ETV Bharat / sports

IPL 2022: ಕೆಕೆಆರ್ ವಿರುದ್ಧ ಚೊಚ್ಚಲ ಜಯದ ನಿರೀಕ್ಷೆಯಲ್ಲಿ ಮುಂಬೈ ಇಂಡಿಯನ್ಸ್ - ರೋಹಿತ್ ಶರ್ಮಾ

ಮುಂಬೈ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವಿನ ಸನಿಹ ಇತ್ತಾದರೂ, ಡೆತ್​ ಓವರ್​ಗಳಲ್ಲಿ ಮೊನಚು ಕಳೆದುಕೊಂಡು ಸೋಲನುಭವಿಸಿತು. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜಾಸ್ ಬಟ್ಲರ್​​ ಅವರ ಅಬ್ಬರಕ್ಕೆ ಶರಣಾಗಿದ್ದಲ್ಲದೆ, ಬ್ಯಾಟಿಂಗ್​ನಲ್ಲೂ ವಿಫಲವಾಗಿ 23 ರನ್​ಗಳ ಸೋಲು ಕಂಡಿತು.

Mumbai Indians vs Kolkata knight Riders
Mumbai Indians vs Kolkata knight Riders
author img

By

Published : Apr 6, 2022, 3:29 PM IST

ಪುಣೆ (ಮಹಾರಾಷ್ಟ್ರ): 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ 15ನೇ ಆವೃತ್ತಿಯಲ್ಲಿ ಕೆಟ್ಟ ಆರಂಭ ಪಡೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ರೋಹಿತ್ ಪಡೆ ಇಂದು ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ.

ಮುಂಬೈ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವಿನ ಸನಿಹ ಇತ್ತಾದರೂ, ಡೆತ್​ ಓವರ್​ಗಳಲ್ಲಿ ಮೊನಚು ಕಳೆದುಕೊಂಡು ಸೋಲನುಭವಿಸಿತು. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಜಾಸ್ ಬಟ್ಲರ್​​ ಅವರ ಅಬ್ಬರಕ್ಕೆ ಶರಣಾಗಿದ್ದಲ್ಲದೆ, ಬ್ಯಾಟಿಂಗ್​ನಲ್ಲೂ ವಿಫಲವಾಗಿ 23 ರನ್​ಗಳ ಸೋಲು ಕಂಡಿತು.

ಇದೀಗ ಇಂದು ಬಲಿಷ್ಠ ಕೆಕೆಆರ್​ ವಿರುದ್ಧ ಮೊದಲ ಗೆಲುವಿಗಾಗಿ ಕಣಕ್ಕಿಳಿಯುತ್ತಿದೆ. ಈ ಪಂದ್ಯಕ್ಕೂ ಮುನ್ನ ಮುಂಬೈ ಕೆಲವು ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಆರಂಭಿಕ ಬ್ಯಾಟಿಂಗ್​ನಲ್ಲಿ ಇಶಾನ್ ಕಿಶನ್​, ಮಧ್ಯಮ ಕ್ರಮಾಂಕದಲ್ಲಿ ತಿಲಕ್​ ವರ್ಮಾ ಮಿಂಚುತ್ತಿದ್ದಾರೆ. ಆದರೆ ಪಂದ್ಯವನ್ನು ಫಿನಿಶ್ ಮಾಡುವುದರಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಎಡುವಿದೆ. ಕೀರನ್ ಪೊಲಾರ್ಡ್ ಮತ್ತು ಟಿಮ್ ಡೇವಿಡ್​ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಕೆಕೆಆರ್​ ವಿರುದ್ಧದ ಪಂದ್ಯ ಇವರಿಬ್ಬರಿಗೆ ಮತ್ತು ನಾಯಕ ರೋಹಿತ್​ಗೆ ಸಿಡಿಯಲು ಅದ್ಭುತ ಅವಕಾಶವಾಗಿದೆ.

ಬೌಲಿಂಗ್​ನಲ್ಲಿ ಕೂಡ ಜಸ್ಪ್ರೀತ್ ಬುಮ್ರಾ ಅವರಿಗೆ ಸರಿಯಾದ ಸಾಥ್ ಸಿಗುತ್ತಿಲ್ಲ. ತೈಮಲ್ಸ್​ ಮಿಲ್ಸ್ ಮತ್ತು ಬಾಸಿಲ್ ತಂಪಿ ಲೈನ್​ ಅಂಡ್​ ಲೆಂತ್​ನತ್ತ ಗಮನ ಹರಿಸಬೇಕಾಗಿದೆ. ಜೊತೆಗೆ ಮುರುಗನ್​ ಅಶ್ವಿನ್​ ಪಿಚ್​​ನ ನೆರವು ಪಡೆದು ತಂಡಕ್ಕೆ ನೆರವಾಗಬೇಕಾಗಿದೆ.

ಇತ್ತ ಕೆಕೆಆರ್​ ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು ಮತ್ತೊ ಒಂದು ಸೋಲು ಕಂಡಿದೆ. ಆರ್​ಸಿಬಿ ವಿರುದ್ಧ ಸೋಲು ಕಂಡರೆ, ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್​ಗಳ ಜಯ ಸಾಧಿಸಿದೆ. ಕಳೆದ ಪಂದ್ಯದಲ್ಲಿ ರಸೆಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿರುವುದು ತಂಡಕ್ಕೆ ಆನೆಬಲ ತಂದಿದೆ. ಉಮೇಶ್ ಯಾದವ್​, ಸೌಥಿ, ನರೇನ್ ಅಂತಹ ಅನುಭವಿಗಳ ಬೌಲಿಂಗ್ ಬಲ ತಂಡಕ್ಕಿದೆ. ಆದರೆ ಆರಂಭಿಕರ ಅಸ್ಥಿರತೆ ತಂಡದ ಪ್ರಮುಖ ವೈಫಲ್ಯವಾಗಿದೆ. ಈ ವಿಭಾಗವನ್ನು ಸರಿಪಡಿಸಿಕೊಂಡರೆ ಕೆಕೆಆರ್​ಗೆ ಮತ್ತೊಂದು ಗೆಲುವು ಅಸಾಧ್ಯವೇನಲ್ಲ.

ಮುಖಾಮುಖಿ: ಎರಡು ತಂಡಗಳು 29 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್​ 22-7ರಲ್ಲಿ ಮುನ್ನಡೆ ಪಡೆದುಕೊಂಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ : ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿ.ಕೀ), ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ / ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.

ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿ.ಕೀ), ಅನ್ಮೋಲ್‌ಪ್ರೀತ್ ಸಿಂಗ್ / ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸಾಮ್ಸ್, ಮುರುಗನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಟೈಮಲ್ ಮಿಲ್ಸ್, ಬಾಸಿಲ್ ಥಂಪಿ.

ಇದನ್ನೂ ಓದಿ:ಶಹಬಾಜ್ - ಕಾರ್ತಿಕ್ ಅಬ್ಬರ: ರಾಜಸ್ಥಾನ ರಾಯಲ್ಸ್ ಮಣಿಸಿದ ಆರ್​ಸಿಬಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.