ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023 ಅಕ್ಟೋಬರ್ 5 ರಿಂದ ಆರಂಭವಾಗಲಿದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 2011ರಲ್ಲಿ ವಿಶ್ವಕಪ್ ವಿಜೇತ ತಂಡದಲ್ಲಿ ಭಾಗವಹಿಸಿದ್ದ ಇಬ್ಬರು ಆಟಗಾರರಾಗಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅಮೋಘ ಪ್ರದರ್ಶನ ನೀಡುವಲ್ಲಿ ಇವರಿಬ್ಬರು ಪ್ರಮುಖ ಪಾತ್ರ ವಹಿಸಿದ್ದರು. ಈಗ 2023 ರಲ್ಲಿ ವಿರಾಟ್ ಕೊಹ್ಲಿ ತಮ್ಮ ನಾಲ್ಕನೇ ವಿಶ್ವಕಪ್ ಮತ್ತು ರವಿಚಂದ್ರನ್ ಅಶ್ವಿನ್ ತಮ್ಮ ಮೂರನೇ ಏಕದಿನ ವಿಶ್ವಕಪ್ ಆಡಲಿದ್ದಾರೆ.
-
- 2011 World Cup.
— Mufaddal Vohra (@mufaddal_vohra) September 28, 2023 " class="align-text-top noRightClick twitterSection" data="
- 2023 World Cup.
Virat Kohli and Ravi Ashwin are the only two players from the 2011 Indian squad playing the 2023 World Cup. pic.twitter.com/zK9sD46pTj
">- 2011 World Cup.
— Mufaddal Vohra (@mufaddal_vohra) September 28, 2023
- 2023 World Cup.
Virat Kohli and Ravi Ashwin are the only two players from the 2011 Indian squad playing the 2023 World Cup. pic.twitter.com/zK9sD46pTj- 2011 World Cup.
— Mufaddal Vohra (@mufaddal_vohra) September 28, 2023
- 2023 World Cup.
Virat Kohli and Ravi Ashwin are the only two players from the 2011 Indian squad playing the 2023 World Cup. pic.twitter.com/zK9sD46pTj
ವಿರಾಟ್ಗೆ ಇದು ನಾಲ್ಕನೇ ವಿಶ್ವಕಪ್: ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಒಂದು ಬ್ರ್ಯಾಂಡ್ ಎಂದರೆ ತಪ್ಪಾಗದು. ಕಿಂಗ್ ಕೊಹ್ಲಿಗೆ ಬೌಲಿಂಗ್ ಮಾಡಲು ಬೌಲರ್‌ಗಳು ಹಿಂದೇಟು ಹಾಕುತ್ತಾರೆ. ವಿರಾಟ್ ಅದ್ಭುತ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಹೊಡೆಯುವ ಮೂಲಕ ಬೌಲರ್‌ಗಳನ್ನು ಮೈದಾನದ ತುಂಬಾ ಚೆಂಡಾಡುತ್ತಾರೆ. ಕೊಹ್ಲಿಯ ಅಮೋಘ ಬ್ಯಾಟಿಂಗ್ಗೆ ದೇಶ ಮಾತ್ರವಲ್ಲದೆ ಹೊರ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ.
ಪ್ರಸ್ತುತ ತಂಡದಲ್ಲಿ ಸತತ 4 ವಿಶ್ವಕಪ್‌ಗಳನ್ನು ಆಡಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ವಿರಾಟ್ 2011, 2015 ಮತ್ತು 2019 ರ ವಿಶ್ವಕಪ್‌ನಲ್ಲಿ ಭಾರತದ ಪರ ಬ್ಯಾಟ್ ಬೀಸಿದ್ದಾರೆ. ಇದೀಗ 2023ರ ವಿಶ್ವಕಪ್‌ನಲ್ಲೂ ಕೊಹ್ಲಿಯಿಂದ ಅತ್ಯುತ್ತಮ ಪ್ರದರ್ಶನವನ್ನು ಭಾರತೀಯ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಮತ್ತು ಅವರ ಬ್ಯಾಟ್‌ನಿಂದ ಸಾಕಷ್ಟು ರನ್‌ಗಳು ಬರುತ್ತಿವೆ, ಆದ್ದರಿಂದ ಅವರು ಎದುರಾಳಿ ತಂಡಗಳಿಗೆ ಅವರ ಭಯ ಇರುವುದಂತೂ ನಿಜ.
