ETV Bharat / sports

ಕೇನ್ ವಿಲಿಯಮ್ಸನ್ ಏಕದಿನ ವಿಶ್ವಕಪ್‌ನಲ್ಲೂ ಆಡುವುದು ಡೌಟ್‌! ನ್ಯೂಜಿಲೆಂಡ್‌ಗೆ ಆಘಾತ - ಗುಜರಾತ್ ಜೈಂಟ್ಸ್

ಐಪಿಎಲ್​ನ 16ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗಾಯಗೊಂಡಿರುವ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಏಕದಿನ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ.

williamson-to-undergo-surgery-likely-to-miss-odi-world-cup
ವಿಲಿಯಮ್ಸನ್ ಏಕದಿನ ವಿಶ್ವಕಪ್‌ನಿಂದ ಹೊರಗೆ
author img

By

Published : Apr 6, 2023, 8:15 PM IST

ವೆಲ್ಲಿಂಗ್ಟನ್: ಪ್ರಸಕ್ತ ಇಂಡಿಯನ್​ ಪ್ರೀಮಿಯರ್​ ಲೀಗ್​ನ(ಐಪಿಎಲ್) ಮೊದಲ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದಲೇ ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಹೊರಬಿದ್ದಿದ್ದಾರೆ. ಇದರ ನಡುವೆ ಇದೇ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಇದೆ. ಕಿವೀಸ್‌ ತಂಡಕ್ಕೆ ಕೇನ್​ ನಾಯಕನಾಗಿದ್ದು, ತಂಡಕ್ಕೆ ಆಘಾತ ಎದುರಾಗಿದೆ.

ಪ್ರಸಕ್ತ ಸಾಲಿನ ಐಪಿಎಲ್​ ಮೊದಲ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ತಂಡದ ಆಟಗಾರರಾದ ಮಿಲಿಯಮ್ಸನ್ ಗಾಯಗೊಂಡಿದ್ದರು.​ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಕ್ಯಾಚ್‌ಗೆ ಯತ್ನಿಸಿದಾಗ ಬಲ ಮೊಣಕಾಲಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿತ್ತು. ಇದರಿಂದ ಭಾರತದಿಂದ ತವರಿಗೆ ಮರಳಿದ್ದರು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ.

ಇದನ್ನೂ ಓದಿ: ಕೇನ್ ವಿಲಿಯಮ್ಸನ್ ಬದಲಿಗೆ ಗುಜರಾತ್​ ಸೇರಿದ ದಸುನ್ ಶನಕಾ

ನ್ಯೂಜಿಲೆಂಡ್ ಕ್ರಿಕೆಟ್ ಹೇಳಿಕೆಯ ಪ್ರಕಾರ, ಅಹಮದಾಬಾದ್‌ ಪಂದ್ಯದ ವೇಳೆ ವಿಲಿಯಮ್ಸನ್ ಮೊಣಕಾಲಿಗೆ ಗಾಯವಾಗಿದೆ. ಬಲ ಮೊಣಕಾಲಿನ ಮುಂಭಾಗದ ಕ್ರೂಸಿಯೇಟ್ ಲಿಗಮೆಂಟ್ (ACL) ಮುರಿದಿರುವುದು ಸ್ಕ್ಯಾನಿಂಗ್​ಗಳಿಂದ ದೃಢಪಟ್ಟಿದೆ. ಮುಂದಿನ ಮೂರು ವಾರಗಳಲ್ಲಿ ಬಲಗೈ ಬ್ಯಾಟರ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.

