ಹೈದರಾಬಾದ್: ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವೇ ಆಗಿದೆ ಎಂಬ ಮಾತು ಆಗಾಗ ಕೇಳುತ್ತಿರುತ್ತೇವೆ. ಅದಕ್ಕೆ ನಿದರ್ಶನ ಎಂಬಂತೆ ಪ್ರೇಕ್ಷಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬಂದು ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸಿದ ದಾಖಲೆ ನಿರ್ಮಾಣ ಆಗಿದೆ. ಈ ಬಗ್ಗೆ ಐಸಿಸಿಯೇ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿಕೊಂಡಿದೆ.
-
Another milestone achieved at #CWC23 😍
— ICC Cricket World Cup (@cricketworldcup) November 11, 2023 " class="align-text-top noRightClick twitterSection" data="
More 👉 https://t.co/xc0si1DhMF pic.twitter.com/gKeW87nI3B
">Another milestone achieved at #CWC23 😍
— ICC Cricket World Cup (@cricketworldcup) November 11, 2023
More 👉 https://t.co/xc0si1DhMF pic.twitter.com/gKeW87nI3BAnother milestone achieved at #CWC23 😍
— ICC Cricket World Cup (@cricketworldcup) November 11, 2023
More 👉 https://t.co/xc0si1DhMF pic.twitter.com/gKeW87nI3B
ಒಂದೆಡೆ ಏಕದಿನ ಮಾದರಿಯ ಕ್ರಿಕೆಟ್ ತನ್ನ ಪ್ರಾಮುಖ್ಯತೆ, ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿದೆ ಎಂಬ ಮಾತಿತ್ತು. ಆದರೆ, ಭಾರತದಲ್ಲಿ ನಡೆದ 2023ರ ವಿಶ್ವಕಪ್ಗೆ ಕ್ರಿಕೆಟ್ ಅಭಿಮಾನಿಗಳು ಉತ್ತಮವಾಗಿ ಸ್ಪಂದಿಸಿದ್ದು, ಕ್ರೀಡಾಂಗಣಕ್ಕೆ ಬಂದು 10 ಲಕ್ಷ ಮಂದಿ ವೀಕ್ಷಿಸಿದ ದಾಖಲೆ ನಿರ್ಮಾಣ ಆಗಿದೆ. ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ 1 ಮಿಲಿಯನ್ ಪ್ರೇಕ್ಷಕರಿಂದ 2023ರ ವಿಶ್ವಕಪ್ ವೀಕ್ಷಣೆಗೊಳಗಾಗಿದೆ.
ಟಿ-20 ಕ್ರಿಕೆಟ್ ಮತ್ತು ಲೀಗ್ ಕ್ರಿಕೆಟ್ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ವೃದ್ಧಿಸಿರುವುದರಿಂದ, ದೀರ್ಘ ಮಾದರಿಯ ಕ್ರಿಕೆಟ್ನತ್ತ ಜನರು ಬರುತ್ತಿಲ್ಲ ಎಂಬ ಆಪಾದನೆ ಇತ್ತು. ಅಲ್ಲದೇ ಮುಂದಿನ ಬಾರಿ ಏಕದಿನ ವಿಶ್ವಕಪ್ ಮಾದರಿಯಲ್ಲಿ ಬದಲಾವಣೆಯ ಅಗತ್ಯ ಇದೆ ಎಂದು ಹಿರಿಯ ಆಟಗಾರರು ಮತ್ತು ಕ್ರಿಕೆಟ್ ತಜ್ಞರು ವಿಶ್ಲೆಷಿಸಿದ್ದರು. ಆದರೆ, ಭಾರತದಲ್ಲಿ ಈ ಆವೃತ್ತಿಯ ವಿಶ್ವಕಪ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿರುವುದು ಲೆಕ್ಕಾಚಾರ ಅಡಿಮೇಲಾದಂತಿದೆ.
