ETV Bharat / sports

ನ್ಯೂಜಿಲ್ಯಾಂಡ್​ ಟೆಸ್ಟ್ ನಾಯಕತ್ವ ತೊರೆದ ಕೇನ್​ ವಿಲಿಯಮ್ಸನ್​... ವೇಗಿ ಟಿಮ್​ ಸೌಥಿ ಹೊಸ ಸಾರಥಿ - cricketer Kane Williamson

ನ್ಯೂಜಿಲ್ಯಾಂಡ್​ ಟೆಸ್ಟ್ ತಂಡದ ನಾಯಕತ್ವದಿಂದ ಕೇನ್​ ವಿಲಿಯಮ್ಸನ್ ಹಿಂದೆ ಸರಿದಿದ್ದಾರೆ. ಕಿವೀಸ್​ ಹೊಸ ನಾಯಕನಾಗಿ ವೇಗಿ ಟಿಮ್​ ಸೌಥಿಗೆ ಹೊಣೆ ನೀಡಿದರೆ, ಉಪನಾಯಕನಾಗಿ ಟಾಮ್​ ಲಾಥಮ್​ ಇರಲಿದ್ದಾರೆ.

cricketer Kane Williamson
ನ್ಯೂಜಿಲ್ಯಾಂಡ್​ ಟೆಸ್ಟ್ ನಾಯಕತ್ವ ತೊರೆದ ಕೇನ್​ ವಿಲಿಯಮ್ಸನ್
author img

By

Published : Dec 15, 2022, 7:52 AM IST

ಆಕ್ಲೆಂಡ್(ನ್ಯೂಜಿಲೆಂಡ್): ನ್ಯೂಜಿಲ್ಯಾಂಡ್​ಗೆ ಟೆಸ್ಟ್​ ಚಾಂಪಿಯನ್​ಶಿಪ್​ ಪಟ್ಟ ಕಟ್ಟಿದ್ದ ಸವ್ಯಸಾಚಿ ಆಟಗಾರ ಕೇನ್ ವಿಲಿಯಮ್ಸನ್ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಮುಂದಿನ ನಾಯಕನನ್ನಾಗಿ ವೇಗಿ ಟಿಮ್ ಸೌಥಿಯನ್ನು ಕ್ರಿಕೆಟ್​ ಮಂಡಳಿ ನೇಮಿಸಿದೆ. ಏಕದಿನ ಮತ್ತು ಟಿ20 ನಾಯಕನಾಗಿ ವಿಲಿಯಮ್ಸನ್​ ಮುಂದುವರಿಯಲಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಸೆಮೀಸ್​ನಲ್ಲಿ ಕಿವೀಸ್​ ಸೋಲಿನ ಬಳಿಕ ವಿಲಿಯಮ್ಸನ್​ ನಾಯಕತ್ವ ಬದಲಾವಣೆ ಕೂಗು ಕೇಳಿಬಂದಿತ್ತು. ಆದರೆ, ಇದಕ್ಕೆ ಸೊಪ್ಪು ಹಾಕದ ಕೇನ್​, ಮೂರು ಸ್ವರೂಪದ ಕ್ರಿಕೆಟ್​ನಲ್ಲಿ ಆಡಲು ಬಯಸುತ್ತೇನೆ ಎಂದು ತಾವು ನಾಯಕತ್ವದಿಂದ ಹಿಂದೆ ಸರಿಯಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದರು.

