ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಭಾರತದಲ್ಲಿ ಕ್ರಿಕೆಟ್ಗೆ ವಿಶೇಷ ಮಾನ್ಯತೆ ಮತ್ತು ಅಭಿಮಾನಿಗಳ ಬಳಗ ಇದೆ. ಆದರೆ, ಇದು ಎಲ್ಲಾ ಕ್ರಿಕೆಟ್ಗೂ ದೊರೆಯುತ್ತಿಲ್ಲ ಎಂಬುದು ಸಹ ನಾವು ತಿಳಿದುಕೊಳ್ಳಬೇಕು. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ಗೂ ಮಾನ್ಯತೆ ದೊರೆಯುತ್ತಿದೆ. ಅಲ್ಲದೇ ಐಪಿಎಲ್ ರೀತಿ ಟಿ20 ಲೀಗ್ಗಳೂ ಬೇರೆ, ಬೇರೆ ದೇಶಗಳಲ್ಲಿ ಆಯೋಜನೆ ಮಾಡಲಾಗುತ್ತಿದೆ. ಅದೇ ರೀತಿ, ಅಂಧರ ಕ್ರಿಕೆಟ್ಗೂ ಇತ್ತೀಚೆಗೆ ಅವಕಾಶಗಳು ಸೃಷ್ಟಿಯಾಗುತ್ತಿದೆ. ಆದರೆ, ವಿಶೇಷ ಚೇತನರು ಸಹ ಕ್ರಿಕೆಟ್ನಲ್ಲಿ ಆಸಕ್ತಿ ಹೊಂದಿದ್ದು, ಅವರೂ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
ಭಾರತೀಯ ಕ್ರಿಕೆಟ್ ವಲಯಗಳಲ್ಲಿ, ಗಾಲಿಕುರ್ಚಿ ಕ್ರಿಕೆಟ್ ಕೂಡ ಪ್ರಸ್ತುತ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ರೂಪಿಸಲು ಪ್ರಯತ್ನಿಸುತ್ತಿದೆ. ವೀಲ್‌ಚೇರ್ ಕ್ರಿಕೆಟ್ ಸಾಮಾನ್ಯ ಕ್ರಿಕೆಟ್‌ನಂತೆಯೇ ಅದೇ ನಿಯಮಗಳನ್ನು ಅನುಸರಿಸುತ್ತದೆ ಆದರೂ, ಆಟಗಾರರು ಗಾಲಿಕುರ್ಚಿಗಳಿಗೆ ಸೀಮಿತರಾಗಿದ್ದಾರೆ ಮತ್ತು ಮೈದಾನವು 45 ರಿಂದ 55 ಮೀಟರ್ ಉದ್ದವಿರುತ್ತದೆ. ವ್ಹೀಲ್ ಚೇರ್ ಕ್ರಿಕೆಟ್ ಅಸೋಸಿಯೇಷನ್ ಜಮ್ಮು ಮತ್ತು ಕಾಶ್ಮೀರವು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ವಾರ್ಷಿಕವಾಗಿ ಸುಮಾರು 15 ವೀಲ್‌ಚೇರ್ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುತ್ತಿದೆ.
ಕಣಿವೆ ರಾಜ್ಯದಲ್ಲಿ ವ್ಹೀಲ್ ಚೇರ್ನಲ್ಲಿ ಕ್ರಿಕೆಟ್ ಆಡುವ ಆಸಕ್ತರ ಗುಂಪು ತಂಡ ಕಟ್ಟಿಕೊಂಡು ತಮ್ಮ ಉತ್ಸಾಹವನ್ನು ತೋರುತ್ತಿದ್ದಾರೆ. ನ್ಯೂನತೆಯಿಂದ ಇಂದ ನಮ್ಮಿಂದೇನೂ ಆಗದು ಎಂದು ಖಿನ್ನತೆಗೆ ಒಳಗಾಗಿರುವವರನ್ನು ಆಟೋಟದಲ್ಲಿ ಭಾಗವಹಿಸುವಂತೆ ಮಾಡಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
ಇಲ್ಲಿನ ಗಂದರ್‌ಬಾಲ್‌ನ ಆರಂಭಿಕ ಬ್ಯಾಟರ್ ಆದಿಲ್ ಶೇಖ್ ಈಟಿವಿ ಭಾರತದೊಂದಿಗೆ ಮಾತನಾಡಿದ್ದು,"ನಾವು ಎರಡು ಬಾರಿ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇವೆ. ನಾವು ಒಮ್ಮೆ ದೆಹಲಿಗೆ ಪ್ರಯಾಣಿಸಿ ಟ್ರೋಫಿಯನ್ನು ಗೆದ್ದಿದ್ದೇವೆ. ನಾವು 2021 ರಲ್ಲಿ ನಾವು ಗುಜರಾತ್‌ಗೆ ಪ್ರಯಾಣಿಸಿ ಇತರ ಎಂಟು ತಂಡಗಳನ್ನು ಮಣಿಸಿದಿದ್ದೆವು" ಎಂದಿದ್ದಾರೆ.
