ETV Bharat / sports

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ: ವೇದಾಗಿಲ್ಲ ಅವಕಾಶ, A ಗ್ರೇಡ್​ನಲ್ಲಿ ಸ್ಮೃತಿ - ಹರ್ಮನ್, Bಗೆ ಬಡ್ತಿಪಡೆದ ಶೆಫಾಲಿ - ಹರ್ಮನ್ ಪ್ರೀತ್ ಕೌರ್

ಎ ಗ್ರೇಡ್​ನಲ್ಲಿರುವವರಿಗೆ 50 ಲಕ್ಷರೂ, ಬಿ ಗ್ರೇಡ್​ನಲ್ಲಿರುವವರಿಗೆ 30 ಲಕ್ಷ ರೂ ಮತ್ತು ಸಿ ಗ್ರೇಡ್​ನಲ್ಲಿರುವವರಿಗೆ 10 ಲಕ್ಷ ರೂ ದೊರೆಯಲಿದೆ. ಒಟ್ಟು 19 ಆಟಗಾರ್ತಿಯರು ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.

ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ
ಮಹಿಳಾ ಕ್ರಿಕೆಟಿಗರ ವಾರ್ಷಿಕ ಗುತ್ತಿಗೆ
author img

By

Published : May 19, 2021, 10:46 PM IST

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2020-21ರ ಸೀನಿಯರ್ ಮಹಿಳಾ ಕ್ರಿಕೆಟರ್​ಗಳ ವಾರ್ಷಿಕ ಗುತ್ತಿಗೆಯನ್ನು ಪ್ರಕಟಿಸಿದೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಆಟಗಾರ್ತಿಯರ ಗುತ್ತಿಗೆಯಿಂದ ಹೊರಬಿದ್ದಿದ್ದಾರೆ. ಯುವ ಆಟಗಾರ್ತಿ ರಿಚಾ ಘೋಷ್​ ಇದೇ ಮೊದಲ ಬಾರಿಗೆ ಗುತ್ತಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಎ ಗ್ರೇಡ್​ನಲ್ಲಿರುವವರಿಗೆ 50 ಲಕ್ಷರೂ, ಬಿ ಗ್ರೇಡ್​ನಲ್ಲಿರುವವರಿಗೆ 30 ಲಕ್ಷ ರೂ ಮತ್ತು ಸಿ ಗ್ರೇಡ್​ನಲ್ಲಿರುವವರಿಗೆ 10 ಲಕ್ಷ ರೂ ದೊರೆಯಲಿದೆ. ಒಟ್ಟು 19 ಆಟಗಾರ್ತಿಯರು ಗುತ್ತಿಗೆಯಲ್ಲಿ ಅವಕಾಶ ಪಡೆದಿದ್ದಾರೆ.

ಟಿ-20 ತಂಡದ ನಾಯಕಿಹರ್ಮನ್ ಪ್ರೀತ್ ಕೌರ್, ಎಡಗೈ ಓಪನರ್ ಸ್ಮೃತಿ ಮಂಧಾನ ಮತ್ತು ​ಹಿರಿಯ ಸ್ಪಿನ್ನರ್ ಪೂನಮ್ ಯಾದವ್​ ಎ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಟೆಸ್ಟ್​ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್, ಅನುಭವಿ ಬೌಲರ್ ಜೂಲನ್ ಗೋಸ್ವಾಮಿ, ದೀಪ್ತಿ ಶರ್ಮಾ, ಪೂನಮ್ ರಾವುತ್, ರಾಜೇಶ್ವರಿ ಗಾಯಕ್ವಾಡ್, ಶೆಫಾಲಿ ವರ್ಮಾ, ರಾಧಾ ಯಾದವ್​, ಶಿಖಾ ಪಾಂಡೆ, ತಾನಿಯಾ ಭಾಟಿಯಾ ಮತ್ತು ಜಮಿಮಾ ರೋಡ್ರಿಗಸ್​ ಬಿ ಗ್ರೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾನ್ಸಿ ಜೋಶಿ, ಅರುಂಧತಿ ರೆಡ್ಡಿ , ಪೂಜಾ ವಸ್ತ್ರಾಕರ್, ಹರ್ಲೀನ್ ಡಿಯೋಲ್, ಪ್ರಿಯಾ ಪೂನಿಯಾ, ರಿಚಾ ಘೋಷ್​ ಸಿ ಗುಂಪಿನಲ್ಲಿದ್ದಾರೆ.

ಕೆಲವು ಪ್ರಸಿದ್ಧ ಆಟಗಾರ್ತಿಯರಾದ ವೇದಾ ಕೃಷ್ಣ ಮೂರ್ತಿ, ಏಕ್ತಾ ಬಿಷ್ತ್​, ಡಿ ಹೇಮಲತಾ ಮತ್ತು ಅಂಜು ಪಾಟೀಲ್ ಈ ವಾರ್ಷಿಕ ಗುತ್ತಿಗೆ ಕಳೆದುಕೊಂಡಿದ್ದಾರೆ. ಈ ಗುತ್ತಿಗೆಯ ಅವಧಿ ಅಕ್ಟೋಬರ್​ 2020ರಿಂದ ಸೆಪ್ಟೆಂಬರ್​ 2021ರವರೆಗಿರಲಿದೆ.

ಇದನ್ನು ಓದಿ:ಮಾಜಿ ಕ್ರಿಕೆಟರ್​ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂ. ನೀಡಿ ಹೃದಯ ವೈಶಾಲ್ಯತೆ ಮೆರೆದ ಕೊಹ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.