ಚೆನ್ನೈ (ತಮಿಳುನಾಡು): ಕಿವೀಸ್ ತಂಡ ನಿನ್ನೆ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್ನ ಲೀಗ್ ಹಂತದ ಮೂರನೇ ಗೆಲುವನ್ನು ದಾಖಲಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತಾದರೂ ದೊಡ್ಡ ನಷ್ಟಕ್ಕೆ ಒಳಗಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಗಾಯಕ್ಕೆ ತುತ್ತಾಗಿ ವಿಶ್ವಕಪ್ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ನಾಯಕ ಕೇನ್ ವಿಲಿಯಮ್ಸನ್ ಮತ್ತೆ ಗಾಯಕ್ಕೆ ತುತ್ತಾಗಿದ್ದಾರೆ. ವಿಶ್ವಕಪ್ನ ಮುಂದಿನ ಪಂದ್ಯಗಳಿಗೆ ಟಾಮ್ ಬ್ಲುಂಡೆಲ್ ಅವರಿಗೆ ಕಿವೀಸ್ ಟೀಮ್ ಕರೆಕೊಟ್ಟಿದೆ.
ಅಭ್ಯಾಸ ಪಂದ್ಯ ವೇಳೆ ಗಾಯಕ್ಕೆ ತುತ್ತಾದ ಕೇನ್ ವಿಶ್ವಕಪ್ನ ಮೊದಲೆರಡು ಪಂದ್ಯಗಳಿಗೆ ಮೈದಾನಕ್ಕಿಳಿದಿರಲಿಲ್ಲ. ನಿನ್ನೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ಬಾಂಗ್ಲಾ ವಿರುದ್ಧ ನಡೆದ ಪಂದ್ಯಕ್ಕೆ ವಿಲಿಯಮ್ಸನ್ ಮರಳಿದ್ದರು. ಆದರೆ ನಿನ್ನೆಯ ಪಂದ್ಯದಲ್ಲಿ ಮತ್ತೆ ಗಾಯಕ್ಕೆ ತುತ್ತಾದರು.
78 ರನ್ ಗಳಿಸಿ ಆಡುತ್ತಿದ್ದ ವೇಳೆ, ನಾಯಕ ಕೇನ್ ವಿಲಿಯಮ್ಸನ್ ಅವರ ಎಡಗೈ ಹೆಬ್ಬೆರಳಿಗೆ ಜೋರಾಗಿ ಬಾಲ್ ತಗುಲಿದ್ದರಿಂದ ಮೂಳೆ ಮುರಿತಕ್ಕೆ ಒಳಗಾಗಿತ್ತು. ನೋವು ತಾಳಲಾರದೆ, ವಿಲಿಯಮ್ಸನ್ ಗಾಯಗೊಂಡು ನಿವೃತ್ತಿ ಪಡೆದಿದ್ದರು. ನ್ಯೂಜಿಲೆಂಡ್ ತಂಡ ಶನಿವಾರ ಎಕ್ಸ್-ರೇ ನಂತರ ಮೂಳೆ ಮುರಿತದ ಬಗ್ಗೆ ಖಚಿತಪಡಿಸಿದೆ.
