ಫ್ಲೋರಿಡಾ (ಅಮೆರಿಕಾ): ಸರಣಿ ಸಮಬಲಕ್ಕಾಗಿ ಎದುರು ನೋಡುತ್ತಿರುವ ಭಾರತ ತಂಡ ಟಾಸ್ ಸೋತಿದ್ದು, ಮೊದಲು ಬೌಲಿಂಗ್ ಮಾಡಬೇಕಿದೆ. ವೆಸ್ಟ್ ಇಂಡೀಸ್ ಸಿರೀಸ್ ವಶಕ್ಕಾಗಿ ಒಂದು ಗೆಲುವನ್ನು ಎದುರು ನೋಡುತ್ತಿದೆ. ಭಾರತ ಮೂರನೇ ಪಂದ್ಯದ ತಂಡದಲ್ಲೇ ಮುಂದುವರೆದಿದೆ.
ವೆಸ್ಟ್ ಇಂಡೀಸ್ ತಂಡ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಜೇಸನ್ ಹೋಲ್ಡರ್, ಶಾಯ್ ಹೋಪ್ ಮತ್ತು ಓಡಿಯನ್ ಸ್ಮಿತ್ ತಂಡಕ್ಕೆ ಸೇರಿಕೊಂಡಿದ್ದಾರೆ. ಜಾನ್ಸನ್ ಚಾರ್ಲ್ಸ್ ಮತ್ತು ರೋಸ್ಟನ್ ಚೇಸ್ ತಂಡದಿಂದ ಹೊರಗುಳಿದ್ದಾರೆ.
ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಭಾರತ ಉತ್ತಮ ರೆಕಾರ್ಡ್ ಹೊಂದಿದೆ. ಇಲ್ಲಿ ಆಡಿದ ಆರು ಪಂದ್ಯದಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದರೆ, 1ರಲ್ಲಿ ಸೋತು ಒಂದು ರದ್ಧಾಗಿದೆ. ವೆಸ್ಟ್ ಇಂಡೀಸ್ ಇದೇ ಆಡಿರುವ ಒಟ್ಟಾರೆ 9 ಪಂದ್ಯದಲ್ಲಿ 3ರಲ್ಲಿ ಮಾತ್ರ ಗೆಲುವು ಕಂಡಿದೆ.
-
🚨 Toss Update 🚨
— BCCI (@BCCI) August 12, 2023 " class="align-text-top noRightClick twitterSection" data="
West Indies win the toss and elect to bat first.
Follow the match - https://t.co/kOE4w9V1l0#WIvIND pic.twitter.com/gXVJgD5Rji
">🚨 Toss Update 🚨
— BCCI (@BCCI) August 12, 2023
West Indies win the toss and elect to bat first.
Follow the match - https://t.co/kOE4w9V1l0#WIvIND pic.twitter.com/gXVJgD5Rji🚨 Toss Update 🚨
— BCCI (@BCCI) August 12, 2023
West Indies win the toss and elect to bat first.
Follow the match - https://t.co/kOE4w9V1l0#WIvIND pic.twitter.com/gXVJgD5Rji
ಪಿಚ್ ಹೇಗಿದೆ?: ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಸುಲಭ ಎಂದು ಹೇಳಲಾಗುತ್ತದೆ. ಈ ಮೈದಾನದಲ್ಲಿ ಆಡಿದ ಕಳೆದ ನಾಲ್ಕು ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ನಲ್ಲಿ 170ಕ್ಕೂ ಹೆಚ್ಚು ರನ್‌ಗಳ ಸ್ಕೋರ್ ಕಂಡಿದೆ. 2022ರಲ್ಲಿ ಇದೇ ಮೈದಾನದಲ್ಲಿ ಕೊನೆಯ ಬಾರಿಗೆ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾದಾಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 188 ರನ್ ಗಳಿಸಿ ವೆಸ್ಟ್ ಇಂಡೀಸ್ ಅನ್ನು 100 ರನ್‌ಗಳಿಗೆ ಆಲೌಟ್ ಮಾಡಿತ್ತು.
ಎರಡನೇ ಇನ್ನಿಂಗ್ಸ್ ಮಾಡುವವರಿಗೆ ಈ ಪಿಚ್ ಹೆಚ್ಚು ಕಠಿಣವಾಗಿರಲಿದೆ. ಹೀಗಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ರನ್ ಕಡಿವಾಣ ಹಾಕುವ ಅಗತ್ಯವಿದೆ. ಆದರೆ ಪಿಚ್ ವರದಿಯ ಪ್ರಕಾರ ಬ್ಯಾಟರ್ಗಳಿಗೆ ಸಹಕಾರಿಯಾಗುವಂತೆ ಕಂಡು ಬರುತ್ತಿದ್ದು, ಬೌಲರ್ಗಳಿಗೆ ಪಂದ್ಯ ಚಾಲೆಂಜಿಂಗ್ ಆಗಿರಲಿದೆ.
-
A look at #TeamIndia's Playing XI for the 4th #WIvIND T20I 👌
— BCCI (@BCCI) August 12, 2023 " class="align-text-top noRightClick twitterSection" data="
Follow the match 👇
">A look at #TeamIndia's Playing XI for the 4th #WIvIND T20I 👌
— BCCI (@BCCI) August 12, 2023
Follow the match 👇A look at #TeamIndia's Playing XI for the 4th #WIvIND T20I 👌
— BCCI (@BCCI) August 12, 2023
Follow the match 👇
ತಂಡ ಇಂತಿದೆ.. ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ಒಬೆಡ್ ಮೆಕಾಯ್
ಭಾರತ: ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್
ಇದನ್ನೂ ಓದಿ: IND vs WI, 4th T20: ನಾಳೆ ಭಾರತ-ವಿಂಡೀಸ್ 4ನೇ ಟಿ-20; ಉಭಯ ತಂಡಗಳಿಂದ ಭಾರಿ ಪೈಪೋಟಿ ನಿರೀಕ್ಷೆ