ಪುಣೆ (ಮಹಾರಾಷ್ಟ್ರ): ವಿಶ್ವಕಪ್ಗೂ ಮುನ್ನ ಶ್ರೀಲಂಕಾದಲ್ಲಿ ಟಿ20 ಲೀಗ್ ನಡೆದ ಕಾರಣ ಗಾಯಾಳುಗಳ ಸಮಸ್ಯೆ ಎದುರಿಸಿತ್ತು. ಇದರಿಂದ 15 ಸದಸ್ಯರ ತಂಡ ಪ್ರಕಟಿಸಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಹೆಣಗಾಡಿತ್ತು. ಅದರಲ್ಲೂ ಪ್ರಮುಖ ಆಲ್ರೌಂಡರ್ ವನಿಂದು ಹಸರಂಗ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳದ ಕಾರಣ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ವಿಶ್ವಕಪ್ಗಾಗಿ ಭಾರತಕ್ಕೆ ಪ್ರವಾಸ ಮಾಡಿದ 15 ಜನ ಸದಸ್ಯರಲ್ಲೇ ಮೂವರು ಆಟಗಾರರು ಗಾಯಗೊಂಡಿದ್ದು, ಗೆಲುವಿಗಾಗಿ ಹವಣಿಸುತ್ತಿರುವ ಸಿಂಹಳಿಯರಿಗೆ ಇದರಿಂದ ದೊಡ್ಡ ಹಿನ್ನಡೆ ಆಗಿದೆ.
ಎಡ-ತೊಡೆಯ ಸ್ನಾಯುವಿನ ಗಾಯದಿಂದಾಗಿ ತಮ್ಮ ಇನ್ ಫಾರ್ಮ್ ವೇಗದ ಬೌಲರ್ ಲಹಿರು ಕುಮಾರ ಅವರು ನಡೆಯುತ್ತಿರುವ ಐಸಿಸಿ ವಿಶ್ವಕಪ್ 2023 ರ ಮಾರ್ಕ್ಯೂ ಈವೆಂಟ್‌ನಿಂದ ಹೊರಗುಳಿದಿದ್ದಾರೆ. ಪಂದ್ಯಾವಳಿಯ ಉಳಿದ ಭಾಗಕ್ಕೆ ಅವರ ಬದಲಿಗೆ ಮತ್ತೊಬ್ಬ ವೇಗದ ಬೌಲರ್ ದುಷ್ಮಂತ ಚಮೀರ ಅವರನ್ನು ನೇಮಿಸಲಾಗಿದೆ.
-
🚨 JUST IN: Sri Lanka face more injury woes as a seasoned international with over 100 appearances joins their #CWC23 squad.
— ICC Cricket World Cup (@cricketworldcup) October 29, 2023 " class="align-text-top noRightClick twitterSection" data="
Details 👇https://t.co/I89IqE1XOr
">🚨 JUST IN: Sri Lanka face more injury woes as a seasoned international with over 100 appearances joins their #CWC23 squad.
— ICC Cricket World Cup (@cricketworldcup) October 29, 2023
Details 👇https://t.co/I89IqE1XOr🚨 JUST IN: Sri Lanka face more injury woes as a seasoned international with over 100 appearances joins their #CWC23 squad.
— ICC Cricket World Cup (@cricketworldcup) October 29, 2023
Details 👇https://t.co/I89IqE1XOr
ಸೋಮವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಸ್ಟೇಡಿಯಂನಲ್ಲಿ ಶ್ರೀಲಂಕಾ ಅಫ್ಘಾನಿಸ್ತಾನ ವಿರುದ್ಧ ಗೆಲ್ಲಲೇಬೇಕಾದ ಮುಖಾಮುಖಿ ಪಂದ್ಯದ ಮೊದಲು ತರಬೇತಿ ಅವಧಿಯಲ್ಲಿ ಲಹಿರು ಕುಮಾರ ಎಡತೊಡೆಗೆಯ ಗಾಯಕ್ಕೆ ತುತ್ತಾದರು. ಅವರ ಸ್ಥಾನಕ್ಕೆ ಸಹ ವೇಗಿ ದುಷ್ಮಂತ ಚಮೀರಾ ಅವರನ್ನು ಸೇರಿಸಿಕೊಳ್ಳಲಾಗಿದೆ.
ಚಮೀರಾ ಸೇರ್ಪಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಈವೆಂಟ್ ಟೆಕ್ನಿಕಲ್ ಕಮಿಟಿ ಭಾನುವಾರ ಅನುಮೋದನೆ ನೀಡಿದೆ. "ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಈವೆಂಟ್ ತಾಂತ್ರಿಕ ಸಮಿತಿಯು ಶ್ರೀಲಂಕಾ ತಂಡದಲ್ಲಿ ಲಹಿರು ಕುಮಾರ ಬದಲಿಗೆ ದುಷ್ಮಂತ ಚಮೀರಾ ಅವರನ್ನು ಅನುಮೋದಿಸಿದೆ" ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ - ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಲಹಿರು ಕುಮಾರ ಅವರು 3-35ರ ಅದ್ಭುತ ಬೌಲಿಂಗ್ ಮಾಡಿದ್ದರು. ಇದರಿಂದ ಹಾಲಿ ಚಾಂಪಿಯನ್ಗಳು ಅಲ್ಪಮೊತ್ತಕ್ಕೆ ಕುಸಿತ ಕಂಡರು. ಇಂಗ್ಲೆಂಡ್ ವಿರುದ್ಧ ಶ್ರೀಲಂಕಾ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವಲ್ಲಿ ಲಹಿರು ಮಹತ್ವದ ಪಾತ್ರ ವಹಿಸಿದ್ದರು.
ಕುಮಾರ ಅವರ ಅನುಪಸ್ಥಿತಿಯು ಶ್ರೀಲಂಕಾಕ್ಕೆ ಮೂರನೇ ಗಾಯದ ಬರೆಯಾಗಿದೆ. ನಾಯಕ ದಸುನ್ ಶನಕ ಅವರ ಕ್ವಾಡ್ ಮತ್ತು ಮಥೀಶ ಪತಿರಾನ ಅವರು ಭುಜದ ಗಾಯಕ್ಕೆ ತುತ್ತಾಗಿದ್ದರಿಂದ ಈಗಾಗಲೇ ತಂಡದಿಂದ ಹೊರಗುಳಿದಿದ್ದಾರೆ. ಶ್ರೀಲಂಕಾ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನ ಐದು ಪಂದ್ಯಗಳಲ್ಲಿ ಎರಡನ್ನು ಗೆದ್ದಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಶ್ರೀಲಂಕಾ ತಂಡ: ಕುಸಲ್ ಮೆಂಡಿಸ್ (ನಾಯಕ), ಕುಸಾಲ್ ಪೆರೇರಾ, ಪಾತುಮ್ ನಿಸ್ಸಾಂಕ, ದುಷ್ಮಂತ ಚಮೀರ, ದಿಮುತ್ ಕರುಣರತ್ನೆ, ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಮಹೇಶ್ ತೀಕ್ಷ್ಣ, ದುನಿತ್ ವೆಲ್ಲಲಾಗೆ, ಕಸುನ್ ರಜಿತ, ಏಂಜೆಲೊ ಮಥೆವ್ದುಶಾನ್, ದುನಿತ್ ವೆಲ್ಲಲಾಗೆ, ಏಂಜೆಲೊ ಹೇಶಾನ್ ಮಥೆವ್ದುಶಾನ್ ಚಾಮಿಕಾ ಕರುಣಾರತ್ನೆ.