ಕಿವೀಸ್​ನ ಯಶಸ್ವಿ ನಾಯಕ: ಮಾಜಿ ದಿಗ್ಗಜ ಆಟಗಾರ ಬ್ರೆಂಡನ್ ಮೆಕಲಮ್ 2016 ರಲ್ಲಿ ಟೆಸ್ಟ್​ ನಾಯಕತ್ವ ತೆರವು ಮಾಡಿದ ಬಳಿಕ ಜವಾಬ್ದಾರಿ ವಹಿಸಿಕೊಂಡಿದ್ದ ವಿಲಿಯಮ್ಸನ್ ಈವರೆಗೂ 38 ಪಂದ್ಯಗಳಲ್ಲಿ ಆಡಿದ್ದಾರೆ. ಇದರಲ್ಲಿ 22 ಗೆಲುವು, 8 ಡ್ರಾ, 10 ಸೋಲು ಕಂಡಿದ್ದಾರೆ. ಐಸಿಸಿಯ ಚೊಚ್ಚಲ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತವನ್ನು ಸೋಲಿಸಿ ತಂಡವನ್ನು ಚಾಂಪಿಯನ್​ ಮಾಡಿದ ಶ್ರೇಯ ಕೇನ್​ಗೆ ಸಲ್ಲುತ್ತದೆ. ಅಲ್ಲದೇ, ತಂಡವನ್ನು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್​ 1 ಸ್ಥಾನಕ್ಕೆ ತಂದು ಕೂರಿಸಿದ್ದು ಅವರ ಸಾಧನೆಯಾಗಿದೆ.

ಮುಂದಿನ ಏಕದಿನ ಮತ್ತು ಟಿ20 ವಿಶ್ವಕಪ್​ ಗುರಿಯಿಟ್ಟುಕೊಂಡು ಸೀಮಿತ ಓವರ್​ಗಳ ನಾಯಕತ್ವದಲ್ಲಿ ಮುಂದುವರಿಯಲು ಬಯಸಿದ್ದು, ಟೆಸ್ಟ್​ ತಂಡದ ನಾಯಕತ್ವವನ್ನು ತ್ಯಜಿಸುತ್ತಿದ್ದೇನೆ. ನಾಯಕತ್ವ ಹೆಚ್ಚಿನ ಜವಾಬ್ದಾರಿಯದ್ದಾಗಿದೆ. ಇದರಿಂದ ಹಿಂದೆ ಸರಿಯಲು ಇದೇ ಸೂಕ್ತ ಸಮಯ ಎಂದು ಭಾವಿಸಿರುವೆ. ಟೆಸ್ಟ್​ನಲ್ಲಿ ತಂಡ ಬಲಿಷ್ಠವಾಗಿದೆ. ಮುಂದಿನ ಚಾಂಪಿಯನ್​ಶಿಪ್ ​ಫೈನಲ್​ನಲ್ಲಿ ಭಾಗಿಯಾಗಲಿದೆ ಎಂದು ಕೇನ್​ ವಿಲಿಯಮ್ಸನ್​ ಹೇಳಿದರು.

​ಮುಂದಿನ ನಾಯಕನಾಗಿರುವ ಟಿಮ್​ ಸೌಥಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ. ನಾನು ಅವರೊಂದಿಗೆ ಬಹು ದಿನಗಳಿಂದ ಕ್ರಿಕೆಟ್​ ಆಡುತ್ತಿದ್ದೇನೆ. ನಮ್ಮ ತಂಡ ಮೂರು ಮಾದರಿಯಲ್ಲಿ ನಂಬರ್​ 1 ಆಗಬೇಕೆಂಬುದು ನನ್ನಾಸೆ. ಹೀಗಾಗಿ ನಾಯಕತ್ವದ ಜವಾಬ್ದಾರಿಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದರು.

ಟಿಮ್​ ಸೌಥಿ ನಾಯಕ, ಟಾಮ್​ ಲಾಥಮ್​ ಉಪನಾಯಕ: ನ್ಯೂಜಿಲ್ಯಾಂಡ್​ ಟೆಸ್ಟ್​ ತಂಡದ ನಾಯಕನಾಗಿ ವೇಗಿ ಟಿಮ್​ ಸೌಥಿ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಪಾಕಿಸ್ತಾನ ವಿರುದ್ಧ ಆರಂಭವಾಗಲಿರುವ ಸರಣಿಯಲ್ಲಿ ಸೌಥಿ ಹೊಸ ಹೊಣೆ ಹೊರಲಿದ್ದಾರೆ. ಇವರಿಗೆ ಸಾಥ್​ ನೀಡಲು ಆರಂಭಿಕ ಬ್ಯಾಟರ್​ ಟಾಮ್​ ಲಾಥಮ್​ರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಟಿಮ್​ ಸೌಥಿ ನ್ಯೂಜಿಲ್ಯಾಂಡ್​ನ 31ನೇ ನಾಯಕರಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.