ETV Bharat / sports

ಆಸ್ಟ್ರೇಲಿಯಾ ದಾಳಿಗೆ ಬೆದರಿ ಸೋತ ಬಾಂಗ್ಲಾ: 5 ವಿಕೆಟ್​ಗಳ ಅಂತರದಿಂದ ಗೆದ್ದು ಅಗ್ರಸ್ಥಾನ - ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿ

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಓಟ ಮುಂದುವರೆದಿದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 5 ವಿಕೆಟ್​ಗಳ ಗೆಲುವು ಕಂಡಿದೆ.

Australia beat Bangladesh by 5 wickets
Australia beat Bangladesh by 5 wickets
author img

By

Published : Mar 25, 2022, 6:18 PM IST

ವೆಲ್ಲಿಂಗ್ಟನ್​(ನ್ಯೂಜಿಲ್ಯಾಂಡ್​): ಮಹಿಳಾ ವಿಶ್ವಕಪ್​​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ಮುಂದುವರೆಸಿರುವ ಆಸ್ಟ್ರೇಲಿಯಾ ಮಹಿಳಾ ತಂಡ ಇಂದಿನ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದೆ. ಈ ಮೂಲಕ ತಾನಾಡಿರುವ ಎಲ್ಲ ಪಂದ್ಯಗಳಲ್ಲೂ ಗೆಲುವು ದಾಖಲು ಮಾಡಿ, 14 ಅಂಕಗಳೊಂದಿಗೆ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.

ಬಾಂಗ್ಲಾದೇಶದ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್​ ಆಯ್ದುಕೊಂಡ ಬಲಿಷ್ಠ ಕಾಂಗರೂ ಪಡೆ ಎದುರಾಳಿ ತಂಡವನ್ನ 135ರನ್​ಗಳಿಗೆ ಕಟ್ಟಿಹಾಕಿತು.( ಮಳೆಯಿಂದಾಗಿ 43 ಓವರ್​) ತಂಡದ ಪರ ಲತಾ ಮಂಡಲ್ 33ರನ್​ಗಳಿಕೆ ಮಾಡಿ ಗರಿಷ್ಠ ಸ್ಕೋರರ್​ ಆಗಿ ಹೊರಹೊಮ್ಮಿದರು. ಆಸ್ಟ್ರೇಲಿಯಾ ಪರ ಆ್ಯಶ್ಲಿ ಗಾರ್ಡನರ್, ಜೆಸ್ ಜೊನಾಥನ್ ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ನೀಡಿದರು.

136ರನ್​ಗಳ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೊಳಗಾಯಿತು. 22ರನ್​ಗಳಿಸಿದಾಗ ತಂಡದ ಆಲಿಸಾ ಹೀಲಿ, ಮೆಗ್ ಲ್ಯಾನಿಂಗ್​ ಔಟಾದರು. ಇದರ ಬೆನ್ನಲ್ಲೇ ಮೆಗ್ರಾ ಕೂಡ 15ರನ್​ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಮೇಲಿಂದ ಮೇಲೆ ವಿಕೆಟ್ ಉರುಳುತ್ತಿದ್ದರೂ ಕೂಡ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಬೇತ್ ಮೂನಿ 66ರನ್​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಇವರಿಗೆ ಗಾರ್ಡನರ್​, ಅನಾಬೆಲ್​ ಉತ್ತಮ ಸಾಥ್ ನೀಡಿದರು.

ಇದನ್ನೂ ಓದಿ: ಪಾಕ್ ತಂಡಕ್ಕೆ ತಾಯ್ನಾಡಿನಲ್ಲೇ ಮುಖಭಂಗ: ಐತಿಹಾಸಿಕ ಟೆಸ್ಟ್​​ ಸರಣಿ ಗೆದ್ದ ಆಸ್ಟ್ರೇಲಿಯಾ

ತಂಡ ಕೊನೆಯದಾಗಿ 32.1 ಓವರ್​ಗಳಲ್ಲಿ 5 ವಿಕೆಟ್​ನಷ್ಟಕ್ಕೆ 136ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಜೊತೆಗೆ ಅಗ್ರಸ್ಥಾನ ಪಡೆದುಕೊಂಡು, ನಾಲ್ಕರ ಘಟ್ಟಕ್ಕೆ ಸಜ್ಜುಗೊಳ್ಳಲಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಆಸ್ಟ್ರೇಲಿಯಾ ಸ್ಪಿನ್​ ದಾಳಿಗೆ ಬೆದರಿ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಚೇತರಿಕೆ ಕಾಣದೇ 150ರನ್​ಗಳಿಸಲು ಮಾತ್ರ ಶಕ್ತವಾಯಿತು.

ಐಸಿಸಿ ಮಹಿಳಾ ವಿಶ್ವಕಪ್​​ನಲ್ಲಿ ಈಗಾಗಲೇ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ನಾಲ್ಕರ ಘಟ್ಟಕ್ಕೆ ಅವಕಾಶ ಪಡೆದುಕೊಂಡಿದ್ದು, ಉಳಿದ ಎರಡು ಸ್ಥಾನಗಳಿಗಾಗಿ ಭಾರತ, ಇಂಗ್ಲೆಂಡ್ ಹಾಗೂ ವೆಸ್ಟ್​ ಇಂಡೀಸ್ ನಡುವೆ ಪೈಪೋಟಿ ಏರ್ಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.