-
Not the news New Zealand were hoping for so early in their #CWC23 campaign.https://t.co/bYApA5izYX
— ICC Cricket World Cup (@cricketworldcup) October 14, 2023 " class="align-text-top noRightClick twitterSection" data="
">Not the news New Zealand were hoping for so early in their #CWC23 campaign.https://t.co/bYApA5izYX
— ICC Cricket World Cup (@cricketworldcup) October 14, 2023Not the news New Zealand were hoping for so early in their #CWC23 campaign.https://t.co/bYApA5izYX
— ICC Cricket World Cup (@cricketworldcup) October 14, 2023
ನ್ಯೂಜಿಲೆಂಡ್ ತಂಡದ ತಮ್ಮ ಎಕ್ಸ್ ಆ್ಯಪ್ ಖಾತೆಯಲ್ಲಿ ವಿಲಿಯಮ್ಸನ್ ಗಾಯದ ಬಗ್ಗೆ ಅಪ್ಡೇಟ್ ನೀಡಿದೆ. "ಕೇನ್ ವಿಲಿಯಮ್ಸನ್ ಅವರ ಎಡಗೈ ಹೆಬ್ಬೆರಳಿಗೆ ಮೂಳೆ ಮುರಿತ ಎಕ್ಸ್-ರೇ ಯಿಂದ ದೃಢವಾಗಿದೆ. ಅವರು ಮುಂದಿನ ತಿಂಗಳ ಆಟಗಳಿಗೆ ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಂಡದೊಂದೆಗೆ ಉಳಿಯುತ್ತಾರೆ. ಟಾಮ್ ಬ್ಲುಂಡೆಲ್ ಅವರು ವಿಲಿಯಮ್ಸನ್ ಅವರ ಬದಲಾಗಿ ತಂಡದಲ್ಲಿರುತ್ತಾರೆ" ಎಂದು ತಿಳಿಸಿದೆ.
ಮೊದಲೆರಡು ಪಂದ್ಯದಲ್ಲಿ ಪ್ರಮುಖ ಆಟಗಾರರು ಇಲ್ಲದೇ ನ್ಯೂಜಿಲೆಂಡ್ ಹಾಲಿ ಚಾಂಪಿಯನ್ ತಂಡವಾದ ಇಂಗ್ಲೆಂಡ್ ಮತ್ತು ಕ್ರಿಕೆಟ್ ಶಿಶು ನೆದರ್ಲ್ಯಾಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಆದರೆ ನಾಯಕ ವಿಲಿಯಮ್ಸನ್ ತಂಡದಲ್ಲಿ ಇಲ್ಲದಿರುವುದು ದೊಡ್ಡ ಕೊರತೆಯಾಗಿ ಕಾಣದಿದ್ದರೂ, ನಾಯಕ ತಂಡದಲ್ಲಿ ಆಡದಿರುವುದು ವೀಕ್ ಆಗಿ ಕಾಣಲಿದೆ.
"ಟಾಮ್ ಅವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಪ್ರವಾಸಗಳಲ್ಲಿ ಏಕದಿನ ತಂಡದಲ್ಲಿದ್ದರು ಮತ್ತು ಉತ್ತಮ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ನಲ್ಲಿ ಟಾಮ್ ಯಾವುದೇ ಕ್ರಮಾಂಕದಲ್ಲಿ ಇಳಿದು ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಲ್ಲದೇ ವಿಕೆಟ್ ಕೀಪಿಂಗ್ ಸಹ ಮಾಡುತ್ತಾರೆ" ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ತಿಳಿಸಿದ್ದಾರೆ.
ಐಪಿಎಲ್ ವೇಳೆ ಗಾಯಗೊಂಡ ಕೇನ್: ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಮೊದಲು ಗಾಯಕ್ಕೆ ತುತ್ತಾದರು. ಅದಿಕ ಶ್ರಮ ವಹಿಸಿ ವಿಶ್ವಕಪ್ ವೇಳೆಗೆ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು. ಆದರೆ ಅಭ್ಯಾಸ ಪಂದ್ಯದಲ್ಲಿ ವಿಲಿಯಮ್ಸ್ ಮತ್ತೆ ಗಾಯಕ್ಕೆ ತುತ್ತಾಗಿದ್ದರು. ಈಗ ಮತ್ತೆ ನಾಯಕನಿಲ್ಲದೇ ಕಿವೀಸ್ ಮೈದಾನಕ್ಕಿಳಿಯಬೇಕಿದೆ.
ಇದನ್ನೂ ಓದಿ: Cricket World Cup: 8ನೇ ಗೆಲುವಿನ ಮೇಲೆ ಕಣ್ಣಿಟ್ಟಿರುವ ಭಾರತ.. ಉಭಯ ತಂಡಗಳ ಆಟಗಾರರ ಮಧ್ಯೆ ಹೀಗಿದೆ ಕಾದಾಟ