ಡಿಜಿಟಲ್ನಲ್ಲೂ ದಾಖಲೆಯ ವೀಕ್ಷಣೆ: ವಿಶ್ವಕಪ್ನ ಡಿಜಿಟಲ್ ಪ್ರಸಾರದ ಹಕ್ಕು ಡಿಸ್ನಿ + ಹಾಟ್ಸ್ಟಾರ್ ಕೈಯಲ್ಲಿದ್ದು, 3.5 ಕೋಟಿ ವೀಕ್ಷಕರಿಂದ ಒಮ್ಮೆಗೆ ವೀಕ್ಷಣೆ ಪಡೆದಿರುವ ದಾಖಲೆ ನಿರ್ಮಾಣ ಆಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ, ವಿರಾಟ್ ಕೊಹ್ಲಿಯ ಶತಕದ ಸಂದರ್ಭದಲ್ಲಿ ಹಾಟ್ಸ್ಟಾರ್ ಅತಿ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 16ನೇ ಆವೃತ್ತಿಯ ಐಪಿಎಲ್ನಲ್ಲಿ ಧೋನಿ ಬ್ಯಾಟಿಂಗ್ ಸಮಯದಲ್ಲಿ ಆದ 3.2 ಕೋಟಿ ವೀಕ್ಷಣೆಯ ದಾಖಲೆಯನ್ನು ಈ ವಿಶ್ವಕಪ್ನಲ್ಲಿ ಹಾಟ್ಸ್ಟಾರ್ ಮುರಿದಿದೆ.
- " class="align-text-top noRightClick twitterSection" data="">
ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ,"10 ಲಕ್ಷಕ್ಕೂ ಹೆಚ್ಚು ವೀಕ್ಷಕರು ಪಾಲ್ಗೊಳ್ಳುವ ಮೂಲಕ ಹಿಂದಿನ ದಾಖಲೆ ಮುರಿಯುವತ್ತ 2023ರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಾಗುತ್ತಿದೆ. ಏಕದಿನ ವಿಶ್ವಕಪ್ ಕ್ರಿಕೆಟ್ ಎಷ್ಟು ಮೌಲ್ಯಯುತವಾಗಿದೆ ಎಂಬುದು ಹಾಗೇ ವಿಶ್ವಕಪ್ನ ಜನಪ್ರಿಯತೆ ವಿಶ್ವಾದ್ಯಂತ ಕಡಿಮೆ ಆಗಿಲ್ಲ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ನೆನಪಿಸಿದ್ದಾರೆ. ನಾಕೌಟ್ ಹಂತದಲ್ಲಿ ಇನ್ನಷ್ಟು ಪ್ರೇಕ್ಷಕರು ಭಾಗಿ ಆಗುವ ನಿರೀಕ್ಷೆ ಇದ್ದು, ಮತ್ತಷ್ಟು ದಾಖಲೆ ನಿರ್ಮಾಣ ಆಗಲಿದೆ. ಉತ್ತಮ ಕ್ರಿಕೆಟ್ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
ಬಾಕಿ ಇರುವ ಪಂದ್ಯಗಳು:
- ನವೆಂಬರ್ 12 - ಭಾರತ vs ನೆದರ್ಲೆಂಡ್ಸ್ - ಕೊನೆಯ ಲೀಗ್ ಪಂದ್ಯ - ಬೆಂಗಳೂರು
- ನವೆಂಬರ್ 15 - ಮೊದಲ ಸೆಮಿಫೈನಲ್ - ಮುಂಬೈ
- ನವೆಂಬರ್ 16 - ಎರಡನೇ ಸೆಮಿಫೈನಲ್ - ಕೋಲ್ಕತ್ತಾ
- ನವೆಂಬರ್ 19 - ಫೈನಲ್ - ಅಹಮದಾಬಾದ್
ಇದನ್ನೂ ಓದಿ: ಭಾರತ vs ನೆದರ್ಲೆಂಡ್ಸ್ ಪಂದ್ಯ: ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸರಕು ಸಾಗಣೆ ವಾಹನಗಳಿಗೆ ನಿಷೇಧ