ಮೌಂಟ್ ಮಾಂಗನೂಯಿ(ನ್ಯೂಜಿಲ್ಯಾಂಡ್): ವನಿತೆಯರ ಏಕದಿನ ವಿಶ್ವಕಪ್ನ ತಮ್ಮ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿದೆ.
ಪೂಜಾ ವಸ್ತ್ರಾಕರ್ 67, ಸ್ಮೃತಿ ಮಂಧಾನಾ 52 ರನ್ ಮತ್ತು ಸ್ನೇಹ್ ರಾಣಾ 53 ರನ್ ಗಳಿಸಿ ತಂಡ ಹೆಚ್ಚು ರನ್ಗಳಿಸಲು ಅನುವು ಮಾಡಿಕೊಟ್ಟರು. ಮೂರನೇ ಓವರ್ನಲ್ಲಿಯೇ ಶಫಾಲಿ ವರ್ಮಾ ಡಯಾನಾ ಬೇಗ್ ಅವರ ಬೌಲಿಂಗ್ನಲ್ಲಿ ಶೂನ್ಯಕ್ಕೆ ಔಟ್ ಆಗುವುದರ ಮೂಲಕ ಕೆಟ್ಟ ಆರಂಭವನ್ನು ಟೀಂ ಇಂಡಿಯಾ ಪಡೆದಿತ್ತು. ನಂತರ ಕ್ರೀಸಿಗೆ ಬಂದ ದೀಪ್ತಿ ಶರ್ಮಾ ಮತ್ತು ಸ್ಮೃತಿ ಮಂಧಾನಾ ಅವರು ತಂಡವನ್ನು ಚೇತರಿಸಿಕೊಳ್ಳುವಂತೆ ಮಾಡಿದರು.
15 ಓವರ್‌ಗಳಲ್ಲಿ ಭಾರತ ತಂಡದ ಸ್ಕೋರ್ ಒಂದು ವಿಕೆಟ್ ನಷ್ಟಕ್ಕೆ 64 ರನ್ ಆಗಿತ್ತು. 22ನೇ ಓವರ್ನಲ್ಲಿ ಅರ್ಧಶತಕ ಪೂರೈಸಿದ ಸ್ಮೃತಿ ಮಂಧಾನಾ, ದೀಪ್ತಿ ಶರ್ಮ ಅವರೊಂದಿಗೆ 92 ರನ್ಗಳ ಜೊತೆಯಾಟ ನೀಡಿದ್ದರು. ದೀಪ್ತಿ ಶರ್ಮ ಅವರು 40 ರನ್ ಗಳಿಸಿ, ನಶ್ರಾ ಸಂಧು ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ನಂತರ ಅಮನ್ ಅಮೀನ್ ಅವರು ಮಂಧಾನಾ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ನಂತರದಲ್ಲಿ ನಾಯಕಿ ಮಿಥಾಲಿ ರಾಜ್ 9, ಹರ್ಮನ್ಪ್ರೀತ್ ಕೌರ್ 5, ರೀಚಾ ಘೋಷ್ 1 ಗಳಿಸಲು ಮಾತ್ರವೇ ಸಾಧ್ಯವಾಯಿತು.
ಇದನ್ನೂ ಓದಿ: 'ವೃದ್ಧಿಮಾನ್ ಸಾಹ ನನ್ನ ವಾಟ್ಸಪ್ ಚಾಟ್ ತಿರುಚಿದ್ದಾರೆ, ಮಾನನಷ್ಟ ಮೊಕದ್ದಮೆ ಹೂಡುವೆ'
ಪಾಕಿಸ್ತಾನ ಪರ ಬೌಲಿಂಗ್ನಲ್ಲಿ ನಶ್ರಾ ಸಂಧು, ನಿದಾ ದಾರ್ ತಲಾ ಎರಡು ವಿಕೆಟ್ ಪಡೆದರೆ, ಡಯಾನಾ ಬೇಗ್, ಅನಮ್ ಅಮಿನ್, ಫಾತಿಮಾ ಸಹಾ ತಲಾ ಒಂದು ವಿಕೆಟ್ ಪಡೆದಿದ್ದಾರೆ.