-
Forever grateful 🙏 pic.twitter.com/cpxoUNS0uG
— Virat Kohli (@imVkohli) August 18, 2023 " class="align-text-top noRightClick twitterSection" data="
">Forever grateful 🙏 pic.twitter.com/cpxoUNS0uG
— Virat Kohli (@imVkohli) August 18, 2023Forever grateful 🙏 pic.twitter.com/cpxoUNS0uG
— Virat Kohli (@imVkohli) August 18, 2023
ಫಾರ್ಮ್‌ನಲ್ಲಿದ್ದಾರೆ ವಿರಾಟ್: ವಿರಾಟ್ ಕೊಹ್ಲಿ ಏಕದಿನ ವಿಶ್ವಕಪ್‌ನ 26 ಪಂದ್ಯಗಳಲ್ಲಿ 1030 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 46.81 ಮತ್ತು ಸ್ಟ್ರೈಕ್ ರೇಟ್ 86.70 ಆಗಿದೆ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಮತ್ತು ಯುವರಾಜ್ ಸಿಂಗ್ ಅವರಂತಹ ವಿಶ್ವ ದರ್ಜೆಯ ಆಟಗಾರರೊಂದಿಗೆ ವಿಜೇತ ತಂಡದ ಪಾಲುದಾರಾರಿದ್ದರು. ಈಗ ಅವರ ಅನುಭವ ತಂಡಕ್ಕೆ ಬ್ಯಾಟಿಂಗ್ ಜೊತೆ ಅಲ್ಲದೇ ಮೈದಾನದಲ್ಲೂ ಸಹಕಾರಿ ಆಗಲಿದೆ.
2011 ರಲ್ಲಿ ವಿರಾಟ್: 2011ರ ವಿಶ್ವಕಪ್ ಸಮಯದಲ್ಲಿ ಭಾರತದ ಯುವ ಆಟಗಾರ ಆಗಿದ್ದರು. ದಿಗ್ಗಜ ಆಟಗಾರರ ನಡುವೆ ವಿರಾಟ್ 82.22ರ ಸ್ಟ್ರೈಕ್ ರೇಟ್ನಲ್ಲಿ 282 ರನ್ ಕಲೆ ಹಾಕಿದ್ದರು. ಅದರಲ್ಲಿ ಅವರು 1 ಶತಕ ಮತ್ತು ಅರ್ಧಶತಕವನ್ನು ಗಳಿಸಿದ್ದರು. ಅವರ ಅತ್ಯುತ್ತಮ ಸ್ಕೋರ್ ಅಜೇಯ 100 ರನ್ ಆಗಿದೆ.
ಅಶ್ವಿನ್‌ಗೆ ಮೂರನೇ ವಿಶ್ವಕಪ್: ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಕೇರಮ್ ಬೌಲಿಂಗ್ ವಿಶ್ವದ ಅನುಭವಿ ಆಟಗಾರರನ್ನು ಬುಡಮೇಲು ಮಾಡುತ್ತದೆ. 2011ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ಅಶ್ವಿನ್ ಕೂಡ ಒಬ್ಬರಾಗಿದ್ದರು. ಸಚಿನ್, ಸೆಹ್ವಾಗ್ ಮತ್ತು ಯುವರಾಜ್ ಅವರಂತಹ ದಿಗ್ಗಜರೊಂದಿಗೆ ವಿಶ್ವಕಪ್ ಪಂದ್ಯಗಳನ್ನು ಆಡಿ ಟ್ರೋಫಿ ಎತ್ತಿದ ಅನುಭವ ಅವರಿಗಿದೆ. 2011ರ ವಿಶ್ವಕಪ್‌ನಲ್ಲಿ ಅಶ್ವಿನ್ ಮೊದಲ ಏಕದಿನ ಆಡಿದ್ದರು. ಇದಾದ ಬಳಿಕ 2015ರ ವಿಶ್ವಕಪ್ ನಲ್ಲಿ ಅಶ್ವಿನ್ ತಮ್ಮ ಮ್ಯಾಜಿಕ್ ತೋರಿಸಿದ್ದರು. ಅವರನ್ನು 2019 ರ ವಿಶ್ವಕಪ್ ತಂಡದಿಂದ ಕೈಬಿಡಲಾಯಿತು. ಆದರೆ, ಈಗ ಮತ್ತೊಮ್ಮೆ ಅಶ್ವಿನ್ ಅವರನ್ನು 2023 ರ ವಿಶ್ವಕಪ್ ತಂಡಕ್ಕೆ ಸೇರಿಸಲಾಗಿದೆ.
