ಕ್ಯಾಂಡಿ (ಶ್ರೀಲಂಕಾ): ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಪತ್ರಿಕಾಗೋಷ್ಠಿ ನಡೆಸಿ ತಂಡದ 15 ಆಟಗಾರರನ್ನು ಘೋಷಿಸಿದರು. ಇದರಲ್ಲಿ 7 ಜನ ವಿಶ್ವಕಪ್ಗೆ ಮೊದಲಿಗರಾಗಿದ್ದಾರೆ.
-
Fit again KL Rahul named in India's strong squad for #CWC23 💪
— ICC (@ICC) September 5, 2023 " class="align-text-top noRightClick twitterSection" data="
More 👉 https://t.co/akl0gK26cO pic.twitter.com/IhP42KedyC
">Fit again KL Rahul named in India's strong squad for #CWC23 💪
— ICC (@ICC) September 5, 2023
More 👉 https://t.co/akl0gK26cO pic.twitter.com/IhP42KedyCFit again KL Rahul named in India's strong squad for #CWC23 💪
— ICC (@ICC) September 5, 2023
More 👉 https://t.co/akl0gK26cO pic.twitter.com/IhP42KedyC
ಏಷ್ಯಾಕಪ್ಗೆ ಆಯ್ಕೆ ಮಾಡಿರುವ ತಂಡದಲ್ಲೇ ಮೂವರನ್ನು ಕೈಬಿಡಲಾಗುವುದು ಎಂದು ಈ ಹಿಂದೆಯೇ ಹೇಳಲಾಗಿತ್ತು ಅದರಂತೆ ಸಂಜು ಸ್ಯಾಮ್ಸನ್, ಪ್ರಸಿದ್ಧ್ ಕೃಷ್ಣ ಮತ್ತು ಮಧ್ಯಮ ಕ್ರಮಾಂಕಕ್ಕೆ ಅಚ್ಚರಿಯ ಆಯ್ಕೆ ಆಗಿದ್ದ ತಿಲಕ್ ವರ್ಮಾ ಅವರನ್ನು ಕೈಬಿಡಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದ ಕೆಎಲ್ ರಾಹುಲ್ ಅವರನ್ನು ಪ್ರಥಮ ಆದ್ಯತೆಯ ವಿಕೆಟ್ ಕೀಪರ್ ಆಗಿ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
ಏಳು ಜನ ಹೊಸಬರು: 2019ರ ವಿಶ್ವಕಪ್ ತಂಡ ಮತ್ತು ಈ ತಂಡದಲ್ಲಿ 7 ಜನ ಬದಲಾಗಿದ್ದಾರೆ. ನಾಲ್ವರು ಮಾತ್ರ ಹಿಂದಿನ ವಿಶ್ವಕಪ್ನಲ್ಲಿ ಆಡಿದ ಆಟಗಾರು. 2019ರ ವಿಶ್ವಕಪ್ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆದಿತ್ತು. ಆ ತಂಡದಲ್ಲಿ ವಿಜಯ ಶಂಕರ್ ಅಚ್ಚರಿಯ ಆಯ್ಕೆ ಆಗಿದ್ದರು.ಅಲ್ಲದೇ ಪಂತ್ ಅವರನ್ನು ಕೈಬಿಟ್ಟಿದ್ದು ಸಹ ಅಚ್ಚರಿಯ ನಡೆ ಎಂಬಂತಿತ್ತು. ಅಂದು ಪಂತ್ ಅವರನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ಗೆ ಮಣೆ ಹಾಕಲಾಗಿತ್ತು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಅವಕಾಶ ಪಡೆದುಕೊಂಡಿದ್ದರು. ಮಧ್ಯಮ ಕ್ರಮಾಂಕದ ಚರ್ಚೆಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಮನೀಶ್ ಪಾಂಡೆ ಇದ್ದರು ಆದರೆ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.
