ETV Bharat / sports

ಕಿವೀಸ್​ ವಿರುದ್ಧ ಎದುರಿಸಿದ 280 ಎಸೆತಗಳಲ್ಲಿ 149 ಡಾಟ್ ಮಾಡಿದ 'ಮಿಥಾಲಿ' ಪಡೆ - ಮಹಿಳಾ ವಿಶ್ವಕಪ್ 2022

ಕಿವೀಸ್​ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಒಟ್ಟಾರೆ 280(46.4) ಎಸೆತಗಳನ್ನು ಎದುರಿಸಿತ್ತು. ಆದರೆ ಇದರಲ್ಲಿ ಕೇವಲ 131 ಎಸೆತಗಳನ್ನು ಮಾತ್ರ ಯಶಸ್ವಿಯಾಗಿ ಎದುರಿಸಿದ್ದ ಮಿಥಾಲಿ ಪಡೆ ಬರೋಬ್ಬರಿ 149 ಎಸೆತಗಳನ್ನು ಡಾಟ್ ಮಾಡುವ ಮೂಲಕ ನೀರಸ ಪ್ರದರ್ಶನ ತೋರಿ ಒತ್ತಡವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡರು.

women's world cup, indian team dot balss
ಭಾರತ -ನ್ಯೂಜಿಲ್ಯಾಂಡ್ ತಂಡ
author img

By

Published : Mar 10, 2022, 5:30 PM IST

ಹ್ಯಾಮಿಲ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ತನ್ನ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಒತ್ತಡಕ್ಕೆ ಸಿಲುಕಿ ಗೆಲ್ಲಬಹುದಾದ ಪಂದ್ಯಗಳನ್ನು ಕಳೆದುಕೊಳ್ಳುತ್ತಿದೆ.

ಗುರುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಕಿವೀಸ್ ನೀಡಿದ 261 ರನ್​ಗಳ ಗುರಿ ಬೆನ್ನಟ್ಟುವ ವೇಳೆ ವಿಕೆಟ್ ಉಳಿಸಿಕೊಳ್ಳುವ ಧಾವಂತದಲ್ಲಿ ಅರಿವಿಲ್ಲದೆ ಸಾಕಷ್ಟು ಎಸೆತಗಳನ್ನು ಡಾಟ್​ ಮಾಡುವ ಮೂಲಕ 62 ರನ್​ಗಳ ಸೋಲುಕಂಡಿತು.

ಈ ಪಂದ್ಯದಲ್ಲಿ 198 ರನ್‌ಗಳಿಗೆ ಆಲೌಟಾದ ಭಾರತ ಒಟ್ಟಾರೆ 280(46.4) ಎಸೆತಗಳನ್ನು ಎದುರಿಸಿತ್ತು. ಆದರೆ ಇದರಲ್ಲಿ ಕೇವಲ 131 ಎಸೆತಗಳನ್ನು ಮಾತ್ರ ಯಶಸ್ವಿಯಾಗಿ ಎದುರಿಸಿದ್ದ ಭಾರತೀಯ ಬ್ಯಾಟರ್​ಗಳು ಬರೋಬ್ಬರಿ 149 ಎಸೆತಗಳನ್ನು ಡಾಟ್ ಮಾಡುವ ಮೂಲಕ ನೀರಸ ಪ್ರದರ್ಶನ ತೋರಿ ಒತ್ತಡವನ್ನು ತಾವಾಗಿಯೇ ಮೈಮೇಲೆ ಎಳೆದುಕೊಂಡರು.

ಆರಂಭದ 20 ಓವರ್​ಗಳಲ್ಲಿ 50 ರನ್​ಗಳಿಸಿದರೆ, 40 ಓವರ್​ಗಳಲ್ಲಿ ಕೇವಲ 140ರನ್​ಗಳಿಸಿತ್ತು. ಈ ನಿಧಾನಗತಿಯ ಬ್ಯಾಟಿಂಗ್ ಕಾರಣದಿಂದ ಟೀಮ್​ ಇಂಡಿಯಾ ಕೊನೆಯ 10 ಓವರ್​ಗಳಲ್ಲಿ 120 ರನ್​ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆದರೆ ಕೊನೆಗೆ 58 ರನ್​ಗಳಿಸಿ ಇನ್ನೂ 20 ಎಸೆತಗಳಿರುವಂತೆ ಇನ್ನಿಂಗ್ಸ್​ ಮುಗಿಸಿ ಸೋಲೊಪ್ಪಿಕೊಂಡಿತು.

ಈಗಾಗಲೆ ನಿಧಾನಗತಿ ಇನ್ನಿಂಗ್ಸ್​ ಆಡುವ ಮೂಲಕ ಟೀಕೆಗೆ ಗುರಿಯಾಗಿರುವ ನಾಯಕಿ ಮಿಥಾಲಿ ರಾಜ್​ 56 ಎಸೆತಗಳಲ್ಲಿ 31 ರನ್​ಗಳಿಸಿದರೆ, ಯುವ ಬ್ಯಾಟರ್ ಯಸ್ತಿಕಾ 59 ಎಸೆತಗಳಲ್ಲಿ 28, ಮಂಧಾನ 21 ಎಸೆತಗಳಲ್ಲಿ 6 ರನ್​ಗಳಿಸಿ ಆರಂಭದಲ್ಲೇ ಸಾಕಷ್ಟು ಎಸೆತಗಳನ್ನು ಪೋಲು ಮಾಡಿದರು.

ಕೊನೆಯ ವಿಶ್ವಕಪ್ ಆಡುತ್ತಿರುವ ಹಿರಿಯ ಆಟಗಾರ್ತಿಯರಾದ ಜೂಲನ್ ಗೋಸ್ವಾಮಿ ಮತ್ತು ಮಿಥಾಲಿ ರಾಜ್ ಪ್ರತಿಷ್ಠಿತ​ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಅವರ ವೃತ್ತಿ ಜೀವನವನ್ನು ಸ್ಮರಣೀಯವನ್ನಾಗಿಸುವ ಕನಸಿನಲ್ಲಿರುವ ಭಾರತ ತಂಡಕ್ಕೆ ಈ ರೀತಿಯ ನಿಧಾನಗತಿಯ ಬ್ಯಾಟಿಂಗ್ ಪ್ರಚೋದನೆ ತಂಡದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ. ಮುಂದಿನ ಪಂದ್ಯದಲ್ಲಾದರೂ ಬ್ಯಾಟರ್​ಗಳು ಸ್ಟ್ರೈಕ್​ ಬದಲಿಸುವ​ ಕಡೆಗೆ ಗಮನಹರಿಸಿ ಡಾಟ್​ ಬಾಲ್ ಸಂಖ್ಯೆಗಳನ್ನು​ ಕಡಿಮೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಇಂದಿನ ಫಲಿತಾಂಶವನ್ನೆ ಮತ್ತೊಮ್ಮೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ:ತಂಡದ ಅಗ್ರ-ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟರ್​ಗಳ ಕೊರತೆ ಸೋಲಿಗೆ ಕಾರಣ: ಮಿಥಾಲಿ ರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.