ಮುಂಬೈ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿರುವ ಭಾರತದ ನಿವೃತ್ತ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ, ಶೇನ್ ವಾರ್ನ್ ಹೆಸರಲ್ಲಿ ತಮ್ಮ ಗಡ್ಡ ಬೋಳಿಸುವುದಾಗಿ ಎಎನ್ಐ ಸುದ್ದಿಸಂಸ್ಥೆ ಜೊತೆ ಶನಿವಾರ ನಡೆದ ಮಾತುಕತೆಯಲ್ಲಿ ಹೇಳಿದರು.
'ಶೇನ್ ವಾರ್ನ್ ಅವರಂಥ ಉತ್ತಮ ಕ್ರಿಕೆಟ್ ಆಟಗಾರನನ್ನು ಈ ರೀತಿಯಾಗಿ ಕಳೆದುಕೊಂಡಿರುವುದು ಬೇಸರದ ಸಂಗತಿ. ಅವರ ಅಗಲಿಕೆಯ ನೋವಿಗೆ ಭಾನುವಾರ ಅವರ ಹೆಸರಿನಲ್ಲಿ ನನ್ನ ಗಡ್ಡವನ್ನು ಶೇವ್ ಮಾಡುತ್ತೇನೆ. ಈ ಮೂಲಕ ಅವರ ಮೇಲಿನ ನನ್ನ ಅಭಿಮಾನ ಹಂಚಿಕೊಳ್ಳುತ್ತಿದ್ದೇನೆ' ಎಂದು ತಿಳಿಸಿದರು.
'ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕಾಗಿ ಆಟವಾಡಿದ್ದ ಸಂದರ್ಭದಲ್ಲಿ ಹಲವು ಆಟಗಾರರು ಅವರಿಂದ ಬಹಳಷ್ಟು ಕಲಿತಿದ್ದಾರೆ. ಅವರೊಬ್ಬ ಉತ್ತಮ ಆಟಗಾರ ಮಾತ್ರವಲ್ಲ, ಉತ್ತಮ ವ್ಯಕ್ತಿಯೂ ಹೌದು' ಎಂದು ಕಾಂಬ್ಳಿ ಭಾವುಕರಾದರು.