ಕೇಪ್ಟೌನ್ (ದಕ್ಷಿಣ ಆಫ್ರಿಕಾ): ಮಹಿಳಾ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಮತ್ತೆ ಮುಗ್ಗರಿಸಿತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಕೇವಲ 5 ರನ್ಗಳಿಂದ ಭಾರತೀಯ ವನಿತೆಯರು ಸೋಲು ಕಂಡರು. ಹರ್ಮನ್‌ಪ್ರೀತ್ ಕೌರ್ (52) ಮತ್ತು ಜೆಮಿಮಾ ರಾಡ್ರಿಗಸ್ (43) ಉತ್ತಮ ಬ್ಯಾಟಿಂಗ್ ನಡುವೆಯೂ ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 172 ರನ್ ಸವಾಲಿನ ಮೊತ್ತ ಪೇರಿಸಿತು. ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ 8 ವಿಕೆಟ್ ಕಳೆದುಕೊಂಡು 167 ರನ್ ಗಳಿಸಲಷ್ಟೇ ಶಕ್ತವಾಯಿತು. ಆಸ್ಟ್ರೇಲಿಯಾ ಫೈನಲ್ಗೆ ಲಗ್ಗೆ ಇಟ್ಟಿತು.
-
Australia survived a tense finish to beat India!
— ICC (@ICC) February 23, 2023 " class="align-text-top noRightClick twitterSection" data="
What a match that was in Cape Town 👏
📝: https://t.co/SfqDLpEKql#AUSvIND | #T20WorldCup | #TurnItUp pic.twitter.com/UcjLgQvreV
">Australia survived a tense finish to beat India!
— ICC (@ICC) February 23, 2023
What a match that was in Cape Town 👏
📝: https://t.co/SfqDLpEKql#AUSvIND | #T20WorldCup | #TurnItUp pic.twitter.com/UcjLgQvreVAustralia survived a tense finish to beat India!
— ICC (@ICC) February 23, 2023
What a match that was in Cape Town 👏
📝: https://t.co/SfqDLpEKql#AUSvIND | #T20WorldCup | #TurnItUp pic.twitter.com/UcjLgQvreV
ಭಾರತ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಶಫಾಲಿ ಮರ್ಮಾ ಮತ್ತು ಸ್ಮೃತಿ ಮಂಧಾನ ಒಳ್ಳೆಯ ಜೊತೆಯಾಟ ನೀಡಲು ವಿಫಲರಾದರು. ಆರು ಎಸೆತಗಳಲ್ಲಿ ಒಂದು ಬೌಂಡರಿ ಸಮೇತ ಒಂಭತ್ತು ರನ್ ಬಾರಿಸಿದ್ದ ಶಫಾಲಿ ಮೇಗನ್ ಶುಟ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇತ್ತ, ಭರವಸೆ ಮತ್ತು ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಕೂಡ ಆಶ್ಲೀ ಗಾರ್ಡ್ನರ್ ಎಸೆತದಲ್ಲಿ ಎಲ್ಬಿ ಬಲೆಗೆ ಸಿಲುಕಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಯಾಸ್ತಿಕಾ ಭಾಟಿಯಾ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಇದರಿಂದ ತಂಡದ ಮೊತ್ತ 28 ರನ್ಗಳಾಗುವಷ್ಟರಲ್ಲಿ ಮೂರು ಪ್ರಮುಖ ವಿಕೆಟ್ಗಳನ್ನು ಟೀಂ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆದರೆ, ನಂತರ ಬಂದ ಹರ್ಮನ್‌ಪ್ರೀತ್ ಕೌರ್ ಮತ್ತು ಜೆಮಿಮಾ ರಾಡ್ರಿಗಸ್ ಬಿರುಸಿನ ಬ್ಯಾಟಿಂಗ್ ಬೀಸಿ ತಂಡಕ್ಕೆ ಚೇತರಿಕೆ ನೀಡಿದರು. 34 ಎಸೆತಗಳಲ್ಲಿ ಸಿಕ್ಸರ್ ಮತ್ತು ಆರು ಬೌಂಡರಿಗಳೊಂದಿಗೆ ಹರ್ಮನ್‌ಪ್ರೀತ್ ಆಕರ್ಷಕ ಅರ್ಧ ಶತಕ ಬಾರಿಸಿದರು. ಇದರ ನಡುವೆ ಜೆಮಿಮಾ ಅರ್ಧ ಶತಕದ ಅಂಚಿನಲ್ಲಿ ಎಡವಿದರು. 24 ಎಸೆತಗಳಲ್ಲಿ ಆರು ಬೌಂಡರಿ ಸಮೇತ 43 ರನ್ ಸಿಡಿಸಿದ್ದ ಜೆಮಿಮಾ, ಡಾರ್ಸಿ ಬ್ರೌನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇದಾದ ಸ್ವಲ್ಪ ಹೊತ್ತಿನಲ್ಲಿ ಹರ್ಮನ್‌ಪ್ರೀತ್ ರನೌಟ್ಗೆ ಸಿಲುಕಿದರು. ಇದೇ ತಂಡದ ಸೋಲಿಗೆ ಕಾರಣವೂ ಆಯಿತು. ನಂತರದಲ್ಲಿ ರಿಚಾ ಘೋಷ್ (14) ಮತ್ತು ದೀಪ್ತಿ ಶರ್ಮಾ (20 ಅಜೇಯ), ಸ್ನೇಹಾ ರಾಣಾ (11) ರನ್ ಬಾರಿಸಿ ತಂಡಕ್ಕೆ ನೆರವಾದರು. ಆದರೆ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರವಾಗಿ ಡಾರ್ಸಿ ಬ್ರೌನ್, ಆಶ್ಲೀ ಗಾರ್ಡ್ನರ್ ತಲಾ ಎರಡು ವಿಕೆಟ್ ಹಾಗೂ ಮೇಗನ್ ಶುಟ್, ಜೆಸ್ ಜೊನಾಸೆನ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಏಕದಿನ ಸರಣಿಗೆ ಆಸೀಸ್ ತಂಡ ಪ್ರಕಟ: ಗಾಯಾಳುಗಳಾದ ಮ್ಯಾಕ್ಸಿ, ಮಾರ್ಷ್, ರಿಚರ್ಡ್ಸನ್ ವಾಪಸ್