ETV Bharat / sports

ಹಾರ್ದಿಕ್ ಅನುಪಸ್ಥಿತಿಯಲ್ಲಿ ಸೂರ್ಯ, ಶಮಿ ತಂಡದ ಮುಂದಿರುವ ಆಯ್ಕೆ: ರಾಹುಲ್ ದ್ರಾವಿಡ್ - ಕುಲದೀಪ್ ಯಾದವ್

ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ಭಾರತದ ಮುಂದಿನ ಪಂದ್ಯದಲ್ಲಿ ಆಡಲು ಪ್ರಸ್ತುತ ತಂಡದ ಆಡಳಿತವು ವಿಭಿನ್ನ ಸಂಯೋಜನೆಗಳನ್ನು ನೋಡುತ್ತಿದೆ ಎಂದು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Oct 21, 2023, 10:10 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಹಾರ್ದಿಕ್​ ಪಾಂಡ್ಯ ಅವರ ಅಲಭ್ಯತೆಯಲ್ಲಿ ಟೀಮ್ ಇಂಡಿಯಾ ಪ್ರಮುಖ ಬದಲಾವಣೆಗಳನ್ನು ನ್ಯೂಜಿಲೆಂಡ್​ ವಿರುದ್ಧದ ಪಂದ್ಯಕ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾರ್ದಿಕ್ ಜಾಗಕ್ಕೆ ಸೂರ್ಯ ಕುಮಾರ್​ ಯಾದವ್​ ಅಥವಾ ಮೊಹಮ್ಮದ್​ ಶಮಿ ಅವರನ್ನು ಆಡಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ತಂಡ ಕೋಚ್​ ರಾಹುಲ್​ ದ್ರಾವಿಡ್​ ನ್ಯೂಜಿಲೆಂಡ್​ ಪಂದ್ಯಕ್ಕೂ ಒಂದು ದಿನ ಮೊದಲೇ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

"ಇಶಾನ್ ಕಿಶನ್ ಮಧ್ಯಮ ಕ್ರಮಾಂಕದಲ್ಲಿ ಆಡುವ ಸಾಮರ್ಥ್ಯವನ್ನು ಈಗಾಗಲೇ ಸಾಬೀತು ಮಾಡಿದ್ದಾರೆ. ಹಾಗೇ ಅವರು ಎಡಗೈ ಬ್ಯಾಟರ್​ ಆಗಿರುವುದು ತಂಡಕ್ಕೆ ಸಹಕಾರಿ ಆಗಲಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸೂರ್ಯಕುಮಾರ್​ ಯಾದವ್​ ಅವರನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸೂರ್ಯ ಯಾವುದೇ ರೀತಿಯ ಸ್ಪಿನ್ನರ್​ಗಳ ವಿರುದ್ಧ ಉತ್ತಮವಾಗಿ ಆಡಬಲ್ಲರು. ಕೆಳ ಕ್ರಮಾಂಕದಲ್ಲಿ ರನ್​ ಗತಿ ಹೆಚ್ಚಿಸುವ ಕೆಲಸವನ್ನು ಸೂರ್ಯ ಮಾಡಬಲ್ಲರು‘‘ ಎಂದು ದ್ರಾವಿಡ್​ ಭರವಸೆ ವ್ಯಕ್ತಪಡಿಸಿದ್ದಾರೆ.

ಶಾರ್ದೂಲ್ ಠಾಕೂರ್ ಬಗ್ಗೆ ಮಾತನಾಡಿದ ರಾಹುಲ್​ "ಅವರು ವಿಕೆಟ್‌ಗಳನ್ನು ತೆಗೆದುಕೊಳ್ಳುವ ವಿಶೇಷ ಕೌಶಲ್ಯ ಹೊಂದಿರುವವರು ಮತ್ತು ಕೆಲವು ವಿಕೆಟ್‌ ಪಡೆಯುವಲ್ಲಿ ನಮಗೆ ನಾಲ್ಕನೇ ಸೀಮಿಂಗ್ ಆಯ್ಕೆಯಾಗಿದ್ದಾರೆ. ಕಳೆದ ಕೆಲ ಸಮಯದಿಂದ ಅವರಿಗೆ ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಅವರು ತಮ್ಮ ಬ್ಯಾಟಿಂಗ್‌ನೊಂದಿಗೆ ನೆಟ್ಸ್‌ನಲ್ಲಿ ತುಂಬಾ ಶ್ರಮಿಸುತ್ತಿದ್ದಾರೆ. ದೊಡ್ಡ ಹೊಡೆತಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಟೆಸ್ಟ್​ನಲ್ಲಿ ಕೆಳ ಕ್ರಮಾಂಕದಲ್ಲಿ ಹೆಚ್ಚು ಅವಕಾಶ ಸಿಗುತ್ತದೆ. ಏಕದಿನದಲ್ಲಿ ಅವಕಾಶ ಕಡಿಮೆ. ವಿಶ್ವಕಪ್​ನಲ್ಲಿ ಅವರಿಗೆ ಈ ವರೆಗೆ ಬ್ಯಾಟಿಂಗ್​ ಅವಕಾಶ ಸಿಕ್ಕಿಲ್ಲ" ಎಂದಿದ್ದಾರೆ.

