ಮುಂಬೈ (ಮಹಾರಾಷ್ಟ್ರ): ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಅಮೋಘ ಅರ್ಧ ಶತಕದ ನೆರವಿನಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧದ ಇಂದಿನ ವಿಶ್ವಕಪ್ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ. ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಗಳಿಸಿದ ಟೀಂ ಇಂಡಿಯಾ, ಲಂಕಾ ಗೆಲುವಿಗೆ 358 ರನ್ ಗುರಿ ನೀಡಿದೆ. ಮುಂಬೈನ ವಾಂಖೆಡೆ ಮೈದಾನ ಇಂದಿನ ಬೃಹತ್ ಮೊತ್ತಕ್ಕೆ ಸಾಕ್ಷಿಯಾಯಿತು.
-
Innings Break!#TeamIndia set a 🎯 of 3⃣5⃣8⃣ for Sri Lanka!
— BCCI (@BCCI) November 2, 2023 " class="align-text-top noRightClick twitterSection" data="
Over to our bowlers 💪
Scorecard ▶️ https://t.co/rKxnidWn0v#CWC23 | #MenInBlue | #INDvSL pic.twitter.com/80fANgx9wa
">Innings Break!#TeamIndia set a 🎯 of 3⃣5⃣8⃣ for Sri Lanka!
— BCCI (@BCCI) November 2, 2023
Over to our bowlers 💪
Scorecard ▶️ https://t.co/rKxnidWn0v#CWC23 | #MenInBlue | #INDvSL pic.twitter.com/80fANgx9waInnings Break!#TeamIndia set a 🎯 of 3⃣5⃣8⃣ for Sri Lanka!
— BCCI (@BCCI) November 2, 2023
Over to our bowlers 💪
Scorecard ▶️ https://t.co/rKxnidWn0v#CWC23 | #MenInBlue | #INDvSL pic.twitter.com/80fANgx9wa
ಟಾಸ್ ಸೋತು ರನ್ಗಳ ಗೋಡೆ ಕಟ್ಟುವ ನಿರೀಕ್ಷೆಯಂತೆ ಬ್ಯಾಟಿಂಗ್ಗೆ ಇಳಿದ ಭಾರತ, ಆರಂಭದಲ್ಲಿಯೇ ಆಘಾತ ಎದುರಿಸಿತು. ಮೊದಲ ಓವರ್ನ ಮೊದಲ ಬಾಲ್ ಬೌಂಡರಿಗೆ ಅಟ್ಟಿದ ನಾಯಕ ರೋಹಿತ್ ಶರ್ಮಾ, ಎರಡನೇ ಬಾಲ್ಗೆ ತಮ್ಮ ವಿಕೆಟ್ ಒಪ್ಪಿಸಿ ಕ್ರೀಡಾಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು. ಲಂಕಾ ಬೌಲರ್ಗಳ ಮೇಲೆ ಹೀಗೆ ಸಲೀಸಾಗಿ ಸವಾರಿ ಮಾಡಬಹುದು ಎಂಬ ತಂಡದ ಖುಷಿ ಅರೆ ಕ್ಷಣದಲ್ಲಿ ಕಮರಿತು.
ಆದರೆ, ಅವರೊಂದಿಗೆ ಕಣಕ್ಕಿಳಿದಿದ್ದ ಶುಭ್‌ಮನ್ ಗಿಲ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ ತಂಡದ ರನ್ ಹೆಚ್ಚಿಸುವಲ್ಲಿ ಸಫಲರಾದರು. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅವರೊಂದಿಗೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಸಿಕ್ಕ ಜೀವದಾನಗಳ ಲಾಭ ಪಡೆದ ಈ ಜೋಡಿ ಶ್ರೀಲಂಕಾ ಬೌಲರ್ಗಳನ್ನು ದಂಡಿಸಿದರು. ಅರ್ಧ ಶತಕ ಹಾಗೂ ಈ ಜೋಡಿಯ ಸೊಗಸಾದ ಆಟದ ನೆರವಿನಿಂದ 2ನೇ ವಿಕೆಟ್ಗೆ 179 ಎಸೆತಗಳಲ್ಲಿ ತಂಡಕ್ಕೆ 189 ರನ್ಗಳು ಹರಿದು ಬಂದವು.
