ETV Bharat / sports

Womens Asia Cup T20 : ಪಾಕಿಸ್ತಾನಕ್ಕೆ 13 ರನ್​ಗಳ ಗೆಲುವು, ಭಾರತದ ಬ್ಯಾಟಿಂಗ್​ ವೈಪಲ್ಯ

author img

By

Published : Oct 7, 2022, 5:21 PM IST

ಇಂದಿನ ಪಂದ್ಯ ಗೆದ್ದು ಕ್ವಾಲಿಫೈ ಆಗುವ ಕನಸಿನಲ್ಲಿದ್ದ ಭಾರತ ವನಿತೆಯರಿಗೆ ನಿರಾಶೆಯಾಗಿದೆ. ಪಾಕಿಸ್ತಾನದ ಎದುರು 13ರನ್​ಗಳಿಂದ ಸೋಲುವ ಮೂಲಕ ನಿರಂತರ ಮೂರು ಗೆಲುವಿನ ನಂತರ ಸೋಲು ಅನುಭವಿಸಿದ್ದಾರೆ.

womens-asia-cup-t20-pakistan-women-won-by-13-runs
ಪಾಕಿಸ್ತಾನಕ್ಕೆ 13 ರನ್​ಗಳ ಗೆಲುವು

ಸಿಲ್ಹೆಟ್‌ (ಬಾಂಗ್ಲಾದೇಶ) : ಏಷ್ಯಾ ಕಪ್​ ಸತತ ಮೂರು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದ ಭಾರತ ಇಂದು ಪಾಕಿಸ್ತಾನದ ಎದುರು 13ರನ್​ಗಳಿಂದ ಸೋಲನುಭವಿಸಿತು. ಭಾರತೀಯ ವನಿತೆಯರು ಪಾಕಿಸ್ತಾನದ ವಿರುದ್ಧ ಬ್ಯಾಟಿಂಗ್​ನಲ್ಲಿ ವೈಫಲ್ಯ ಕಂಡರು. ಟಾಸ್​ ಗೆದ್ದು ಪಾಕಿಸ್ತಾನ ನೀಡಿದ್ದ 138 ರನ್​ಗಳ ಗುರಿ ಬೆನ್ನು ಹತ್ತಿದ್ದ ಕೌರ್​ ತಂಡ 124ಕ್ಕೆ ತನ್ನೆಲ್ಲಾ ವಿಕೆಟ್​ ಗಳನ್ನು ಕಳೆದುಕೊಂಡು 13ರನ್​ನಿಂದ ಸೋಲನುಭವಿಸಿತು.

ಪಾಕಿಸ್ತಾನ ನೀಡಿದ್ದ ಸಾಧಾರಣ ಗುರಿಯನ್ನು ಭೇದಿಸುವಲ್ಲಿ ಭಾರತದ ವನಿತೆಯರು ವಿಫಲರಾಗಿದ್ದಾರೆ. ಯಾವೊಬ್ಬರೂ ಆಟಗಾರ್ತಿಯೂ 30ಕ್ಕಿಂತ ಹೆಚ್ಚಿನ ರನ್​ ಗಳಿಸಲಿಲ್ಲ. ಆರಂಭಿಕರಾಗಿ ಕ್ರಿಸ್​ಗೆ ಬಂದ ಸಬ್ಬಿನೇನಿ ಮೇಘನಾ (15) ಮತ್ತು ಸ್ಮೃತಿ ಮಂಧಾನ(17) ಬೇಗ ವಿಕೆಟ್​ ಚೆಲ್ಲಿದರು. ನಂತರ ಬಂದ ಜೆಮಿಮಾ ರಾಡ್ರಿಗಸ್(8), ಪೂಜಾ ವಸ್ತ್ರಾಕರ್(5) ಕ್ರಿಸ್​ನಲ್ಲಿ ನಿಲ್ಲಲೇ ಇಲ್ಲ.