-
BREAKING: India have named their #CWC19 squad! pic.twitter.com/mMXt5kAG6Y
— ICC Cricket World Cup (@cricketworldcup) April 15, 2019 " class="align-text-top noRightClick twitterSection" data="
">BREAKING: India have named their #CWC19 squad! pic.twitter.com/mMXt5kAG6Y
— ICC Cricket World Cup (@cricketworldcup) April 15, 2019BREAKING: India have named their #CWC19 squad! pic.twitter.com/mMXt5kAG6Y
— ICC Cricket World Cup (@cricketworldcup) April 15, 2019
2019 ವಿಶ್ವಕಪ್ ತಂಡ : ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆಎಲ್ ರಾಹುಲ್, ವಿಜಯ್ ಶಂಕರ್, ಎಂಎಸ್ ಧೋನಿ (ವಿಕೆಟ್ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಯುಜ್ವೇಂದ್ರ ಚಹಾಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ.
ಈ ಬಾರಿಯ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್ ಮತ್ತು ಕೆಎಲ್ ರಾಹುಲ್ 2019 ವಿಶ್ವಕಪ್ ತಂಡದಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಶಾರ್ದೂಲ್ ಠಾಕೂರ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಮಹಮ್ಮದ್ ಸಿರಾಜ್, ಸೂರ್ಯ ಕುಮಾರ್ ಯಾದವ್, ಇಶಾನ್ ಕಿಶನ್, ಶುಭಮನ್ ಗಿಲ್ ತಂಡಕ್ಕೆ ಹೊಸದಾಗಿ ಸೇರಿಕೊಂಡವರಾಗಿದ್ದಾರೆ.
ಅವಕಾಶ ಕಳೆದುಕೊಂಡ ಪಂತ್: 2019ರ ವಿಶ್ವಕಪ್ ವೇಳೆ ಸ್ಫೋಟಕ ಬ್ಯಾಟರ್ ಪಂತ್ ಆಯ್ಕೆಯ ಬಗ್ಗೆ ದಿಗ್ಗರು ಹೇಳಿದ್ದರು. ಯುವ ಆಟಗಾರ ಆಗಿದ್ದರಿಂದ ಅವರ ಬದಲಿಯಾಗಿ ಅನುಭವಿ ದಿನೇಶ್ ಕಾರ್ತಿಕ್ ಎರಡನೇ ಕೀಪರ್ ಆಗಿ ಆಯ್ಕೆ ಆಗುದ್ದರು. 2019ರ ವಿಶ್ವಕಪ್ನಲ್ಲಿ ಧೋನಿ ಫೂಲ್ ಟೈಮ್ ಕೀಪರ್ ಆಗಿದ್ದರು. ಕಳೆದ ವರ್ಷ ಡಿಸೆಂಬರ್ 30ರಂದು ಕಾರು ಅಪಘಾತದಲ್ಲಿ ಗಾಯಗೊಂಡ ಪಂತ್ ಈ ಬಾರಿಯ ವಿಶ್ವಕಪ್ನ ಅವಕಾಶವನ್ನು ಕಳೆದುಕೊಂಡಿದ್ದಾರೆ. ಇಲ್ಲದಿದ್ದಲ್ಲಿ ಭಾರತದ ವಿಕೆಟ್ ಕೀಪರ್ ಸ್ಥಾನಕ್ಕೆ ಪಂತ್ ಮುಂಚೂಣಿಯಲ್ಲಿದ್ದ ಆಟಗಾರ.
2019ರ ವಿಶ್ವಕಪ್ ತಂಡದಿಂದ ಪ್ರಮುಖವಾಗಿ ಆರಂಭಕ ಶಿಖರ್ ಧವನ್ ಅವಕಾಶ ಕಳೆದುಕೊಂಡಿದ್ದಾರೆ. ಅವರನ್ನು ಬಿಟ್ಟರೆ ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್ ಅವಕಾಶ ವಂಚಿತರಾಗಿದ್ದಾರೆ
2023 ವಿಶ್ವಕಪ್ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ (ಉಪನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್.
ಇದನ್ನೂ ಓದಿ: World Cup 2023: ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ.. ಕೆಎಲ್ ರಾಹುಲ್ಗೆ ಸ್ಥಾನ