ಈ ಘಟನೆಯ ನಂತರ ಪ್ರತಿಕ್ರಿಯಿಸಿದ್ದ ವಿಲಿಯಮ್ಸನ್, ನನಗೆ ಕಳೆದ ಕೆಲವು ದಿನಗಳಿಂದ ಉತ್ತಮ ಬೆಂಬಲ ಸಿಗುತ್ತಿದೆ. ಅದಕ್ಕಾಗಿ ಗುಜರಾತ್ ಟೈಟಾನ್ಸ್ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಎರಡಕ್ಕೂ ಧನ್ಯವಾದ ಹೇಳ ಬಯಸುತ್ತೇನೆ. ಇಂತಹ ಗಾಯವನ್ನು ಹೊಂದುವುದು ಸಹಜವಾಗಿಯೇ ನಿರಾಶಾದಾಯಕವಾಗಿದೆ. ಆದರೆ, ಈಗ ನನ್ನ ಗಮನವು ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆ ಮೇಲೆ ಕೇಂದ್ರೀಕರಿಸಿದೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಸಾಧ್ಯವಾದಷ್ಟು ಬೇಗ ಮೈದಾನಕ್ಕೆ ಮರಳಲು ನಾನು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದರು.

ಫಿಟ್ ಆಗುವ ಸಾಧ್ಯತೆ ಇಲ್ಲ - ಕೋಚ್ ಸ್ಟೆಡ್: ಇದರ ನಡುವೆ ಅಂತಹ ಗಾಯದಿಂದ ವಿಲಿಯಮ್ಸನ್ ಬೇಗ ಫಿಟ್ ಆಗುವ ಮತ್ತು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಲಭ್ಯವಾಗುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ನ್ಯೂಜಿಲೆಂಡ್ ಕೋಚ್ ಸ್ಟೆಡ್ ಕೂಡ ವಿಲಿಯಮ್ಸನ್‌ ವಿಶ್ವಕಪ್‌ಗಿಂತ ಮೊದಲು ಫಿಟ್ ಆಗುವುದು ತುಂಬಾ ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೀವು ಪ್ರಾರಂಭದಲ್ಲಿ ಕೇನ್​ ಅವರನ್ನು ಒಬ್ಬ ಆಟಗಾರನಾಗಿ ನೋಡುತ್ತೀರಿ. ಆದರೆ, ಅವರು ನಾಯಕ ಮತ್ತು ಇಡೀ ನಮ್ಮ ತಂಡವನ್ನೇ ಆವರಿಸಿಕೊಂಡಿರುವ ವ್ಯಕ್ತಿ. ಅವರು ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆಯನ್ನು ನಾವು ಬಿಟ್ಟುಕೊಡಲ್ಲ. ಆದರೆ ಈ ಹಂತದಲ್ಲಿ ಅದು ಅಸಂಭವವೆಂದು ತೋರುತ್ತದೆ. ಇದು ಕೇನ್‌ಗೆ ಕಠಿಣ ಸಮಯವಾಗಿದೆ. ಇದು ಗಾಯವಲ್ಲ, ಅದು ಅವರಿಗಾದ ತುಂಬಾ ಬಲವಾಗಿ ಹೊಡೆತ ಎಂದು ಎಂದು ಸ್ಟೇಡ್ ಹೇಳಿದ್ದಾರೆ.

ಕೇನ್​ ಬಗ್ಗೆ...: ಕಳೆದ ಡಿಸೆಂಬರ್​ನಲ್ಲಿ ವಿಲಿಯಮ್ಸನ್ ಟೆಸ್ಟ್ ನಾಯಕತ್ವವನ್ನು ತ್ಯಜಿಸಿದ್ದರು. ಆದರೆ, ಸೀಮಿತ ಓವರ್‌ಗಳಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮುಂಬರುವ ಏಕದಿನ ವಿಶ್ವಕಪ್​ಗೂ ಅವರನ್ನೇ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಒಟ್ಟು 161 ಏಕದಿನ ಪಂದ್ಯಗಳನ್ನು ಆಡಿರುವ ವಿಲಿಯಮ್ಸನ್ 47.83 ರ ಸರಾಸರಿಯಲ್ಲಿ 6,554 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಗುಜರಾತ್​ ತಂಡದ ಕೇನ್​ ವಿಲಿಯಮ್ಸನ್​ ಐಪಿಎಲ್​ನಿಂದ ಔಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.