ದುಬೈ: ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯ ಗೆಲ್ಲುತ್ತಿದ್ದಂತೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಹಿಂದಿಕ್ಕಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಭಾನುವಾರ ಇಂಗ್ಲೆಂಡ್ ವಿರುದ್ಧ ಮುಗಿದ ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸಿ ತಂಡವನ್ನು 275 ರನ್ಗಳಿಂದ ಮಣಿಸಿತು. ಈ ಮೂಲಕ ಆಡಿದ 2 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಶೇ 100 ರಷ್ಟು ಸರಾಸರಿಯೊಂದಿಗೆ ಶ್ರೀಲಂಕಾ ಜೊತೆಗೆ ಅಗ್ರಸ್ಥಾನವನ್ನು ಹಂಚಿಕೊಂಡಿದೆ.
ಶ್ರೀಲಂಕಾ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು 2-0ಯಲ್ಲಿ ಗೆಲವು ಸಾಧಿಸಿ 24 ಅಂಕ ಪಡೆದುಕೊಂಡಿದೆ. ಭಾರತ 5 ಪಂದ್ಯಗಳನ್ನಾಡಿದ್ದು, 3 ಗೆಲುವು, 1 ಸೋಲು ಮತ್ತು 2 ಡ್ರಾ ಸಾಧಿಸಿ 58.33 ಗೆಲುವಿನ ಸರಾಸರಿಯೊಂದಿಗೆ 4ನೇ ಸ್ಥಾನದಲ್ಲಿದೆ.
-
Two wins in two Tests, Australia are ruling the #WTC23 standings alongside Sri Lanka 🌟#Ashes | #AUSvENG pic.twitter.com/LaICTLLvCZ
— ICC (@ICC) December 20, 2021 " class="align-text-top noRightClick twitterSection" data="
">Two wins in two Tests, Australia are ruling the #WTC23 standings alongside Sri Lanka 🌟#Ashes | #AUSvENG pic.twitter.com/LaICTLLvCZ
— ICC (@ICC) December 20, 2021Two wins in two Tests, Australia are ruling the #WTC23 standings alongside Sri Lanka 🌟#Ashes | #AUSvENG pic.twitter.com/LaICTLLvCZ
— ICC (@ICC) December 20, 2021
ಪಾಕಿಸ್ತಾನ 75 ಸರಾಸರಿಯೊಂದಿಗೆ 3ನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್(ಶೇ25), ನ್ಯೂಜಿಲ್ಯಾಂಡ್ ಇಂಗ್ಲೆಂಡ್(ಶೇ 08.33) 6 ಮತ್ತು 7ನೇ ಸ್ಥಾನದಲ್ಲಿವೆ. 2021-23ರವರೆಗಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಪ್ರತಿ ಪಂದ್ಯಕ್ಕೆ 12 ಅಂಕಗಳನ್ನು ನಿಗದಿ ಮಾಡಲಾಗಿದೆ. ಪಂದ್ಯ ಡ್ರಾ ಸಾಧಿಸಿದರೆ ಎರಡೂ ತಂಡಗಳು 4 , ಟೈ ಆದರೆ 6 ಅಂಕಗಳನ್ನು ಪಡೆಯಲಿವೆ
ಹೆಚ್ಚು ಗೆಲುವಿನ ಸರಾಸರಿ ಪಡೆಯುವ ಮೊದಲೆರಡು ತಂಡಗಳು ಫೈನಲ್ ಪ್ರವೇಶಿಸಲಿವೆ. 5 ಪಂದ್ಯಗಳ ಸರಣಿಗೆ 60 ಅಂಕ ಮತ್ತು 2 ಪಂದ್ಯಗಳ ಸರಣಿಗೆ 24 ಅಂಕಗಳಿರಲಿವೆ. 3 ಪಂದ್ಯಗಳ ಸರಣಿಗೆ 36 ಅಂಕ ನಿಗದಿಯಾಗಿದೆ.
ಇದನ್ನೂ ಓದಿ:ಆ್ಯಶಸ್ ಸರಣಿ : ಡೇ ಅಂಡ್ ನೈಟ್ನಲ್ಲಿ ಆಸೀಸ್ ಅಜೇಯ, ಇಂಗ್ಲೆಂಡ್ ವಿರುದ್ಧ 275 ರನ್ಗಳ ಜಯ