ಪಾಂಡ್ಯ ಕೊರತೆ ಕಾಡುತ್ತೆ.. ಆದರೆ?: ಹಾರ್ದಿಕ್​ ಪಾಂಡ್ಯ ಅವರ ಕೊರತೆಯಿಂದ ನಾಲ್ಕನೇ ವೇಗದ ಬೌಲಿಂಗ್​ ಆಯ್ಕೆ ಇಲ್ಲದಂತಾಗುತ್ತದೆ. ಈ ಕ್ರಮದ ಬಗ್ಗೆ ಕೇಳಿದಾಗ,"ಮೊಹಮ್ಮದ್ ಶಮಿ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಇನ್ನೊಂದು ಬೌಲಿಂಗ್​ ಆಸರೆ ಆಗುತ್ತಾರೆ. ಶಮಿಯನ್ನು ಆಡಿಸುವುದು ಉತ್ತಮ ಆಯ್ಕೆ. ಅದೇ ಸಂದರ್ಭದಲ್ಲಿ ಅನುಭವಿ ಸ್ಪಿನ್ನರ್​ ಅಶ್ವಿನ್ ಅವರನ್ನು ಆಡುಸುವುದು ಸಹ ಒಳಿತೇ. ಒಟ್ಟಿನಲ್ಲಿ ಹಾರ್ದಿಕ್​ ತಂಡಕ್ಕೆ ಮರಳುವ ವರೆಗೆ ಕೆಲ ಬದಲಾವಣೆಗಳನ್ನು ಪ್ರತಿ ಪಂದ್ಯದಲ್ಲಿ ಮಾಡಲು ಅವಕಾಶ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಸ್ಪಿನ್ನರ್‌ಗಳನ್ನು ಕೋಚ್​ ರಾಹುಲ್ ದ್ರಾವಿಡ್ ಶ್ಲಾಘಿಸಿದರು. ಮೊದಲ ಪಂದ್ಯದಲ್ಲಿ ಮೂವರು ಮತ್ತು ನಂತರದ ಮೂರು ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದರು. "ಸ್ಪಿನ್​ ಬೌಲರ್​ಗಳು ಪಂದ್ಯಗಳನ್ನು ನಿಯಂತ್ರಿಸುತ್ತಾರೆ. ವಿಕೆಟ್‌ಗಳನ್ನು ತೆಗೆದುಕೊಳ್ಳಲು, ರನ್ ದರವನ್ನು ತಗ್ಗಿಸಲು ಸಮರ್ಥರಾಗಿದ್ದಾರೆ. ಇದು ಅವರ ಕೌಶಲ್ಯ ಮತ್ತು ಸಾಮರ್ಥ್ಯಕ್ಕೆ ಸಂಬಂಧಿಸಿದೆ. ಇಬ್ಬರು ಎಡಗೈ ಸ್ಪಿನ್ನರ್​ಗಳು ಕಳೆದ ಪಂದ್ಯಗಳಲ್ಲಿ ಎದುರಾಳಿಗೆ ಕಾಡಿದ್ದಾರೆ" ಎಂದರು.

ಎರಡನೇ ಇನ್ನಿಂಗ್ಸ್​ ವೇಳೆ ಮಂಜಿನ ಅಂಶದ ಬಗ್ಗೆ ಮಾತನಾಡಿದ ಅವರು," ನಾವು ಧರ್ಮಶಾಲಾದಲ್ಲಿದ್ದೇವೆ, ವಾತಾವರಣವು ತಂಪಾಗಿರುತ್ತದೆ, ಆದ್ದರಿಂದ ಇಬ್ಬನಿ ಬೀಳುತ್ತದೆ. ಆದರೆ ಅದರ ಬಗ್ಗೆ ಹೆಚ್ಚು ಯೋಚಿಸಲು ಸಾಧ್ಯವಿಲ್ಲ. ಅದಕ್ಕೆ ತಕ್ಕಂತೆ ತಂತ್ರಗಳನ್ನುಮಾಡಬಹುದು, ಆದರೆ ನೀವು ಟಾಸ್ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ನೆದರ್ಲ್ಯಾಂಡ್ಸ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ಬೌಲಿಂಗ್​ ನಿರ್ವಹಣೆ ಮಾಡಿದೆ. ಹೀಗಾಗಿ ಯಾವುದನ್ನು ಪೂರ್ವ ನಿರ್ಧಾರ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ. ( Meenakshi Rao)

ಇದನ್ನೂ ಓದಿ: ಅಬ್ಬರಿಸಿ ಬೊಬ್ಬಿರಿದ ಹರಿಣ ಪಡೆ: ಹಾಲಿ ಚಾಂಪಿಯನ್​ ಇಂಗ್ಲೆಂಡ್​ಗೆ ಮಣ್ಣುಮುಕ್ಕಿಸಿದ ದ.ಆಫ್ರಿಕಾ.. ಆಂಗ್ಲರಿಗೆ 229 ರನ್​​ಗಳ ಹೀನಾಯ ಸೋಲು​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.