ಕ್ವೀನ್ಸ್ ಲ್ಯಾಂಡ್ಸ್ : ಆಸ್ಟ್ರೇಲಿಯಾ ಮಹಿಳೆಯರ ವಿರುದ್ಧ ಭಾರತ ತಂಡ 377 ರನ್ಗಳಿಸಿ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡಿದೆ. ವಿದೇಶಿ ತಂಡವೊಂದು ಆಸ್ಟ್ರೇಲಿಯಾ ನೆಲದಲ್ಲಿ ಗಳಿಸಿದ ಗರಿಷ್ಠ ಮೊತ್ತ ಇದಾಗಿದೆ.
ಮಳೆಯಿಂದ ಅಡಚಣೆಯಾಗುತ್ತಿರುವ ಪಂದ್ಯದಲ್ಲಿ ಎರಡುವರೆ ದಿನಗಳ ಕಾಲ ಭಾರತ ಬ್ಯಾಟಿಂಗ್ ಮಾಡಿದೆ. ಆರಂಭಿಕರಾಗಿ ಕಣಕ್ಕಿಳಿದಿದ್ದ ಸ್ಮೃತಿ ಮಂದಾನ 216 ಎಸೆತಗಳಲ್ಲಿ 22 ಬೌಂಡರಿ ಮತ್ತು 1 ಸಿಕ್ಸರ್ ಸೇರಿ 127 ರನ್ಗಳಿಸಿದರು.
1958ರ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ವಿದೇಶಿ ಆರಂಭಿಕ ಬ್ಯಾಟರ್ ಎಂಬ ಶ್ರೇಯಕ್ಕೂ ಪಾತ್ರರಾದರು. ಅಲ್ಲದೆ ಆಸ್ಟ್ರೇಲಿಯಾದಲ್ಲಿ ಗರಿಷ್ಠ(127) ರನ್ ಬಾರಿಸಿ ವಿದೇಶಿ ಮಹಿಳಾ ಬ್ಯಾಟರ್ ಎನಿಸಿದರು.
ಭಾರತ 377ಕ್ಕೆ ಡಿಕ್ಲೇರ್ : ಎರಡನೇ ದಿನ 276 ರನ್ಗಳಿಸಿದ್ದ ಭಾರತ 3ನೇ ದಿನ 7 ವಿಕೆಟ್ ನಷ್ಟಕ್ಕೆ 377 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡಿತು. ದೀಪ್ತಿ ಶರ್ಮಾ 167 ಎಸೆತಗಳಲ್ಲಿ 8 ಬೌಂಡರಿ ಸಹಿತ 66 ರನ್ಗಳಿಸಿದರು.
ತಾನಿಯಾ ಭಾಟಿಯಾ 22 ರನ್ಗಳಿಸಿದರು. ಶುಕ್ರವಾರ ಮಿಥಾಲಿ(30), ಪೂನಮ್ ರಾವತ್(36) ರನ್ಗಳಿಸಿದ್ದರು. ಆಸ್ಟ್ರೇಲಿಯಾ ಪರ ಎಲಿಸ್ ಪೆರ್ರಿ 76ಕ್ಕೆ2, ಸ್ಟೆಲ್ಲಾ ಕ್ಯಾಂಪ್ಬೆಲ್ 47ಕ್ಕೆ 2, ಮೊಲಿನೆಕ್ಸ್ 52ಕ್ಕೆ 2, ಗಾರ್ಡ್ನರ್ 52ಕ್ಕೆ 1 ವಿಕೆಟ್ ಪಡೆದರು.
ಭಾರತದ 377 ರನ್ಗಳನ್ನು ಹಿಂಬಾಲಿಸಿರುವ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 80 ರನ್ಗಳಿಸಿದೆ. ಅಲಿಸ್ಸಾ ಹೀಲಿ 29, ಬೆತ್ ಮೂನಿ 4 ಮತ್ತು ಮೆಗ್ ಲ್ಯಾನಿಂಗ್ 38 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಭಾರತದ ಪರ ಜೂನಲ್ ಗೋಸ್ವಾಮಿ 22ಕ್ಕೆ2, ಪೂಜಾ ವಸ್ತ್ರಾಕರ್ 20ಕ್ಕೆ 1 ವಿಕೆಟ್ ಪಡೆದಿದ್ದಾರೆ.
ಇದನ್ನು ಓದಿ: ಆಸಿಸ್ ನೆಲದಲ್ಲಿ ಮೊದಲ ಟೆಸ್ಟ್ ಶತಕ ಗಳಿಸಿ ದಾಖಲೆ ಬರೆದ ಸ್ಮೃತಿ ಮಂಧಾನ