ್ಡಿ (25), ರಾಧಾ ಯಾದವ್(1), ಶಿಖಾ ಪಾಂಡೆ(8) ಗಳಿಸಿದರು. ಮರಿಜೊನ್ನೆ (36) ರನ್​ ಸಂಗ್ರಹಿಸುವ ಮೂಲಕ ತಂಡದ ಟಾಪ್​ ಸ್ಕೋರರ್​ ಆದರು. ಗುಜರಾತ್​ ಪರ ಕಿಮ್​ ಗಾರ್ತ್​, ತನುಜಾ, ಗಾರ್ಡ್​ನರ್​ ತಲಾ ಎರಡು, ಸ್ನೇಹ ರಾಣ, ಹರ್ಲಿನ್​ ಡಿಯೋಲ್​ ತಲಾ ಒಂದು ವಿಕೆಟ್​ ಪಡೆದರು.

ಆರ್​ಸಿಬಿ ಪ್ಲೇ ಆಫ್​ ಹಾದಿ ಕಠಿಣ: ಗುಜರಾತ್​ ತಂಡದ ಎರಡನೇ ಗೆಲುವು ಆರ್​ಸಿಬಿ ಪ್ಲೇ ಆಫ್​ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಆರ್​ಸಿಬಿ ಪ್ಲೇ ಆಫ್​ಗೆ ಹೋಗಲು ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾಗಿದ್ದು, ಗುಜರಾತ್​ ಮತ್ತು ಯುಪಿ ವಾರಿಯರ್ಸ್​ ಉಳಿದ ಪಂದ್ಯಗಳನ್ನು ಸೋತದ್ದೇ ಆದಲ್ಲಿ ಪ್ಲೇ ಆಫ್ ಹಂತ​ ಪ್ರವೇಶಿಸಬಹುದು.

ಇದನ್ನೂ ಓದಿ: ಇಂಡಿಯಾ- ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ: ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಟೀಂ ಇಂಡಿಯಾ ಭರ್ಜರಿ ಅಭ್ಯಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.