ಗಯಾನಾ (ವೆಸ್ಟ್ ಇಂಡೀಸ್) : ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋವ್‌ಮನ್ ಪೊವೆಲ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಪ್ರಾವಿಡೆನ್ಸ್ ಸ್ಟೇಡಿಯಂ ಸರಣಿಯ ಎರಡನೇ ಪಂದ್ಯ ನಡೆಯುತ್ತಿದೆ. ಕಳೆದ ಪಂದ್ಯ ಇದೇ ಮೈದಾನದಲ್ಲಿ ನಡೆದಿತ್ತು.
ಭಾರತಕ್ಕೆ ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಂಡಿದ್ದು, ಯಶಸ್ವಿ ಜೈಸ್ವಾಲ್ ಪಾದಾರ್ಪಣೆ ಮಾಡುತ್ತಿದ್ದಾರೆ. ಕಳೆದ ಪಂದ್ಯದ ವೇಳೆ ಗಾಯಕ್ಕೆ ಒಳಗಾಗಿದ್ದ ಕುಲದೀಪ್ ಯಾದವ್ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಇಶಾನ್ ಕಿಶನ್ ಮತ್ತು ರವಿ ಬಿಷ್ಣೋಯ್ ಬೆಂಚ್ಗೆ ಮರಳಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ಹೋಲ್ಡರ್ ಗಾಯಗೊಂಡಿದ್ದರಿಂದ ಅವರ ಬದಲಾಗಿ ರೋಸ್ಟನ್ ಚೇಸ್ ಆಡಲಿದ್ದಾರೆ.
-
West Indies have won the toss and elect to bat first in the third T20I.
— BCCI (@BCCI) August 8, 2023 " class="align-text-top noRightClick twitterSection" data="
Live - https://t.co/GxrXmVGlOm… #WIvIND pic.twitter.com/qJbiZ05qwH
">West Indies have won the toss and elect to bat first in the third T20I.
— BCCI (@BCCI) August 8, 2023
Live - https://t.co/GxrXmVGlOm… #WIvIND pic.twitter.com/qJbiZ05qwHWest Indies have won the toss and elect to bat first in the third T20I.
— BCCI (@BCCI) August 8, 2023
Live - https://t.co/GxrXmVGlOm… #WIvIND pic.twitter.com/qJbiZ05qwH
ಯಶಸ್ವಿ ಜೈಸ್ವಾಲ್ ಪಾದಾರ್ಪಣೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದ್ದರು. ಇದರಿಂದ ವೆಸ್ಟ್ ಇಂಡೀಸ್ ಪ್ರವಾಸದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡರು. ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ ಜೈಸ್ವಾಲ್ ಎರಡು ಪಂದ್ಯದ ಮೂರು ಇನ್ನಿಂಗ್ಸ್ನಿಂದ 1 ಶತಕ ಮತ್ತು ಅರ್ಧಶತಕದಿಂದ 88.67ರ ಸರಾಸರಿಯಲ್ಲಿ 266 ರನ್ ಗಳಿಸಿದ್ದಾರೆ.
-
Yashasvi Jaiswal is all set to make his T20I debut for #TeamIndia 👏👏#WIvIND pic.twitter.com/DelBM9ycqL
— BCCI (@BCCI) August 8, 2023 " class="align-text-top noRightClick twitterSection" data="
">Yashasvi Jaiswal is all set to make his T20I debut for #TeamIndia 👏👏#WIvIND pic.twitter.com/DelBM9ycqL
— BCCI (@BCCI) August 8, 2023Yashasvi Jaiswal is all set to make his T20I debut for #TeamIndia 👏👏#WIvIND pic.twitter.com/DelBM9ycqL
— BCCI (@BCCI) August 8, 2023
ಪಿಚ್ : ಎರಡನೇ ಪಂದ್ಯದಲ್ಲಿ ಆಡಿದ ಪಿಚ್ನಲ್ಲೇ ಇಂದೂ ಆಡುತ್ತಿದ್ದು, ಬ್ಯಾಟಿಂಗ್ಗೆ ಕಠಿಣವಾಗಿರಲಿದೆ. ಕಳೆದ ಪಂದ್ಯದಲ್ಲಿ 9 ವಿಕೆಟ್ ವೇಗಿಗಳು ಮತ್ತು ನಾಲ್ಕು ವಿಕೆಟ್ ಸ್ಪಿನ್ನರ್ಗಳು ಪಡೆದುಕೊಂಡಿದ್ದಾರೆ.
ಎರಡು ಪಂದ್ಯಗಳನ್ನು ಸೋತಿದೆ ಭಾರತ: ಟ್ರಿನಿಡಾಡ್ನ ಬ್ರಿಯಾನ್ ಲಾರಾ ಮೈದಾನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ನಾಲ್ಕು ರನ್ನಿಂದ ಸೋಲು ಕಂಡಿತ್ತು. ಎರಡನೇ ಪಂದ್ಯವನ್ನು ಇದೇ ಮೈದಾನದಲ್ಲಿ ಆಡಿದ ಟೀಮ್ ಇಂಡಿಯಾ ವಿಂಡೀಸ್ಗೆ 153 ರನ್ನ ಸಾಮಾನ್ಯ ಗುರಿಯನ್ನು ನೀಡಿತ್ತು. ಇದನ್ನು ಪೊವೆಲ್ ತಂಡ ಒಂದು ಓವರ್ ಹಾಗೂ ಎರಡು ವಿಕೆಟ್ ಉಳಿಸಿಕೊಂಡು ಗೆದ್ದಿತ್ತು. ಐದು ಟಿ20 ಪಂದ್ಯಗಳ ಎರಡನ್ನು ಕಳೆದುಕೊಂಡಿರುವ ಭಾರತ ಇಂದು ಸೋಲು ಕಂಡಲ್ಲಿ ಸರಣಿ ಕಳೆದುಕೊಳ್ಳಲಿದೆ.
-
A look at our Playing XI for the game.
— BCCI (@BCCI) August 8, 2023 " class="align-text-top noRightClick twitterSection" data="
Yashasvi Jaiswal comes in for Ishan Kishan and Kuldeep Yadav replaces Ravi Bishnoi in the XI.
Live - https://t.co/GxrXmVGlOm…… #WIvIND pic.twitter.com/5k1bDBlXqj
">A look at our Playing XI for the game.
— BCCI (@BCCI) August 8, 2023
Yashasvi Jaiswal comes in for Ishan Kishan and Kuldeep Yadav replaces Ravi Bishnoi in the XI.
Live - https://t.co/GxrXmVGlOm…… #WIvIND pic.twitter.com/5k1bDBlXqjA look at our Playing XI for the game.
— BCCI (@BCCI) August 8, 2023
Yashasvi Jaiswal comes in for Ishan Kishan and Kuldeep Yadav replaces Ravi Bishnoi in the XI.
Live - https://t.co/GxrXmVGlOm…… #WIvIND pic.twitter.com/5k1bDBlXqj
ತಂಡಗಳು ಇಂತಿವೆ: ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ರೋಸ್ಟನ್ ಚೇಸ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಭಾರತ: ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ(ನಾಯಕ), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್, ಮುಖೇಶ್ ಕುಮಾರ್
ಇದನ್ನೂ ಓದಿ: IND vs WI 3rd T20: ಕಿಶನ್ಗೆ ವಿಶ್ರಾಂತಿ ಕೊಟ್ಟು ಜೈಸ್ವಾಲ್ಗೆ ಅವಕಾಶ ನೀಡಿ: ವಾಸಿಂ ಜಾಫರ್