92 ಎಸೆತ ಎದುರಿಸಿದ ಗಿಲ್, 2 ಸಿಕ್ಸ್ ಹಾಗೂ 11 ಬೌಂಡರಿಗಳ ಸಹಿತ 92 ರನ್ ಗಳಿಸಿ ಇನ್ನಿಂಗ್ಸ್ನ ಹೀರೋ ಆದರು. ಆದರೆ, ದಿಲ್ಶನ್ ಮಧುಶಂಕ ಎಸೆದ ಎಸೆತವನ್ನು ಬೌಂಡರಿಗೆ ಅಟ್ಟುವ ಚಾಣಕ್ಷತನಕ್ಕೆ ಕೈ ಹಾಕಿ ಶತಕದಿಂದ ವಂಚಿತರಾದರು. ಅವರೊಂದಿಗೆ ಎಂದಿನಂತೆ ಬ್ಯಾಟ್ ಬೀಸಿದ ರನ್ ಮಿಷನ್ ವಿರಾಟ್ ಕೊಹ್ಲಿ ಕೂಡ 88 ರನ್ ಗಳಿಸಿ ತಂಡಕ್ಕೆ ವರದಾನವಾದರು. 94 ಎಸೆತ ಎದುರಿಸಿದ ಕೊಹ್ಲಿ 11 ಬೌಂಡರಿಗಳೊಂದಿಗೆ 49ನೇ ಶತಕದ ಅಂಚಿನಲ್ಲಿ ಎಡವಿದರು.
ಗಿಲ್ ಮತ್ತು ಕೊಹ್ಲಿ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಶ್ರೇಯಸ್ ಅಯ್ಯರ್ ಕೂಡ ಹೊಡಿಬಡಿ ಆಟವಾಡಿದರು. ಈವರೆಗಿನ ಪಂದ್ಯದಲ್ಲಿ ಅಲ್ಪ ಮೊತ್ತ ಕಲೆ ಹಾಕಿದ್ದ ಅಯ್ಯರ್, 56 ಎಸೆತದಲ್ಲಿ ಭರ್ಜರಿ 6 ಸಿಕ್ಸ್, 3 ಬೌಂಡರಿಗಳ ಸಹಿತ 82 ರನ್ ಗಳಿಸಿ ಅವರು ಕೂಡ ಶತಕದಿಂದ ವಂಚಿತರಾದರು. ಆದರೆ, ಇದರ ನಡುವೆ ಕೆಎಲ್ ರಾಹುಲ್ 21, ಸೂರ್ಯಕುಮಾರ್ 12 ರನ್ ಸಿಡಿಸಿ ಮಧುಶಂಕಗೆ ಬಲಿಯಾದರು. ಅಬ್ಬರಿಸಿದ ರವೀಂದ್ರ ಜಡೇಜಾ 35 ರನ್ ಗಳಿಸಿ ತಂಡಕ್ಕೆ ತಮ್ಮದೇಯಾದ ಕಾಣಿಕೆ ನೀಡಿದರು.
ಲಂಕಾ ಪರ ದಿಲ್ಶನ್ ಮಧುಶಂಕ 5 ವಿಕೆಟ್, ದುಷ್ಮಂತ ಚಮೀರಾ 1 ವಿಕೆಟ್ ಪಡೆದರು.
ಆಡುವ 11ರ ಬಳಗ- ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್/ನಾಯಕ), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಮಹೀಶ್ ತೀಕ್ಷಣ, ಕಸುನ್ ರಜಿತ, ದುಷ್ಮಂತ ಚಮೀರ, ದಿಲ್ಶನ್ ಮಧುಶಂಕ.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್.