ದಯಾಲನ್ ಹೇಮಲತಾ(20) ಪಾಕಿಸ್ತಾನದ ಬೌಲರ್​ಗಳಿಗೆ ದಿಟ್ಟ ಉತ್ತರ ನೀಡುತ್ತಿದ್ದರು. ಆದರೆ, ಅವರ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ದೀಪ್ತಿ ಶರ್ಮಾ(16), ಹರ್ಮನ್‌ಪ್ರೀತ್ ಕೌರ್(12) ಮತ್ತು ರಿಚಾ ಘೋಷ್(26) ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರಾದರೂ ಯಶಸ್ಸು ಸಾಧಿಸಲಿಲ್ಲ. ನಂತರ ಬಂದ ರಾಜೇಶ್ವರಿ ಗಾಯಕ್ವಾಡ್(3), ರಾಧಾ ಯಾದವ್(2) ಬಾಲಂಗೋಚಿಗಳಾದರು. ರೇಣುಕಾ ಸಿಂಗ್(2) ಅಜೇಯರಾಗಿ ಉಳಿದರು.

ಪಾಕಿಸ್ತಾನ ಪರ ​ನಶ್ರತ್ ಸನದ್ ಮೂರು ವಿಕೇಟ್​ ಪಡೆದು ಮಿಂಚಿದರು. ಸಾದಿಯಾ ಇಕ್ಬಾಲ್ ಮತ್ತು ನಿದಾ ದಾರ್ ತಲಾ ಎರಡು ವಿಕೆಟ್​ ಉರುಳಿಸಿದರು. ತೌಬಾ ಹಸನ್ ಮತ್ತು ಅಯ್ಮನ್ ಅನ್ವರ್ ಒಂದೊಂದು ವಿಕೆಟ್​ಗೆ ಪಡೆದುಕೊಂಡರು.

ನಿದರ್‌ ದಾರ್‌ ಅರ್ಧ ಶತಕ : ಇದಕ್ಕೂ ಮೊದಲು ಟಾಸ್​ಗೆದ್ದ ಬಿಸಾಮ್ಹ್ ಮಾರೂಫ್ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡು ಕಣಕ್ಕಿಳಿದರು. ನಿದಾ ದಾರ್‌ ಅವರ ಅರ್ಧ ಶತಕದ ನೆರವಿನಿಂದ ಪಾಕ್​ ವನಿತೆಯರು 6 ವಿಕೆಟ್​​​​ಗೆ 137ರನ್​ಗಳ ಗುರಿಯನ್ನು ಭಾರತಕ್ಕೆ ನೀಡಿದರು. ಬ್ಯಾಟಿಂಗ್​ನಲ್ಲಿ ಕೊಂಚ ಸುಧಾರಿಸಿಕೊಂಡಿರುವ ಪಾಕ್​ ಲೇಡಿಸ್​ ಗುರುವಾರ ಥಾಯ್ಲೆಂಡ್ ನೀಡಿದ್ದ ಆಘಾತದಿಂದ ಹೊರ ಬಂದರು.

ಆರಂಭಿಕ ವಿಫಲತೆ ಕಂಡರೂ ಮಧ್ಯಮ ಕ್ರಮಾಂಕ ಕೈ ಹಿಡಿದ ಕಾರಣ ಸಾಧಾರಣ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾದರು. ಅಮೀನ್​(17), ಮುನಿಬಾ ಅಲಿ(11), ಒಮೈಮಾ ಸುಹೇಲ್(0) ಬೇಗ ವಿಕೆಟ್​ ಒಪ್ಪಿಸಿದರು. ನಾಯಕಿ ಮಾರೂಫ್(32) ಮತ್ತು ನಿದಾ ದಾರ್​ಗೆ ಸಾಥ್​ ನೀಡಿದರು. ನಾಯಕಿಯ ವಿಕೆಟ್​ ನಂತರ ಪದ್ಯ ರೀಸ್(7)​ ಆಯಿಶಾ ನಸೀಮ್(9) ಬೇಗ ವಿಕೆಟ್​ ಕಳೆದುಕೊಂಡರು. ತಾಳ್ಮೆ ಮತ್ತು ನಿಧಾನ ಗತಿಯ ಆಟದಿಂದ ನಿದಾ ದಾರ್​ 5 ಬೌಡರಿ ಮತ್ತು 1 ಸಿಕ್ಸರ್​ನಿಂದ 56ರನ್​​ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.

ಭಾರತದ ಪರ ದೀಪ್ತಿ ಶರ್ಮಾ 3, ಪೂಜಾ ವಸ್ತ್ರಾಕರ್ 2, ರೇಣುಕಾ ಸಿಂಗ್​ 1 ವಿಕೆಟ್​ ಪಡೆದರು.

ಇದನ್ನೂ ಓದಿ : IND VS SA 1ST ODI...ಭಾರತದ ವಿರುದ್ಧ 9 ರನ್​ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.