ಆಟಗಾರರಿಗೆ ನೀಡಲಾಗುವ ಸೌಕರ್ಯಗಳನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದರು,"ನಾವು ಕ್ರಿಕೆಟ್ ಆಡಲು ಇಷ್ಟಪಡುತ್ತೇವೆ, ಆದರೆ ನಾವು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸುತ್ತೇವೆ. ಆಡಳಿತವು ನಮಗೆ ಅಗತ್ಯವಿರುವಷ್ಟು ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸೌಲಭ್ಯ ಸಿಕ್ಕರೆ ಕಾಶ್ಮೀರ ಮತ್ತು ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸಬಹುದು" ಎಂದಿದ್ದಾರೆ.
"ನಮ್ಮಲ್ಲಿ ಕ್ರೀಡಾ ಗಾಲಿಕುರ್ಚಿ ಇಲ್ಲ, ಇದು ಫೀಲ್ಡಿಂಗ್ ಅನ್ನು ನಿಜವಾಗಿಯೂ ಸವಾಲಿನದ್ದಾಗಿದೆ. ಹಲವು ವ್ಯಕ್ತಿಗಳಿಂದ ನಮಗೆ ಗಾಲಿಕುರ್ಚಿಗಳನ್ನು ನೀಡುವ ಭರವಸೆ ಬಂದಿದೆ. ಆದರೆ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಅಗತ್ಯವಿರುವುದನ್ನು ಮಾಡಲು ನಾವು ಸರ್ಕಾರವನ್ನು ಕೋರುತ್ತೇವೆ. ಅಲ್ಲದೇ ಪಂದ್ಯಕ್ಕೆ ಅಭ್ಯಾಸ ಮಾಡಲು ಮತ್ತು ಪಂದ್ಯಗಳನ್ನು ಆಡಲು ಮೈದಾನದವನ್ನು ನೀಡುತ್ತಿಲ್ಲ. ಮೂರು ದಿನಕ್ಕೆ ಕೇಳಿದರೆ ಕೇವಲ ಒಂದು ದಿನಕ್ಕೆ ಕೊಡುತ್ತಾರೆ, ನಮ್ಮ ಸ್ವಂತ ಹಣದಿಂದ ನಾವು ಇಲ್ಲಿ ಆಡುತ್ತಿದ್ದೇವೆ" ಎಂದು ಅಳಲು ತೋಡಿಕೊಂಡರು.
ಸಾಮಾನ್ಯ ಕ್ರಿಕೆಟ್ಗೆ ಹೇಗೆ ಮಾನ್ಯತೆ ದೊರೆಯುತ್ತಿದೆಯೋ ಅದರ ಒಂದು ಭಾಗದಷ್ಟು ಈ ಆಟಗಾರರಿಗೆ ಬೆಂಬಲ ದೊರೆತರೆ, ವಿಶೇಷ ಚೇತನರ ವಿಭಾಗದಲ್ಲಿ ನಡೆಯುವ ಸ್ಪರ್ಧೇಯಲ್ಲಿ ಭಾರತಕ್ಕೆ ಆಟಗಾರರು ಹೆಸರು ತರುವುದರಲ್ಲಿ ಅನುಮಾನ ಇಲ್ಲ. ಅಗತ್ಯ ಸೌಕರ್ಯಗಳನ್ನು ಅದಕ್ಕೆ ಸಂಬಂಧಿಸಿದ ಇಲಾಖೆ ನೋಡಿಕೊಂಡರೆ ದೇಶದ ಹೆಸರನ್ನು ಈ ವಿಭಾಗದಲ್ಲೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ.
ಇದನ್ನೂ ಓದಿ: Asia Cup 2023: ಸೂಪರ್ ಫೋರ್ನಲ್ಲಿ ಬಾಂಗ್ಲಾಗೆ ಲಂಕಾ ಸವಾಲು.. ಟಾಸ್ ಗೆದ್ದ ಶಕೀಬ್ ಬೌಲಿಂಗ್ ಆಯ್ಕೆ