-
🗣️ R Ashwin decodes THAT Marnus Labuschagne dismissal that has got everyone talking! 👌 👌 - By @28anand #TeamIndia | #INDvAUS | @ashwinravi99 | @IDFCFIRSTBank pic.twitter.com/6j9x4iQlFh
— BCCI (@BCCI) September 25, 2023 " class="align-text-top noRightClick twitterSection" data="
">🗣️ R Ashwin decodes THAT Marnus Labuschagne dismissal that has got everyone talking! 👌 👌 - By @28anand #TeamIndia | #INDvAUS | @ashwinravi99 | @IDFCFIRSTBank pic.twitter.com/6j9x4iQlFh
— BCCI (@BCCI) September 25, 2023🗣️ R Ashwin decodes THAT Marnus Labuschagne dismissal that has got everyone talking! 👌 👌 - By @28anand #TeamIndia | #INDvAUS | @ashwinravi99 | @IDFCFIRSTBank pic.twitter.com/6j9x4iQlFh
— BCCI (@BCCI) September 25, 2023
ಅಶ್ವಿನ್ ವಿಶ್ವಕಪ್‌ನಲ್ಲಿ 10 ಪಂದ್ಯಗಳನ್ನು ಆಡಿದ್ದು, 97 ಓವರ್‌ಗಳನ್ನು ಬೌಲಿಂಗ್‌ನಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. 2011ರ ವಿಶ್ವಕಪ್‌ನಲ್ಲಿ ಅಶ್ವಿನ್‌ಗೆ 2 ಪಂದ್ಯಗಳನ್ನು ಆಡುವ ಅವಕಾಶ ಸಿಕ್ಕಿತ್ತು. ಅವರು 2011 ರ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್ ಪಡೆದರು. 2015ರ ವಿಶ್ವಕಪ್‌ನಲ್ಲಿ ಅಶ್ವಿನ್ 14 ವಿಕೆಟ್ ಪಡೆದಿದ್ದರು. ಇದೀಗ ಅಶ್ವಿನ್ ಮತ್ತೊಮ್ಮೆ ಭಾರತದ ಪಿಚ್‌ಗಳಲ್ಲಿ ತಮ್ಮ ಕೈಚಳಕ ತೋರಿಸಲು ಅನುಭವದ ಜೊತೆ ಸಿದ್ಧವಾಗಿದ್ದಾರೆ.
ಸಚಿನ್ ತೆಂಡೂಲ್ಕರ್ ಹೆಚ್ಚು ವಿಶ್ವಕಪ್ ಆಡಿದ ಆಟಗಾರ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಪರ ಗರಿಷ್ಠ ಏಕದಿನ ವಿಶ್ವಕಪ್ ಆಡಿದ್ದಾರೆ. ಸಚಿನ್ 1992 ರಿಂದ 2011 ರವರೆಗೆ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದಾರೆ. ಭಾರತ ಪರ 6 ಏಕದಿನ ವಿಶ್ವಕಪ್ ಆಡಿದ ಮೊದಲ ಮತ್ತು ಏಕೈಕ ಆಟಗಾರ ಸಚಿನ್. ಸಚಿನ್ ವಿಶ್ವಕಪ್‌ನಲ್ಲಿ ಭಾರತದ ಪರ 45 ಪಂದ್ಯಗಳಲ್ಲಿ 2278 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ತಂಡ ಬಲಿಷ್ಠ ಆಲ್ರೌಂಡರ್ಗಳನ್ನು ಹೊಂದಿದೆ.. ವಿಶ್ವಕಪ್ ಗೆಲ್ಲುತ್ತದೆ: ಜಡೇಜಾ ಬಾಲ್ಯದ ಕೋಚ್ ಮಹೇಂದ್ರ ಸಿಂಗ್ ವಿಶ್ವಾಸ