ETV Bharat / sports

ವಿಶ್ವಕಪ್​ನಲ್ಲಿ ಜಹೀರ್​ ಖಾನ್, ಜಾವಗಲ್​ ಶ್ರೀನಾಥ್ ಅವರನ್ನು ಹಿಂದಿಕ್ಕಿದ ಶಮಿ: ಯಾವೆಲ್ಲ ದಾಖಲೆ ಸೃಷ್ಟಿ!? - ವಿಶ್ವಕಪ್​ ಇತಿಹಾಸ

Mohammed Shami Records: ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಮೊದಲ ಬೌಲರ್​ ಎಂಬ ಹಿರಿಮೆಗೆ ಮೊಹಮ್ಮದ್ ಶಮಿ ಪಾತ್ರರಾಗಿದ್ದಾರೆ.

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ
author img

By ETV Bharat Karnataka Team

Published : Nov 2, 2023, 10:24 PM IST

ಮುಂಬೈ (ಮಹಾರಾಷ್ಟ್ರ): ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಮೊಹಮ್ಮದ್ ಶಮಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವಿಶ್ವಕಪ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಭಾರತದ ಮೊದಲ ಬೌಲರ್​ ಎಂಬ ಹಿರಿಮೆಗೆ ಪಾತ್ರರಾಗಿದ್ದು, ಜಹೀರ್​ ಖಾನ್ ಹಾಗೂ ಜಾವಗಲ್​ ಶ್ರೀನಾಥ್​ ಅವರನ್ನು ಹಿಂದಿಕ್ಕಿದ್ದಾರೆ.

  • " class="align-text-top noRightClick twitterSection" data="">
  • Most wickets for India in World Cups:

    Mohammed Shami - 45* (14 innings)

    Zaheer Khan - 44 (23 innings)

    Javagal Srinath - 44 (33 innings) pic.twitter.com/zKtfZFLHoY

    — Johns. (@CricCrazyJohns) November 2, 2023 " class="align-text-top noRightClick twitterSection" data=" ">

ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮಾರಕ ಬೌಲಿಂಗ್​ ಪ್ರರ್ದಶಿಸುವ ಮೂಲಕ ಈ ದಾಖಲೆ ಬರೆದಿದ್ದಾರೆ. ಐದು ಓವರ್​ಗಳು ಎಸೆದು ಒಂದು ಮೇಡನ್​ ಸಮೇತ ಕೇವಲ 18 ರನ್​ ನೀಡಿದ ಐದು ವಿಕೆಟ್​ಗಳ ಕಬಳಿಸಿ ಪಾರಮ್ಯ ಮೆರೆದಿದರು. ಈ ಮೂಲಕ ವಿಶ್ವಕಪ್​ ಇತಿಹಾಸದಲ್ಲಿ ಒಟ್ಟಾರೆ 45 ವಿಕೆಟ್​ಗಳನ್ನು ಪಡೆದ ಸಾಧನೆ ಮಾಡಿದರು. ಇದರೊಂದಿಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್​ ಪಡೆದ ಟೀಂ ಇಂಡಿಯಾದ ಮೊದಲ ಬೌಲರ್​ ಎಂಬ ಹೆಗ್ಗಳಿಕೆಗೆ ಭಾಜನರಾದರು.

ಈ ಮೊದಲು ವೇಗಿಗಳಾದ ಜಹೀರ್​ ಖಾನ್ ಹಾಗೂ ಜಾವಗಲ್​ ಶ್ರೀನಾಥ್ ವಿಶ್ವಕಪ್​ ಇತಿಹಾಸದಲ್ಲಿ 44 ವಿಕೆಟ್​ ಸಾಧನೆಯೊಂದಿಗೆ ಭಾರತದ ಮೊದಲ ಬೌಲರ್​ ಪಟ್ಟಿಯಲ್ಲಿ ಸಮಾನ ಸ್ಥಾನ ಹೊಂದಿದ್ದರು. ಈಗ ಶಮಿ ಇಬ್ಬರನ್ನೂ ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದ್ದಾರೆ. ಮತ್ತೊಂದೆಡೆ, ಜಸ್ಪ್ರೀತ್ ಬುಮ್ರಾ 33 ವಿಕೆಟ್​ಗಳ ಪಡೆದ ಸಾಧನೆ ಮಾಡಿದ್ದಾರೆ. ಇತಿಹಾಸದಲ್ಲಿ ಸ್ಪೀನ್​ ಮಾಂತ್ರಿಕ ಅನಿಲ್​ ಕುಂಬ್ಳೆ 31 ವಿಕೆಟ್​ ಪಡೆದಿದ್ದಾರೆ.

ಇದಲ್ಲದೇ, ವಿಶ್ವಕಪ್​ನಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್​ಗಳ ಪಡೆದ ದಾಖಲೆಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು ಶಮಿ ಸರಿಗಟ್ಟಿದ್ದಾರೆ. ಇಬ್ಬರು ಕೂಡ ತಲಾ ಮೂರು ಬಾರಿ ಐದು ವಿಕೆಟ್​ಗಳ ಪಡೆದ ಸಾಧನೆ ಹೊಂದಿದ್ದಾರೆ. ಅಷ್ಟೇ ಅಲ್ಲ, ಇಂದಿನ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಮೊಹಮ್ಮದ್ ಶಮಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಏಕದಿನ ಇತಿಹಾಸದಲ್ಲಿ ಸತತ ಮೂರು ಬಾರಿ 4ಕ್ಕಿಂತ ವಿಕೆಟ್​ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧ 5 ವಿಕೆಟ್​ ಹಾಗೂ ಇಂಗ್ಲೆಂಡ್​ ವಿರುದ್ಧ 4 ವಿಕೆಟ್​ ಕಳಿಸಿದ್ದ ಶಮಿ, ಇಂದು ಲಂಕಾ ವಿರುದ್ಧವೂ 5 ವಿಕೆಟ್​ ಪಡೆದಿದ್ದಾರೆ. 2019ರ ವಿಶ್ವಕಪ್‌ನಲ್ಲೂ 4/40, 4/16 ಮತ್ತು 5/69ರ ಸಾಧನೆ ಮಾಡಿದ್ದ ಅವರಿಗೆ ಇದು ಎರಡನೇ ಸರಣಿಯಾಗಿದೆ. ವಕಾರ್ ಯೂನಿಸ್ ಮಾತ್ರ ಮೂರು ಬಾರಿ 4ಕ್ಕಿಂತ ವಿಕೆಟ್​ ಪಡೆದ ಸಾಧನೆ ಮಾಡಿದ್ದರು. 1990ರಲ್ಲಿ ಎರಡು ಬಾರಿ ಮತ್ತು 1994ರಲ್ಲಿ ಒಮ್ಮೆ 4ಕ್ಕಿಂತ ವಿಕೆಟ್​ ಪಡೆದಿದ್ದರು.

ಇದನ್ನೂ ಓದಿ: ಭಾರತದ ಬಿರುಗಾಳಿ ಬೌಲಿಂಗ್​ಗೆ ಪತರುಗುಟ್ಟಿದ ಸಿಂಹಳೀಯರು: ವಿಶ್ವಕಪ್​ನಲ್ಲಿ ರೋಹಿತ್​ ಪಡೆಗೆ ಸತತ 7ನೇ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.